ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮೂರು ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಬಿಜೆಪಿ ಗೆಲವು ಸಾಧಿಸಲಿದೆ ಎಂದು ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.ಅವರು ಶನಿವಾರ ಸಂಜೆ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮತಯಾಚನೆಗಗಾಗಿ ಉಜಿರೆಯಲ್ಲಿ ನಡೆದ ಬೃಹತ್ ರೋಡ್ ಶೋಗೂ ಮೊದಲು ಮಾತನಾಡಿದರು. ಬಳಿಕ ಅವರು ಉಜಿರೆ ಕಾಲೇಜಿನಿಂದ ಜನಾರ್ಧನ ಸ್ವಾಮಿ ದೇವಸ್ಥಾನದವರೆಗೆ ರೋಡ್ ಶೋ ನಡೆಸಿದರು.
ದೇಶದ ಪ್ರಜ್ಞಾವಂತ ಮತದಾರರು ವಿಕಸಿತ ಭಾರತಕ್ಕೆ ಕಾತುರರಾಗಿದ್ದಾರೆ. ಹತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಶ್ಮೀರದ ಅರ್ಟಿಕಲ್ 370 ಕಾನೂನನ್ನು ರದ್ದುಗೊಳಿಸುವ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದಾಗ ಕಾನೂನನ್ನು ರದ್ದುಗೊಳಿಸಲು ಮುಂದಾದಾಗ, ರದ್ದುಗೊಳಿಸಿದರೆ ರಕ್ತಕ್ರಾಂತಿ ಮಾಡುವ ಬೆದರಿಕೆಯನ್ನು ಕಾಂಗ್ರೆಸ್ ಹಾಕಿತ್ತು. ಆದರೆ ಪ್ರದಾನಿ ನರೇಂದ್ರ ಮೋದಿಯವರು ಯಾವುದಕ್ಕೂ ಜಗ್ಗದೆ 370 ನ್ನು ರದ್ದುಗೊಳಿಸಿದರು ಎಂದರು. ಮೋದಿಯವರು ಮೂರನೇ ಭಾರಿ ಪ್ರಧಾನಿಯಾಗುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ದ.ಕ ಜಿಲ್ಲೆಯ ಕಾರ್ಯಕರ್ತರ ಉತ್ಸಾಹ ನೋಡಿದರೆ 3 ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿರುವುದಾಗಿ ವಿಜಯೇಂದ್ರ ಹೇಳಿದರು.ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ ದೇಶದ ಭವಿಷ್ಯದ ಚುನಾವಣೆ ಇದಾಗಿದೆ. ಎಲ್ಲ ಕಾರ್ಯಕರ್ತರು ಇನ್ನು ಐದು ದಿನ ಬಿಜೆಪಿ ಹಾಗೂ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಾಧಾನಿಯಾಗುವ ಬಗ್ಗೆ ಮಾತನಾಡಬೇಕು. ಆ ಮೂಲಕ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.
ಶಾಸಕ ಹರೀಶ್ ಪೂಂಜಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಂಡಲ ಅದ್ಯಕ್ಷ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಎಸ್.ಎಲ್. ಬೋಜೇಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಮುಖಂಡರಾದ ಜಯಂತ್ ಕೋಟ್ಯಾನ್, ಹರಿಕೃಷ್ಣ ಬಂಟ್ವಾಳ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರಾಜೇಶ್ ಕಾವೆ, ತಿಲಕ್ ರಾಜ್, ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ರವಿ ಬರಮೇಲು, ರಾಜೇಶ್ ಮೂಡುಕೋಡಿ, ವಸಂತ ಮಜಲು, ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಉಜಿರೆಯ ಎಸ್ ಡಿ.ಎಂ. ಕಾಲೇಜು ಮುಂಭಾಗದಿಂದ ಉಜಿರೆಯ ಮುಖ್ಯ ವೃತ್ತಕ್ಕಾಗಿ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯವರೆಗೆ ಸಾಗಿ ಬಂದ ಬೃಹತ್ ರೋಡ್ ಶೋದಲ್ಲಿ ಬೆಳ್ತಂಗಡಿ ತಾಲೂಕಿನ 241 ಬೂತ್‌ನಿಂದ ಬಂದ ಕಾರ್ಯಕರ್ತರು, ಸಮವಸ್ತ್ರ ಧಾರಿ ಮಹಿಳೆಯರು ಹಾಗು ಪುರುಷ ರು ಜಯಘೋಷ ಮಾಡಿ, ಕೇಸರಿ ಬಿಜೆಪಿ ಪಕ್ಷದ ಧ್ವಜ ಹಾರಿಸಿ ಮೆರವಣಿಗೆಯಲ್ಲಿ ಸಾಗಿ ಬಂದರು. ಸಾಮೂಹಿಕ ಚೆಂಡೆವಾದನ ವಿಶೇಷ ಆಕರ್ಷಣೆಯಾಗಿತ್ತು. ಬೃಹತ್ ರೋಡ್ ಶೋದಲ್ಲಿ ತೆರೆದ ವಾಹನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಜತೆಗೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಭೋಜೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಫ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಪ್ರಭಾರಿ ಹರಿಕೃಷ್ಣ ಬಂಟ್ವಾಳ, ಉದಯಕುಮಾರ್ ಶೆಟ್ಟಿ, ರಾಜೇಶ್, ಉಪಾಧ್ಯಕ್ಷ ಜಯಂತ ಕೋಟಿಯಾನ್ , ತಿಲಕರಾಜ್ ಮೊದಲಾದವರು ಇದ್ದರು.ಉಜಿರೆಯ ಎಸ್ ಡಿ.ಎಂ. ಕಾಲೇಜು ಮುಂಭಾಗದಿಂದ ಉಜಿರೆಯ ಮುಖ್ಯ ವೃತ್ತಕ್ಕಾಗಿ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯವರೆಗೆ ಸಾಗಿ ಬಂದ ಬೃಹತ್ ರೋಡ್ ಶೋದಲ್ಲಿ ಬೆಳ್ತಂಗಡಿ ತಾಲೂಕಿನ 241 ಬೂತ್‌ನಿಂದ ಬಂದ ಕಾರ್ಯಕರ್ತರು, ಸಮವಸ್ತ್ರ ಧಾರಿ ಮಹಿಳೆಯರು ಹಾಗು ಪುರುಷ ರು ಜಯಘೋಷ ಮಾಡಿ, ಕೇಸರಿ ಬಿಜೆಪಿ ಪಕ್ಷದ ಧ್ವಜ ಹಾರಿಸಿ ಮೆರವಣಿಗೆಯಲ್ಲಿ ಸಾಗಿ ಬಂದರು. ಸಾಮೂಹಿಕ ಚೆಂಡೆವಾದನ ವಿಶೇಷ ಆಕರ್ಷಣೆಯಾಗಿತ್ತು. ಬೃಹತ್ ರೋಡ್ ಶೋದಲ್ಲಿ ತೆರೆದ ವಾಹನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಜತೆಗೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಭೋಜೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಫ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಪ್ರಭಾರಿ ಹರಿಕೃಷ್ಣ ಬಂಟ್ವಾಳ, ಉದಯಕುಮಾರ್ ಶೆಟ್ಟಿ, ರಾಜೇಶ್, ಉಪಾಧ್ಯಕ್ಷ ಜಯಂತ ಕೋಟಿಯಾನ್ , ತಿಲಕರಾಜ್ ಮೊದಲಾದವರು ಇದ್ದರು.