ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ರಾಜ್ಯ ಸರ್ಕಾರದ ಸುತ್ತೋಲೆಯ ಪ್ರಕಾರ ಗ್ರಾಪಂನವರು ಇನ್ನು ಮುಂದೆ ತೆರಿಗೆಯನ್ನು ಸ್ವೀಕರಿಸುವುದಿಲ್ಲ. ಇದರಿಂದಾಗಿ ಸಹಜವಾಗಿ ಭೂಮಿಯು ಅಕ್ರಮವಂತಾಗುತ್ತದೆ. ನಂತರ ಇದೇ ಭೂಮಿಯನ್ನು ಜನರಿಂದ ಸರಕಾರ ಕಸಿದುಕೊಳ್ಳುವ ಒಳಸಂಚು ರೂಪಿಸಿದೆ ಎಂದು ಆರೋಪಿಸಿದರು.
ಅಂಕೋಲಾ: ಗ್ರಾಪಂ ವ್ಯಾಪ್ತಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಭೂಮಿ ಹಾಗೂ ನಿವೇಶನಗಳಲ್ಲಿ ನಿಯಮಬಾಹಿರವಾಗಿ ನಿರ್ಮಿಸಲ್ಪಟ್ಟ ಕಟ್ಟಡ ಅಥವಾ ನಿವೇಶನಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಅವಕಾಶ ಇರುವುದಿಲ್ಲ. ಅಲ್ಲದೇ ಗ್ರಾಪಂ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುವ ಅಂತಹ ಆಸ್ತಿಗಳನ್ನು ಕೈಬಿಡಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ತಾಲೂಕಿನ ಸುಂಕಸಾಳ ಪಂಚಾಯಿತಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ರಾಜ್ಯ ಸರ್ಕಾರದ ಸುತ್ತೋಲೆಯ ಪ್ರಕಾರ ಗ್ರಾಪಂನವರು ಇನ್ನು ಮುಂದೆ ತೆರಿಗೆಯನ್ನು ಸ್ವೀಕರಿಸುವುದಿಲ್ಲ. ಇದರಿಂದಾಗಿ ಸಹಜವಾಗಿ ಭೂಮಿಯು ಅಕ್ರಮವಂತಾಗುತ್ತದೆ. ನಂತರ ಇದೇ ಭೂಮಿಯನ್ನು ಜನರಿಂದ ಸರಕಾರ ಕಸಿದುಕೊಳ್ಳುವ ಒಳಸಂಚು ರೂಪಿಸಿದೆ ಎಂದು ಆರೋಪಿಸಿದರು.ಈ ಬಗ್ಗೆ ಬಿಜೆಪಿ ಎಂದೂ ಬೆನ್ನಿಗಿದೆ. ಇದು ಪ್ರಾರಂಭಿಕ ಹೋರಾಟ. ಜಿಲ್ಲೆಯ ಎಲ್ಲ ಪಂಚಾಯಿತಿಗಳನ್ನು ಕೂಡ ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ರಾಜ್ಯ ಸರ್ಕಾರ ಈ ನಿರ್ಧಾರವನ್ನು ವಾಪಸ್ ಪಡೆಯದೇ ಹೋದಲ್ಲಿ ಹೋರಾಟವನ್ನು ಗಂಭೀರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಮಾಧ್ಯಮ ಪ್ರಕೋಷ್ಟದ ಸಹಸಂಚಾಲಕ ಜಗದೀಶ್ ನಾಯಕ ಮೊಗಟಾ ಮಾತನಾಡಿ, ರಾಜ್ಯ ಒಂದೆಡೆ ಗ್ಯಾರಂಟಿಯ ಹೆಸರಲ್ಲಿ ಜನರನ್ನು ಮರುಳು ಮಾಡಿ, ಇನ್ನೊಂದೆಡೆ ಅವರು ಕಟ್ಟಿಕೊಂಡಿರುವ ಸೂರನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಜನರನ್ನು ಶೋಷಣೆಗೆ ಮುಂದಾಗುತ್ತಿರುವುದು ಖಂಡನೀಯ ಎಂದರು.ಜಿಲ್ಲಾ ಕಾರ್ಯದರ್ಶಿ ನಿತ್ಯಾನಂದ, ಜಿಲ್ಲಾ ಒಬಿಸಿ ಅಧ್ಯಕ್ಷ ರಾಜೇಂದ್ರ ನಾಯ್ಕ, ಮಂಡಲ ಪ್ರಭಾರಿ ಅಧ್ಯಕ್ಷ ಸಂಜಯ ನಾಯ್ಕ ಮಾತನಾಡಿದರು. ಪ್ರತಿಭಟನಾಕಾರರು ಪಿಡಿಒ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಅಗಸೂರು ಮಹಾಶಕ್ತಿ ಕೇಂದ್ರದ ನಾರಾಯಣ ಹೆಗಡೆ, ಮಂಡಲ ಕಾರ್ಯದರ್ಶಿಗಳಾದ ಶ್ರೀಧರ್ ನಾಯ್ಕ, ಚಂದ್ರಕಾಂತ ನಾಯ್ಕ, ಕೇಂದ್ರದ ಅಧ್ಯಕ್ಷ ಸುರೇಶ್ ಗಾಂವಕರ, ರೈತ ಮೋರ್ಚಾ ಮಂಡಲಾಧ್ಯಕ್ಷ ಎಂ.ಎನ್. ಭಟ್. ಗ್ರಾಪಂ ಮಾಜಿ ಸದಸ್ಯರಾದ ಪ್ರಭಾವತಿ ನಾಯ್ಕ, ನಾಗರಾಜ್ ಹೆಗಡೆ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ವಿ.ಎಸ್. ಭಟ್, ರೈತ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಜಿಲ್ಲಾ ಪ್ರಕೋಷ್ಟಗಳ ಸಹ ಸಂಚಾಲಕ ರಾಘವೇಂದ್ರ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಮೋರ್ಚಾದ ಶಶಾಂಕ ಹೆಗಡೆ ಸ್ವಾಗತಿಸಿ, ನಿರೂಪಿಸಿದರು. ಉದಯ ನಾಯ್ಕ ವಜ್ರಳ್ಳಿ ವಂದಿಸಿದರು.