ಸಾರಾಂಶ
ಬೆಂಗಳೂರು : ಬೆಲೆ ಏರಿಕೆ ಸೇರಿ ರಾಜ್ಯ ಸರ್ಕಾರದ ಹಲವು ನಡೆಗಳ ವಿರುದ್ಧ ಪ್ರತಿಪಕ್ಷ ಬಿಜೆಪಿ ನಡೆಸುತ್ತಿರುವ ‘ಜನಾಕ್ರೋಶ ಯಾತ್ರೆ’ಯ ಸಮಾರೋಪ ಇದೇ ತಿಂಗಳ 11ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ.
ಅಂದು ಸಂಜೆ 4ಕ್ಕೆ ಸಮಾರೋಪ ನಡೆಸಲು ನಿರ್ಧರಿಸಲಾಗಿದ್ದು, ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ಬಗ್ಗೆ ಚರ್ಚೆ ನಡೆದಿದೆ. ರಾಷ್ಟ್ರೀಯ ಘಟಕದೊಂದಿಗೆ ಚರ್ಚಿಸಿ ಇನ್ನೆರಡು ಅಥವಾ ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಈ ತಿಂಗಳ 7ರಿಂದ 10ರವರೆಗೆ ವಿವಿಧ ಜಿಲ್ಲೆಗಳಲ್ಲಿ ಜನಾಕ್ರೋಶ ಯಾತ್ರೆ ಮುಂದುವರೆಯಲಿದೆ. 7ರಂದು ಕೋಲಾರ, 8ರಂದು ತುಮಕೂರು ಮತ್ತು ಚಿತ್ರದುರ್ಗ, 9ರಂದು ಬಳ್ಳಾರಿ ಹಾಗೂ ವಿಜಯನಗರ, 10ರಂದು ಚಿಕ್ಕಬಳ್ಳಾಪುರದಲ್ಲಿ ಯಾತ್ರೆ ನಡೆಯಲಿದೆ.
ಬೆಂಗಳೂರಲ್ಲಿ ಯಾತ್ರೆ ಇಲ್ಲ:
ಈ ಮೊದಲು ಬೆಂಗಳೂರಿನಲ್ಲಿ ಜನಾಕ್ರೋಶ ಯಾತ್ರೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಬೆಂಗಳೂರಿನಲ್ಲಿ ಯಾತ್ರೆ ಬದಲು ಬೇರೊಂದು ರೀತಿಯ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
- ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ಬಗ್ಗೆ ರಾಷ್ಟ್ರೀಯ ಘಟಕದೊಂದಿಗೆ ಚರ್ಚಿಸಿ 2-3 ದಿನದಲ್ಲಿ ನಿರ್ಧಾರ: ಮೂಲಗಳು- ಮೇ 7ರಿಂದ 10ರವರೆಗೆ ವಿವಿಧ ಜಿಲ್ಲೆಗಳಲ್ಲಿ ಜನಾಕ್ರೋಶ ಯಾತ್ರೆ.
- 7ರಂದು ಕೋಲಾರ, 8ರಂದು ತುಮಕೂರು ಮತ್ತು ಚಿತ್ರದುರ್ಗ, 9ರಂದು ಬಳ್ಳಾರಿ ಹಾಗೂ ವಿಜಯನಗರ, 10ರಂದು ಚಿಕ್ಕಬಳ್ಳಾಪುರದಲ್ಲಿ ಯಾತ್ರೆ.