14 ಸ್ಥಾನಗಳಲ್ಲೂ ಬಿಜೆಪಿ ಗೆಲುವು: ಜೋಶಿ

| Published : May 09 2024, 01:02 AM IST / Updated: May 09 2024, 12:58 PM IST

ಸಾರಾಂಶ

ಪ್ರಚಾರ ಮಾಡುವುದಕ್ಕಿಂತ ಕಾಂಗ್ರೆಸ್ ಅಪಪ್ರಚಾರ ಮಾಡಿತು. ನೇರವಾಗಿ ಸೋಲಿಸಲು ಸಾಧ್ಯವಾಗದಿದ್ದಾಗ ಈ ರೀತಿ ಮಾಡುತ್ತಾರೆ. ಕಾಂಗ್ರೆಸ್ಸಿ​ನವರು ಎಸ್​ಸಿ, ಎಸ್​ಟಿ ಮೀಸಲಾತಿ ರದ್ದು ಮಾಡುತ್ತೇವೆ ಅಂತಾ ಫೇಕ್ ವಿಡಿಯೋ ಬಿಟ್ಟರು.

ಹುಬ್ಬಳ್ಳಿ:  ಚುನಾವಣೆ ಲೆಕ್ಕಾಚಾರಗಳು ಸ್ಪಷ್ಟವಾಗಿವೆ. ನನ್ನ ಕ್ಷೇತ್ರ ಸೇರಿದಂತೆ 14 ಸ್ಥಾನ ನಾವು ಗೆಲ್ಲುತ್ತೇವೆ. ಐತಿಹಾಸಿಕ ಫಲಿತಾಂಶ ಬರಲಿದೆ‌ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನತಾ ಜನಾರ್ದನ, ದೇವರ ಆಶೀರ್ವಾದದಿಂದ ಪ್ರತಿ ಬಾರಿ ಮತಪ್ರಮಾಣ ಹೆಚ್ಚಾಗುತ್ತಿದೆ. ಈ ಬಾರಿಯೂ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದರು.

ಪ್ರಚಾರ ಮಾಡುವುದಕ್ಕಿಂತ ಕಾಂಗ್ರೆಸ್ ಅಪಪ್ರಚಾರ ಮಾಡಿತು. ನೇರವಾಗಿ ಸೋಲಿಸಲು ಸಾಧ್ಯವಾಗದಿದ್ದಾಗ ಈ ರೀತಿ ಮಾಡುತ್ತಾರೆ. ಕಾಂಗ್ರೆಸ್ಸಿ​ನವರು ಎಸ್​ಸಿ, ಎಸ್​ಟಿ ಮೀಸಲಾತಿ ರದ್ದು ಮಾಡುತ್ತೇವೆ ಅಂತಾ ಫೇಕ್ ವಿಡಿಯೋ ಬಿಟ್ಟರು ಎಂದು ಟೀಕಿಸಿದರು.

ಷಡ್ಯಂತ್ರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಅದನ್ನು ಎದುರಿಸುತ್ತೇವೆ. ಷಡ್ಯಂತ್ರವನ್ನೂ ಜನ ಅರ್ಥ ಮಾಡಿಕೊಂಡಿದ್ದಾರೆ. ನಾನು ದೆಹಲಿಯಲ್ಲಿದ್ದರೂ ಯಾರ ಫೋನ್​ ಕರೆ ಅವೈಡ್ ಮಾಡಲ್ಲ. ಜನಕ್ಕೆ ನಾನೇನು ಅಂತಾ ಗೊತ್ತು. ಕೆಲಸಗಳನ್ನು ಜನ ನೆನಪಿಟ್ಟುಕೊಂಡಿದ್ದಾರೆ ಎಂದರು.

ಕೆಲಸ ಆಗಿಲ್ಲವೆಂದು ದ್ವೇಷದಿಂದ ಹೇಳಿದ್ದಾರೆ. ನನಗೆ ಸಂಪೂರ್ಣ ವಿಶ್ವಾಸವಿದೆ. ಜನ ನನ್ನ ಕೈ ಬಿಡಲ್ಲ. ಅಭಿವೃದ್ಧಿ ಚರ್ಚೆಗೆ ಕಾಂಗ್ರೆಸ್ ಬರಲಿಲ್ಲ. ಈ ಚುನಾವಣೆ ಅಭಿವೃದ್ಧಿ ಮೇಲೆ ನಡೆದರೆ ಬಿಜೆಪಿ ಮುನ್ನಡೆಯಲ್ಲಿ ಬರುತ್ತೆ ಎಂದು ಅವರಿಗೆ ಗೊತ್ತಿತ್ತು. ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ನಮ್ಮ ಸಮಯದಲ್ಲಿ ನಯಾ ಪೈಸೆ ಭ್ರಷ್ಟಾಚಾರ ಇಲ್ಲ. ನಮ್ಮಲ್ಲಿ ದಲ್ಲಾಳಿಗಳಿಗೆ ಅವಕಾಶ ಇಲ್ಲದಂತೆ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸಿದರೆ ಎಲ್ಲೂ ವಿದ್ಯುತ್ ಕೊರತೆ ಆಗಲ್ಲ. ಅವರ ಪಕ್ಷದ ನಾಯಕರು ಕಳೆದ ಬಾರಿ ಅದನ್ನೇ ಹೇಳಿದ್ದರು. ಸಿದ್ದರಾಮಯ್ಯ ನರೇಂದ್ರ ಮೋದಿಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿದರು. 2019ರಲ್ಲಿ ಜೆಡಿಎಸ್ ಕಾಂಗ್ರೆಸ್ ಒಟ್ಟಿಗೆ ಸ್ಪರ್ಧೆ ಮಾಡಿ ಎಲ್ಲವೂ ನಮ್ಮದೇ ಅಂದಿದ್ದರು. ಹೆಸರಿಲ್ಲದಂತೆ ಆಗಿತ್ತು. ಈ ಸಲವೂ ಕಾಂಗ್ರೆಸ್‌ ಕಥೆ ಅಷ್ಟೇ. ನಮ್ಮ ಪಕ್ಷವೇ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ. ಧಾರವಾಡದಲ್ಲಿ ಈ ಸಲವೂ ತಮ್ಮ ಗೆಲುವು ಖಚಿತ ಎಂದು ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.