ಸಿಪಿವೈ ಹೋದ ತಕ್ಷಣ ಬಿಜೆಪಿ ಬಲ ಕುಗ್ಗಲ್ಲ

| Published : Oct 25 2024, 12:57 AM IST / Updated: Oct 25 2024, 12:58 AM IST

ಸಾರಾಂಶ

ಚನ್ನಪಟ್ಟಣ: ಪಕ್ಷದಿಂದ ಪಕ್ಷಕ್ಕೆ ಹಾರುವುದು ಸಿ.ಪಿ.ಯೋಗೇಶ್ವರ್‌ಗೆ ಹೊಸದೇನು ಅಲ್ಲ. ಅವರು ಬಿಜೆಪಿ ಬಿಟ್ಟು ಹೋದ ತಕ್ಷಣ ಜಿಲ್ಲೆಯಲ್ಲಿ ಪಕ್ಷದ ಬಲವೇನು ಕಡಿಮೆಯಾಗುವುದಿಲ್ಲ ಎಂದು ಬಿಜೆಪಿ ಮುಖಂಡ ಎಂ.ರುದ್ರೇಶ್ ತಿಳಿಸಿದರು.

ಚನ್ನಪಟ್ಟಣ: ಪಕ್ಷದಿಂದ ಪಕ್ಷಕ್ಕೆ ಹಾರುವುದು ಸಿ.ಪಿ.ಯೋಗೇಶ್ವರ್‌ಗೆ ಹೊಸದೇನು ಅಲ್ಲ. ಅವರು ಬಿಜೆಪಿ ಬಿಟ್ಟು ಹೋದ ತಕ್ಷಣ ಜಿಲ್ಲೆಯಲ್ಲಿ ಪಕ್ಷದ ಬಲವೇನು ಕಡಿಮೆಯಾಗುವುದಿಲ್ಲ ಎಂದು ಬಿಜೆಪಿ ಮುಖಂಡ ಎಂ.ರುದ್ರೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಯ ಎನ್‌ಡಿಎ ಟಿಕೆಟ್ ವಿಚಾರದಲ್ಲಿ ನಡೆದ ನಾಟಕವನ್ನು ಎಲ್ಲರೂ ಗಮನಿಸಿದ್ದಾರೆ. ಜನರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇನೆ ಎನ್ನುವ ಯೋಗೇಶ್ವರ್ ಪಕ್ಷ ಬಿಟ್ಟ ಮಾತ್ರಕ್ಕೆ ಪಕ್ಷದ ಶಕ್ತಿ ಕಡಿಮೆಯಾಗುತ್ತದೆ ಎಂದು ಅವರು ಭಾವನೆ ಅಷ್ಟೇ. ಇದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಗೇಶ್ವರ್ ಎಷ್ಟು ಅನುದಾನ ಪಡೆದುಕೊಂಡಿದ್ದಾರೆ. ಅವರು ಪಡೆದುಕೊಂಡಿರುವ ಅನುಕೂಲತೆಗಳೇನು ಎಂಬುದು ತಿಳಿದಿದೆ. ಈ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಿಗಾಗಿ ತಾಲೂಕಿನ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರು ಒಟ್ಟುಗೂಡಿ ಶ್ರಮಿಸಲಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಮಾತನಾಡಿ, ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಲು ಜೆಡಿಎಸ್-ಬಿಜೆಪಿ ವರಿಷ್ಠರು ನಿರ್ಧರಿಸಿದ್ದರು. ಅವರ ಹೆಸರನ್ನು ಘೋಷಣೆ ಮಾಡುವ ಮುನ್ನ ರಾತ್ರೋರಾತ್ರಿ ಕಾಂಗ್ರೆಸ್ ಸೇರ್ಪಡೆಗೊಂಡರು. ಅವರು ಹೋದ ಮಾತ್ರಕ್ಕೆ ಪಕ್ಷ ದುರ್ಬಲವಾಗಿಲ್ಲ. ಈ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದರು.

ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮುರಳೀಧರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ಜಯರಾಮು ಮಾತನಾಡಿದರು. ಮುಖಂಡರಾದ ಜಗನ್ನಾಥ್, ಎಲೇಕೇರಿ ರವೀಶ್. ಎಸ್.ಆರ್.ನಾಗರಾಜು. ಕೆ.ಪಿ.ಕುಮಾರ್. ದರ್ಶನ್. ಪದ್ಮನಾಭ್, ಕಿರಣ್ ಹಾಜರಿದ್ದರು.

ಪೊಟೋ೨೪ಸಿಪಿಟಿ೭: ಚನ್ನಪಟ್ಟಣದಲ್ಲಿ ಎಲೇಕೇರಿಯಲ್ಲಿ ಬಿಜೆಪಿ ಮುಖಂಡ ಎಂ.ರುದ್ರೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.