ಸಾರಾಂಶ
BJP State President Vijayendra Birthday Celebration
ಚಿತ್ರದುರ್ಗ: ನಗರದ ಸಿದ್ದಾರ್ಥ ಬಡಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರ ಹುಟ್ಟುಹಬ್ಬ ಆಚರಿಸಲಾಯಿತು. ವಿದ್ಯಾ ಗಣಪತಿ ಸೇವಾ ಸಮಿತಿ ಸಹಯೋಗದಲ್ಲಿ ಬಿಜೆಪಿ ಯುವ ಮುಖಂಡ ಜಿ.ಎಸ್. ಅನಿತ್‍ಕುಮಾರ್ ಅವರು ಸಸಿ ನೆಡುವ ಮೂಲಕ ಜನ್ಮದಿನ ಆಚರಣೆಗೆ ಶುಭ ಕೋರಿದರು. ಈ ವೇಳೆ ಅವರು ಮಾತನಾಡಿ, ವಿಜಯೇಂದ್ರ ಬಿಜೆಪಿಯಲ್ಲಿ ಯುವ ನಾಯಕರಾಗಿ ಹೊರಹೊಮ್ಮಿದ್ದಾರೆ. ಪಕ್ಷದ ರಾಜ್ಯ ಘಟಕ ಅಧ್ಯಕ್ಷರಾಗಿ ಬಿಜೆಪಿಯ ಮುನ್ನಡೆಸುತ್ತಿದ್ದಾರೆ. ರಾಜ್ಯ ಸುತ್ತಿ ಪಕ್ಷ ಸಂಘಟಿಸುವ ತಮ್ಮ ಸಾಮರ್ಥ್ಯ ತೋರಿದ್ದು, ಭವಿಷ್ಯದಲ್ಲಿ ವಿಫುಲ ಅವಕಾಶಗಳು ಅವರಿಗಾಗಿ ಕಾದುಕುಳಿತಿವೆ ಎಂದರು. ವಿದ್ಯಾ ಗಣಪತಿ ಸೇವಾ ಸಮಿತಿಯ ನವೀನ್ ಕುಮಾರ್, ವೇದಮೂರ್ತಿ, ತಿಪ್ಪೇಸ್ವಾಮಿ, ಅಜಯ್ ಕುಮಾರ್, ರುದ್ರಮುನಿ, ಫಕೀರಪ್ಪ, ಅಶೋಕ್ ಪ್ರಸನ್ನ ಕುಮಾರ್, ದುರ್ಗೇಶ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
- - - -6ಸಿಟಿಡಿ4: