ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್.) ಎಂಬುದು ದಲಿತರು,ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸಂವಿಧಾನದತ್ತವಾಗಿ ಪಡೆದಿರುವ ಮತದಾನದ ಹಕ್ಕನ್ನು ಕಸಿಯುವ ಬಿಜೆಪಿಯ ಕುತಂತ್ರವಾಗಿದ್ದು, ಇದನ್ನುಎಲ್ಲರೂ ಒಗ್ಗೂಡಿ, ಹಿಮ್ಮೆಟ್ಟಿಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರುಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್.) ಎಂಬುದು ದಲಿತರು,ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸಂವಿಧಾನದತ್ತವಾಗಿ ಪಡೆದಿರುವ ಮತದಾನದ ಹಕ್ಕನ್ನು ಕಸಿಯುವ ಬಿಜೆಪಿಯ ಕುತಂತ್ರವಾಗಿದ್ದು, ಇದನ್ನುಎಲ್ಲರೂ ಒಗ್ಗೂಡಿ, ಹಿಮ್ಮೆಟ್ಟಿಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.ನಗರದ ಮದರ್ ಷಾ ಷಾದಿ ಮಹಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ನ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ 1 ಮತ್ತು 2 ರ ಬಿ.ಎಲ್.ಎ-2 ಗಳಿಗೆ ಹಮ್ಮಿಕೊಂಡಿದ್ದ ಎಸ್.ಐ.ಆರ್. ಕುರಿತ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮುಂದಿನ ಐವತ್ತು ವರ್ಷಗಳ ಕಾಲ ಈ ದೇಶದಲ್ಲಿ ನಾವೇ ಅಧಿಕಾರದಲ್ಲಿ ಇರಬೇಕೆಂಬ ದುರಾಸೆಯಿಂದ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಕ ಮತದಾರರಾದ ದಲಿತರು, ಹಿಂದುಳಿದವರು,ಅಲ್ಪಸಂಖ್ಯಾತರು ಮತ್ತು ಜಾತ್ಯತೀತರು, ಪ್ರಜಾಪ್ರಭುತ್ವವಾದಿಗಳ ಮತಗಳನ್ನು ಮತದಾರರ ಪಟ್ಟಿಯಿಂದಲೇ ಕೈಬಿಡುವ ಕೆಲಸವನ್ನು ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೂಲಕವೇ ಮಾಡಿಸಲು ಹೊರಟಿದೆ. ಇದುವರೆಗೆ ಸುಮಾರು 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್.ಐ.ಆರ್. ಪ್ರಕ್ರಿಯೆಯ ಮೂಲಕವೇ ಸುಮಾರು 6.50 ಕೋಟಿ ಮತದಾರರನ್ನುಕೈಬಿಟ್ಟು ಗೆಲುವುದು ಕಷ್ಟ ಅನ್ನುವಂತಹ ಪರಿಸ್ಥಿತಿ ಇದ್ದ ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಗೆಲುವು ಸಾಧಿಸಿದೆ. ಅವರ ಮುಂದಿನ ಟಾರ್ಗೆಟ್ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕವಾಗಿದೆ. ಹಾಗಾಗಿ ಕನ್ನಡಿಗರು ಎಚ್ಚೆತ್ತುಕೊಂಡು,ಈ ಷಡ್ಯಂತ್ರದ ವಿರುದ್ದ ಪ್ರತಿತಂತ್ರ ರೂಪಿಸಬೇಕಾಗಿದೆ ಎಂದರು. ಕೆಪಿಸಿಸಿಯ ಎಸ್.ಐ.ಆರ್. ಪ್ರಕ್ರಿಯೆ ಉಸ್ತುವಾರಿ ಜಿ.ಮಂಜುನಾಥ್ ಮಾತನಾಡಿ, ಐಟಿ, ಇಡಿ, ಸಿಬಿಐ ಮೂಲಕ ಅಧಿಕಾರ ಹಿಡಿಯುವುದು ಕಷ್ಟವೆಂದು ಕಂಡ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಎಸ್.ಐ.ಆರ್. ಮೂಲಕ ಅಧಿಕಾರದಲ್ಲಿ ಮುಂದುವರೆಯಲು ಪ್ರಯತ್ನಿಸುತ್ತಿದೆ.ಅವರ ಗುರಿ ಕಾಂಗ್ರೆಸ್ ಪರವಾಗಿರುವ ಮತದಾರರನ್ನು ಪಟ್ಟಿಯಿಂದ ಕೈಬಿಡುವುದೇ ಆಗಿದೆ. ಇದಕ್ಕೆತಾಜಾ ಉದಾಹರಣೆ ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ. ಕರ್ನಾಟಕದಲ್ಲಿಯೂ ಸುಮಾರು 95 ಕ್ಷೇತ್ರಗಳನ್ನು ಎಸ್.ಐ.ಆರ್.ಮೂಲಕ ತಮ್ಮ ಪಕ್ಷದ ಪರ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದೆ. ಒಂದು ವೇಳೆ ಬಿಜೆಪಿಯ ಹುನ್ನಾರಕೈಗೂಡಿದರೆ ಮುಂದಿನ ೫೦ ವರ್ಷಗಳ ಕಾಲ ಬೇರೆ ಪಕ್ಷಗಳಿಗೆ ಯಾವ ಅಧಿಕಾರವೂ ಇರುವುದಿಲ್ಲ. ಹಾಗಾಗಿ ಕೇರಳ ರೀತಿಯಲ್ಲಿ ನಾವುಗಳು ಸಹ ಎಚ್ಚೆತ್ತು ಕೆಲಸ ನಿರ್ವಹಿಸಬೇಕಾಗಿದೆ ಎಂದರು.ಜಾಗೃತ ಕರ್ನಾಟಕದ ಆದಂಖಾನ್ ಮಾತನಾಡಿದರು. , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ, ಹಿರಿಯರಾದರೇವಣ್ಣ ಸಿದ್ದಯ್ಯ,ನಜಾಯ್, ಅಸ್ಲಾಂಪಾಷ, ನಾಗಮಣಿ ಸೇರಿದಂತೆ ಹಲವರು ಎಸ್.ಐ.ಆರ್. ಕುರಿತು ಮಾತನಾಡಿದರು. ವೇದಿಕೆಯಲ್ಲಿ ಇರ್ಫಾನ್‌ಅಹಮದ್, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫಯಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತ, ಗುರುಪ್ರಸಾದ್, ಪಾಲಿಕೆ ಮಾಜಿ ಸದಸ್ಯರಾದಜಿಯಾವುಲ್ಲಾ, ಇನಾಯಕ್ ಸೇರಿದಂತೆ,ನಗರ ಬ್ಲಾಕ್ 1-೨ರ ಬಿಎಲ್‌ಎ -2 ಗಳು ಭಾಗವಹಿಸಿದ್ದರು.