ಅದಾನಿ, ಅಂಬಾನಿ ಪರ ಕೆಲಸ ಮಾಡಿದ ಬಿಜೆಪಿ

| Published : Apr 30 2024, 02:00 AM IST

ಸಾರಾಂಶ

ಕೇಂದ್ರ ಸರ್ಕಾರ ಬಡವರ, ಹಿಂದಿಳಿದವರ ಪರ ಯಾವುದೇ ಯೋಜನೆಗಳನ್ನು ಜಾರಿಗೆ ತರದೇ ಕೇವಲ ಅದಾನಿ, ಅಂಬಾನಿ ಪರ ಕೆಲಸ ಮಾಡಿದೆ ಎಂದು ಚಿಕ್ಕೋಡಿ ಜಿಲ್ಲಾ ಮಾದ್ಯಮ ವಕ್ತಾರ ರಾವಸಾಬ ಐಹೊಳಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಕೇಂದ್ರ ಸರ್ಕಾರ ಬಡವರ, ಹಿಂದಿಳಿದವರ ಪರ ಯಾವುದೇ ಯೋಜನೆಗಳನ್ನು ಜಾರಿಗೆ ತರದೇ ಕೇವಲ ಅದಾನಿ, ಅಂಬಾನಿ ಪರ ಕೆಲಸ ಮಾಡಿದೆ ಎಂದು ಚಿಕ್ಕೋಡಿ ಜಿಲ್ಲಾ ಮಾದ್ಯಮ ವಕ್ತಾರ ರಾವಸಾಬ ಐಹೊಳಿ ಕಿಡಿಕಾರಿದರು.

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದೆ. ಆದರೆ, ಕಾರ್ಪೋರೇಟರ್‌ ವಲಯ ಹಾಗೂ ಶ್ರೀಮಂತ ಉದ್ಯಮಿಗಳಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನೀಡಿದ ಮೋದಿ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಈ ಬಾರಿ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಗವಾಡ ಹಾಗೂ ಅಥಣಿ ವಿಧಾನಸಭಾ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ಪ್ರತಿ ಮನೆಗೆಗಳಿಗೆ ಹೋಗಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವಾಗ ಮಹಿಳೆಯರು, ಯುವಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಗೆಲುವು ನಮ್ಮದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಉಸ್ತುವಾರಿ ರಮೇಶ ಸಿಂದಗಿ ಮಾತನಾಡಿ, ಗ್ರಾಮಗಳಿಗೆ ತೆರಳಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವಾಗ ತಾಯಂದಿರರು ಸಿದ್ದರಾಮಯ್ಯನವರನ್ನು ನೆನೆದು ಬೆಂಬಲ ವ್ಯಕ್ತ ಪಡಿಸುವುದನ್ನು ನೋಡಿದರೇ ನಮ್ಮ ಅಭ್ಯರ್ಥಿ ಸಹೋದರಿ ಪ್ರಿಯಾಂಕಾ ಜಾರಕಿಹೊಳಿಯವರ ಗೆಲುವು ಖಚಿತ ಎಂದು ತಿಳಿಸಿದರು.

ಈ ವೇಳೆ ರಮೇಶ ಪಟ್ಟಣ, ಅಮೃತ ಮಿಸಾಳ, ಮಲ್ಲಿಕಾರ್ಜುನ ದಳವಾಯಿ, ಮಹಾದೇವ ತಾನಗೆ, ಮುತ್ತುರಾಜ ಕಾಂಬಳೆ, ಅಶೋಕ ಕಟಗೇರಿ, ಶ್ರೀನಿವಾಸ ದೊಡಮನಿ, ವೈಭವ ಐಹೊಳಿ, ಶಂಕರ ಮಾದರ, ಕೇಶವ ಘಟಕಾಂಬಳೆ, ಸತೀಶ ನರೊಟಿ, ವಿಲಾಸ ಟೊನೆ ಸೇರಿದಂತೆ ಅನೇಕರು ಇದ್ದರು.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ತಿಳಿಸಿ ಮತಯಾಚನೆ: ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಂಬರಗಿ, ತಾಂವಶಿ, ಗುಂಡೇವಾಡಿ ಹಾಗೂ ಅಥಣಿ ತಾಲೂಕಿನಲ್ಲಿ ಸೋಮವಾರ ಚಿಕ್ಕೋಡಿ ಜಿಲ್ಲಾ ಮಾಧ್ಯಮ ವಕ್ತಾರ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ ಐಹೋಳಿ, ರಮೇಶ ಪಟ್ಟಣ, ರಮೇಶ ಸಿಂದಗಿ, ರಾಜು ಕಾಂಬಳೆ ಹಾಗೂ ಕಾಂಗ್ರೆಸ್ ಮುಖಂಡರು ಸೇರಿ ಮನೆ ಮನೆಗೆ ತೆರಳಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರ ನಡೆಸಿದರು. ಜನತೆಗೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳು ಹಾಗೂ ಬಡವರ, ದೀನದಲಿತರ ಕಲ್ಯಾಣಕ್ಕಾಗಿ ಕೊಡಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರಲ್ಲಿ ತಿಳಿ ಹೇಳಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ವಿವರಿಸಿದರು.