ಸಾರಾಂಶ
ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚ ಇದರ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಶಾಸಕ ಯಶ್ಪಾಲ್ ಸುವರ್ಣ ಅವರ ನೇತೃತ್ವದಲ್ಲಿ, ದೇಶದ ಗಡಿ ಕಾಯುವ ಯೋಧರ ಮಾತಾಪಿತೃರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮವನ್ನು ಉಡುಪಿಯ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚ ಇದರ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಶಾಸಕ ಯಶ್ಪಾಲ್ ಸುವರ್ಣ ಅವರ ನೇತೃತ್ವದಲ್ಲಿ, ದೇಶದ ಗಡಿ ಕಾಯುವ ಯೋಧರ ಮಾತಾಪಿತೃರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮವನ್ನು ಉಡುಪಿಯ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಆಯೋಜಿಸಲಾಯಿತು.ರಾಜಸ್ಥಾನದ ಕೋಟಾದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಣಿಪಾಲದ ಈಶ್ವರನಗರ ನಿವಾಸಿ ಕಾರ್ತಿಕ್ ಕೆ. ಪೂಜಾರಿ ಅವರ ಹೆತ್ತವರಾದ ಜಯಂತಿ ಮತ್ತು ಕರುಣಾಕರ್ ಪೂಜಾರಿ ದಂಪತಿ, ಹಿರಿಯಡ್ಕ ನಿವಾಸಿ ಯೋಧ ಕುಜಂಬೈಲ್ ಹರಿಕೃಷ್ಣ ಅವರ ಹೆತ್ತವರಾದ ಸುಂದರಿ ಮತ್ತು ಉಪೇಂದ್ರ ನಾಯಕ್ ದಂಪತಿ, ಉಡುಪಿ ಬೈಲೂರು ಕೊಳಂಬೆಯ ಯೋಧ ಸಹೋದರರಾದ ರೋಷನ್ ಮತ್ತು ರಂಜನ್ ಅವರ ಹೆತ್ತವರಾದ ಬೇಬಿ ಮತ್ತು ಕೃಷ್ಣ ಪೂಜಾರಿ ದಂಪತಿ, ಹಿರಿಯಡ್ಕ ಓಂತಿಬೆಟ್ಟುವಿನ ಯೋಧ ಸುರೇಶ್ ಶೆಟ್ಟಿ ಅವರ ಹೆತ್ತವರಾದ ಸುಜಾತ ಮತ್ತು ಭೋಜ ಶೆಟ್ಟಿ ದಂಪತಿಯನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು.ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ, ಅಶೋಕ್ ನಾಯ್ಕ, ಎಸ್. ಟಿ. ಮೋರ್ಚಾದ ಪದಾಧಿಕಾರಿಗಳಾದ ಸುಗುಣ ನಾಯ್ಕ, ಸುಮ ನಾಯ್ಕ, ರಾಹುಲ್ ನಾಯ್ಕ, ಗಿರೀಶ್ ನಾಯ್ಕ, ಉಡುಪಿ ಸೈನಿಕರ ವೇದಿಕೆ ಮಾಜಿ ಅಧ್ಯಕ್ಷರಾದ ಗಣಪಯ್ಯ ಸೇರಿಗಾರ್ ಮತ್ತಿತರರು ಹಾಜರಿದ್ದರು. ಮೋರ್ಚಾ ಅಧ್ಯಕ್ಷೆ ಸುಮಲತಾ ಕಾರ್ಯಕ್ರಮವನ್ನು ಸಂಯೋಜಿಸಿದರು.