ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ದೇಶದ ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಜಯಭೇರಿ ಗಳಿಸಿದ್ದ ಹಿನ್ನೆಲೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.ಪಟ್ಟಣದ ಮಸೀದಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.
ಈ ವೇಳೆ ಬಿಜೆಪಿ ನಗರ ಮಂಡಲ ಎಂ.ಶಿವಕುಮಾರ್ ಮಾತನಾಡಿ, ದೇಶದ ಪಂಚರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಮೇಲೆ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಅಮೋಘ ಜಯ ಗಳಿಸಲು ಕಾರಣರಾದ ಜನರಿಗೆ ಧನ್ಯವಾದಗಳು ಸಲ್ಲಿಸುತ್ತೇವೆ. ಇದೇ ರೀತಿ ರಾಜ್ಯದಲ್ಲೂ ಸಹ ಮುಂದಿನ ದಿನಗಳಲ್ಲಿ ಮತದಾರರು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಲಿದ್ದಾರೆ ಎಂದು ತಿಳಿಸಿದರು.ಸಂಭ್ರಮಾಚರಣೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಶಂಕರ್, ನಗರ ಮಂಡಲ ಮಾಜಿ ಅಧ್ಯಕ್ಷ ರಮೇಶ್ ಮುರಾರಿ, ಮುಖಂಡರು ಮಧುಚಂದ್ರ, ರಾಜಶೇಖರ್, ವಕೀಲ ಬಸವರಾಜು, ಕೆ.ಕೆ ಮೂರ್ತಿ, ಕಿರಣ್, ಯುವ ಮೋರ್ಚಾ ಅಧ್ಯಕ್ಷ ಆನಂದ್, ರಾಜೇಶ್, ಚೇತನ್, ನಾಗಣ್ಣ, ಸೋಮಣ್ಣ, ಶೇಷಮೂರ್ತಿ, ಶಿವಮ್ಮ, ಬಾಲಾಜಿ, ಪ್ರಸಾದ್, ಹೇಮಣ್ಣ, ರವಿ, ಪ್ರಸಾದ, ಮಂಜು, ಅಣಗಳ್ಳಿ ಬಸವರಾಜು, ಚಂದ್ರಶೇಖರ್, ಮಹದೇವ್, ಚಿಂಗಾರಿ ಪರಮೇಶ್, ರತ್ನವೇಲು, ನಂಜುಂಡನಾಯಕ, ಪರಶಿವ, ಸತೀಶ, ಚಂದು, ಇತರರು ಇದ್ದರು.