ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ
ಪಟ್ಟಣದ ಅಂಜುಮನ್ ಶಾದಿಹಾಲ್ ಕಟ್ಟಡ ಕಾಮಗಾರಿಗೆ ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಭೂಮಿಪೂಜೆ ಮಂಗಳವಾರ ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲತವಾಡ ಮುಸ್ಲಿಂ ಸಮಾಜದಲ್ಲಿ ಬಹಳ ಒಗ್ಗಟ್ಟು ಇದೆ. 2017ರಲ್ಲಿ ಶಾದಿ ಮಹಲ್ ಕಾಮಗಾರಿಗೆ ₹ 30 ಲಕ್ಷ ಅನುದಾನ ಮಂಜೂರು ಮಾಡಿಸಿದ್ದೆ. ಈಗ ₹ 40 ಲಕ್ಷ ಅನುದಾನ ಮಂಜೂರು ಮಾಡಿಸಲಾಗಿದೆ. ಒಳ್ಳೆಯ ಸಮುದಾಯ ಭವನ ನಿರ್ಮಾಣ ಮಾಡಿ ಎಂದರು. ಅಲ್ಲದೇ, ಜಾತಿ ಸಮೀಕ್ಷೆಯಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿರುವ ಬಗ್ಗೆ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಮುಸ್ಲಿಂ ಸಮುದಾಯದಲ್ಲಿ ಅನೇಕ ಉಪ ಪಂಗಡಗಳಿದ್ದರೂ ನಮ್ಮದು ಒಂದು ಜಾತಿ ಅದು ಮುಸ್ಲಿಂ ಅಂತ ಬರೆಸಿದ್ದಾರೆ. ಆದರೆ, ನಾವು ಅನೇಕ ಪಂಗಡಗಳನ್ನು ಬರೆಸಿಕೊಂಡಿದ್ದೇವೆ. ನಾವು ಒಂದೇ ಜಾತಿ ಬರೆಸಿದರೆ ನಮ್ಮ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಬೇರೆಯವರ ಜಾತಿ ಸಂಖ್ಯೆ ಹೆಚ್ಚಾಗಿದೆ ಎಂದು ಹೊಟ್ಟಕಿಚ್ಚು ಪಡೆಯುವುದಲ್ಲ. ಜಾತಿ ಲೆಕ್ಕಾಚಾರದ ಮೇಲೆ ದೇಶವನ್ನು ಕಟ್ಟಲು ಸಾಧ್ಯವಿಲ್ಲ ಎಂದರು.ಪ್ರಸ್ತಾವಿಕವಾಗಿ ಅಂಜುಮನ್ ಸದಸ್ಯ ಮೌಲಾಸಾಬ ರಕ್ಕಸಗಿ ಮಾತನಾಡಿದರು. ಅಂಜುಮನ್ ಕಮಿಟಿಯಿಂದ ಶಾಸಕರನ್ನು ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ಪೂಜಾರಿಯನ್ನು ಸನ್ಮಾನಿಸಲಾಯಿತು.ಈ ವೇಳೆ ಪಪಂ ಅಧ್ಯಕ್ಷ ವಿಜಯಲಕ್ಮೀ ಇಲಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಡಾ.ಬಲವಂತರಾಯ ಉಣ್ಣಿಭಾವಿ, ಅಂಜುಮನ್ ಅಧ್ಯಕ್ಷ ಲಾಳೇಮಶಾಕ ಅವಟಿ, ರಾಯನಗೌಡ ತಾತರೆಡ್ಡಿ, ಶಿವಪ್ಪಗೌಡ ತಾತರೆಡ್ಡಿ, ಜುಮ್ಮಣ್ಣ ಜೋಗಿ, ಸಂಗಣ್ಣ ಪತ್ತಾರ, ಅಂಜುಮನ್ ಉಪಾಧ್ಯಕ್ಷ ಬಾಷೇಸಾಬ ತೆಗ್ಗಿನಮನಿ, ಮುಖಂಡರಾದ ಅಬ್ದುಲ್ ಗನಿ ಖಾಜಿ, ಇಬ್ರಾಹಿಂ ಮುಲ್ಲಾ, ಉಮರಫಾರುಕ್ ಮೂಲಿಮನಿ, ರಫೀಕ ಡಖನಿ, ಬುಡ್ಡೇಸಾಬ ತಂಗಡಗಿ, ಸಾಹೇಬಲಾಲ ಕಸ್ಸಾಬ, ಜಾಕೀರ ಮಾವಿನಭಾವಿ ಇನ್ನಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))