ಉಗ್ರ ಸಂಘಟನೆಯ ವಿರುದ್ಧ ಬಿಜೆಪಿ ಸಮರ: ಭಾಸ್ಕರ್‌ ರಾವ್

| Published : Jul 11 2025, 01:47 AM IST

ಸಾರಾಂಶ

ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಉಗ್ರಗರನ್ನು ಹೆಡೆಮುರಿಕಟ್ಟಲು ಪರಪ್ಪನ ಅಗ್ರಹಾರ ಮೇಲೆ ಎನ್.ಐ.ಎ ದಾಳಿ

ಗದಗ: ಬಿಜೆಪಿ ಮತ್ತು ಕೇಂದ್ರ ಸರ್ಕಾರ ಉಗ್ರ ಸಂಘಟನೆಯ ವಿರುದ್ಧ ಸಮರ ಸಾರಿದ್ದು. ರಾಷ್ಟ್ರೀಯ ತನಿಖಾ ದಳ ಬೆಂಗಳೂರಿನ ಕಾರಾಗೃಹದಲ್ಲಿ ನಡೆದ ಉಗ್ರ ಚಟುವಟಿಕೆಗಳನ್ನು ಹೆಡೆಮುರಿ ಕಟ್ಟುತ್ತಿದೆ. ರಾಜ್ಯ ಸರ್ಕಾರ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಭಾಸ್ಕರ್‌ ರಾವ್‌ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಮುಂಬೈ ದಾಳಿ ನಡೆದ ನಂತರ ಎಲ್ಲ ರಾಜ್ಯದಲ್ಲಿ ಆಂತರಿಕ ಭದ್ರತೆ ಸಂಸ್ಥೆ ಸ್ಥಾಪಿಸಲು ಕೇಂದ್ರ ಆದೇಶಿಸಿತ್ತು. ಈ ಸಂಸ್ಥೆಗಳು ಆಂತರಿಕ ಭದ್ರತೆ ನೀಡುವುದಾಗಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಗೃಹ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ. ಜಿ.ಪರಮೇಶ್ವರ ಕಾನೂನು ಸುವ್ಯವಸ್ಥೆ ನಿಭಾಯಿಸಲು ಆಗುತ್ತಿಲ್ಲ. ದರ್ಶನ ಪ್ರಕರಣದಲ್ಲೂ ಇದೇ ರೀತಿ ಆಗಿತ್ತು. ಜೈಲು ಅಧಿಕಾರಿಗಳಿಗೆ ಹಣ ಕೊಟ್ಟು ಮೋಜು ಮಸ್ತಿ ಮಾಡಿದ್ದು ಬೆಳಕಿಗೆ ಬಂದಿತ್ತು ಎಂದರು.

ಇಂದು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಉಗ್ರಗರನ್ನು ಹೆಡೆಮುರಿಕಟ್ಟಲು ಪರಪ್ಪನ ಅಗ್ರಹಾರ ಮೇಲೆ ಎನ್.ಐ.ಎ ದಾಳಿ ನಡೆಸಿದೆ. ಅಪರಾಧಿ ಉಗ್ರರಿಗೆ ಜೈಲು ಸಿಬ್ಬಂದಿ, ಜೈಲಿನ ಮನೋವೈದ್ಯ ಸಿಮ್ ಕಾರ್ಡ, ಮೊಬೈಲ್ ನೀಡುತ್ತಿರುವುದು ಆತಂಕ ವಿಷಯ. ಈ ಕೂಡಲೇ ಸರ್ಕಾರ ಆಂತರಿಕ ಭದ್ರತೆ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಸಿಎಂ ಸಿದ್ದರಾಮಯ್ಯ, ಜಿ. ಪರಮೇಶ್ವರ ಜೈಲು ಮತ್ತು ಅಲ್ಲಿನ ಸಿಬ್ಬಂದಿ,ಅಪರಾಧಿ, ವಿಚಾರಣಾಧಿ ಖೈದಿಗಳ ಮೇಲೆ ಸಹಾನುಭೂತಿ ಏತಕ್ಕೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಲೆಲ್ಲ ಆಂತರಿಕ ಭದ್ರತಾ ಲೋಪ ಆಗುತ್ತಲೆ ಬಂದಿದೆ. ಸರ್ಕಾರಕ್ಕೆ ರಾಜ್ಯದ ಭದ್ರತೆ ಬಗ್ಗೆ ಕಾಳಜಿಯೇ ಇಲ್ಲ ಎಂದರು.

ಭಯೋತ್ಪಾದಕರು ನಕಲಿ ಖಾತೆ ಬಳಸಿ ಕೋಟ್ಯಂತರ ಹಣ ಪಡೆದು ಉಗ್ರ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಕೃತ್ಯಗಳ ಬಗ್ಗೆ ಜಿ. ಪರಮೇಶ್ವರ ಒಂದು ಸಭೆ ನಡೆಸದೇ ಇರುವುದು ಅನುಮಾನ ವ್ಯಕ್ತವಾಗುತ್ತಿದೆ. ಸರ್ಕಾರ ತಲೆತಗ್ಗುಸುವ. ಬೆಂಗಳೂರು ಮತ್ತು ನಾಗರಿಕರ ಮೇಲೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಆಂತರಿಕ ಭದ್ರತೆ ನೀಡುವುದು ಸರ್ಕಾರ ಕ್ರಮ ವಹಿಸಬೇಕು. ಇಲ್ಲವಾದರೆ ಗೃಹಸಚಿವರು ರಾಜೀನಾಮೆ ನೀಡಬೇಕು ಎಂದರು.

ಈ ವೇಳೆ ರಾಜು ಕುರಡಗಿ, ಎಂ.ಎಂ. ಹಿರೇಮಠ, ಲಿಂಗರಾಜ ಪಾಟೀಲ, ಎಂ.ಎಸ್. ಕರೀಗೌಡರ, ಅನಿಲ ಅಬ್ಬಿಗೇರಿ, ರಮೇಶ ಸಜ್ಜನರ, ಕೋಟಿಗೌಡರ ಇತರರು ಇದ್ದರು.