ಬಿಜೆಪಿಯಿಂದ ಮಳೆಯಲ್ಲೇ ತಿರಂಗಾ ಯಾತ್ರೆ

| Published : May 22 2025, 01:22 AM IST

ಸಾರಾಂಶ

ಮಳೆ ಲೆಕ್ಕಿಸದೇ ಶಾಸಕರು ಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಗೆ ಜಾಂಜ್‌ಮೇಳ ವಿ‍ಶೇಷ ಕಳೆ ತಂದಿತ್ತು.

ಹುಬ್ಬಳ್ಳಿ: ಆಪರೇಶನ್‌ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶದ ಸೈನಿಕರ ಪರಾಕ್ರಮ, ತ್ಯಾಗ ಹಾಗೂ ಬಲಿದಾನ ಗೌರವಿಸುವ ಉದ್ದೇಶದಿಂದ ಬಿಜೆಪಿಯ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಮತ್ತು ಪೂರ್ವ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ತಿರಂಗಾ ಯಾತ್ರೆ ಮಳೆಯಲ್ಲೇ ನಡೆಯಿತು.

ಬುಧವಾರ ಸಂಜೆ ವಿದ್ಯಾನಗರದ ಶಿರೂರ ಸರ್ಕಲ್‌ ಬಳಿ ಶಾಸಕ ಮಹೇಶ ಟೆಂಗಿನಕಾಯಿ ಯಾತ್ರೆಗೆ ಚಾಲನೆ ನೀಡಿದರು.

ಮಳೆ ಲೆಕ್ಕಿಸದೇ ಶಾಸಕರು ಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಗೆ ಜಾಂಜ್‌ಮೇಳ ವಿ‍ಶೇಷ ಕಳೆ ತಂದಿತ್ತು.

ಶಿರೂರು ಪಾರ್ಕ್ ಸರ್ಕಲ್‌ನಿಂದ ಆರಂಭವಾದ ಮೆರವಣಿಗೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಯಘೋಷ ಕೂಗುತ್ತ, ದೇಶಾಭಿಮಾನದ ಹಾಡುಗಳನ್ನು ಹಾಡುತ್ತ ಸಾಗಿದರು. ತೋಳನಕೆರೆವರೆಗೆ ಸಾಗಿ ಅಲ್ಲಿ ಯಾತ್ರೆ ಕೊನೆಗೊಳಿಸಲಾಯಿತು.

ಯಾತ್ರೆಯಲ್ಲಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗೆ ಮಹಾನಗರ ಪಾಲಿಕೆ ಹಿರಿಯ ಸದಸ್ಯ ರಾಜಣ್ಣ ಕೊರವಿ, ಉಮೇಶ್ ಗೌಡ ಕೌಜಿಗೆರೆ, ಬೀರಪ್ಪ ಕಂಡೆಕರ, ಸಂತೋಷ ಚವಾಣ್, ರಾಜು ಕಾಳೆ, ಮಂಜುನಾಥ್ ಕಾಟ್ಕರ್, ಮಲ್ಲಿಕಾರ್ಜುನ್ ಗುಂಡೂರ, ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ರವಿ ನಾಯ್ಕ, ಸಿದ್ದು ಮಗಳಿಶೆಟ್ಟರ್, ಮಹೇಂದ್ರ ಕೌತಾಳ, ಜಯತೀರ್ಥ ಕಟ್ಟ, ಪ್ರಕಾಶ ಕ್ಯಾರಕಟ್ಟಿ, ಕೃಷ್ಣ ಗಂಡಗಾಲೇಕರ್, ಮೇನಕಾ ಹುರಳಿ, ಅಕ್ಕಮಹಾದೇವಿ ಹೆಗಡೆ, ಸುನೀತಾ ಚವ್ಹಾಣ, ವೀಣಾ ತಿಳವಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.