ವಿಪಕ್ಷ ಇರಬಾರದೆಂಬುದು ಬಿಜೆಪಿಯ ಅಜೆಂಡಾ

| Published : Apr 23 2024, 12:53 AM IST

ಸಾರಾಂಶ

ದೇಶದಲ್ಲಿ ವಿರೋಧ ಪಕ್ಷ ಇರಬಾರದು ಎಂಬುವುದು ಬಿಜೆಪಿ ಅಜೆಂಡಾ ಆಗಿದೆ. ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೇ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲ ಆಗಲಿದೆ. ಆದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಲ್‌. ಹನುಮಂತಯ್ಯ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿದೇಶದಲ್ಲಿ ವಿರೋಧ ಪಕ್ಷ ಇರಬಾರದು ಎಂಬುವುದು ಬಿಜೆಪಿ ಅಜೆಂಡಾ ಆಗಿದೆ. ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೇ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲ ಆಗಲಿದೆ. ಆದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಲ್‌. ಹನುಮಂತಯ್ಯ ಮನವಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಿಪಕ್ಷ ಇರಬಾರದೆಂಬ ಕಾರಣಕ್ಕೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕರನ್ನು ಬಿಜೆಪಿ ಟಾರ್ಗೆಟ್‌ ಮಾಡಿದೆ. ಹೀಗಾಗಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳು ಜನರನ್ನು ಸೋಮಾರಿಯಾಗಿಸುತ್ತಿವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಈ ಗ್ಯಾರಂಟಿಗಳಿಂದ ರಾಜ್ಯದ ಜನತೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಅವರು ಶ್ರೀಮಂತ ಪರವಾಗಿದ್ದಾರೆ. ಹೀಗಾಗಿ ಬಡವರ ಕಾಳಜಿ ಇಲ್ಲ. ಶ್ರೀಮಂತ ಹಾಗೂ ದೊಡ್ಡ ಕಂಪನಿಗಳ ₹10 ಲಕ್ಷ ಕೋಟಿ ಮನ್ನಾ ಮಾಡಿದೆ. ಆದರೆ, ಅನ್ನದಾತರ ನಯಾ ಪೈಸೆ ಹಣವನ್ನು ಮೋದಿ ಸರ್ಕಾರ ಮನ್ನಾ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಕಸಿತ ಭಾರತ ಶ್ರೀಮಂತರ ಪರ ಇದೆ. ಬಡವರ ಪರ ಸರ್ಕಾರ ಅಲ್ಲ ಎಂದ ಅವರು, ಮೋದಿ ಸರ್ಕಾರ ಬದಲಾಯಿಸಬೇಕಿದೆ. ದೇಶದಲ್ಲಿ ಹೊಸ ಬದಲಾವಣೆ ತರಬೇಕಿದೆ. ಯುವಕರಿಗೆ ಪ್ರೋತ್ಸಾಹ ನೀಡಬೇಕಿದ್ದ ಕೇಂದ್ರ ಉದ್ಯೋಗ ನೀಡದೆ ಬೀದಿಗೆ ತರುತ್ತಿದೆ. ದೇಶದಲ್ಲಿ ರೈತರ ಸಾವಿನ ಬಗ್ಗೆ ಕೇಂದ್ರ ಧ್ವನಿ ಎತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಡಾ. ಸ್ವಾಮಿನಾಥನ್‌ ವರದಿ ಜಾರಿಗೆ ತಂದು ರೈತರಿಗೆ ಬೆಂಬಲ ಬೆಲೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರೇತರ ಸಂಸ್ಥೆ ಅಧಿಕಾರಿಗಳನ್ನು ಮೋದಿ ಸರ್ಕಾರ ಕೈಗೊಂಬೆ ಮಾಡಿಕೊಂಡಿದೆ. ಐಟಿ, ಇಡಿ ದಾಳಿ ಮಾಡಲಾದ ಹಣವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಇದು ಬಿಜೆಪಿ ದೊಡ್ಡ ಹಗರಣ. ಆದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿನಂತಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಗೋವಿಂದ, , ಆದರ್ಶ, ಯಲ್ಲಪ್ಪಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.