ಬಿಜೆಪಿಯಿಂದ ಪೌರಕಾರ್ಮಿಕರ ಪಾದಪೂಜೆ

| Published : Mar 21 2025, 12:37 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಪರ ಯೋಜನೆ ಜಾರಿಗೊಳಿಸಿ ಅವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪಕ್ಷದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿದ್ದಾರೆ.

ಕುಕನೂರು:

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಯಲಬುರ್ಗಾ ಮಂಡಲ ಬಿಜೆಪಿ ಮಹಿಳಾ ಮೋರ್ಚಾದಿಂದ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕುಕನೂರು ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರ ಪಾದಪೂಜೆ ಮಾಡಲಾಯಿತು. ಜತೆಗೆ ಮಹಿಳಾ ಆರ್ಥಿಕ ಸಬಲೀಕರಣ ಹಾಗೂ ಅಂಗಾಂಗ ದಾನಿಗಳ ನೋಂದಣಿ ಕಾರ್ಯಕ್ರಮ ಸಹ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಾ ಕುಮಾರಿ, ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಪರ ಯೋಜನೆ ಜಾರಿಗೊಳಿಸಿ ಅವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪಕ್ಷದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿದ್ದಾರೆ. ಮಹಿಳಾ ಶಕ್ತಿಯನ್ನು ಬಿಜೆಪಿ ಗೌರವಿಸುತ್ತದೆ ಎಂದರು.

ಯಲಬುರ್ಗಾ ಮಂಡಳ ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿ, ಬಿಜೆಪಿ ಮಹಿಳಾ ದಿನಾಚರಣೆ ಜತೆಗೆ ಪೌರ ಕಾರ್ಮಿಕರ ಪಾದಪೂಜೆ ನೆರವೇರಿಸಿದೆ. ಇದರಿಂದ ಮಹಿಳೆಯರನ್ನು ಪ್ರತಿ ಹಂತದಲ್ಲೂ ಗೌರವಿಸಬೇಕು. ದುಡಿಯುವ ಕೈಗಳಿಗೆ ಗೌರವ ನೀಡಬೇಕು ಹಾಗೂ ಸಮಾಜದಲ್ಲಿ ಅಂಗಾಂಗ ದಾನ ಮಾಡಿ ಮತ್ತೊಂದು ಜೀವಕ್ಕೆ ಜೀವ ಆಗಬೇಕು ಎಂಬ ಧ್ಯೇಯ ಹೊಂದಿದೆ ಎಂದರು.

ದೇಹದಾನ ಮಾಡಿದ ಹುಚ್ಚಿರಪ್ಪ ಮಂಡಲಗೇರಿ ಅವರನ್ನು ಸನ್ಮಾನಿಸಲಾಯಿತು. ಡಾ. ಶಿವಕುಮಾರ ಕಂಬಳಿ, ಅಂಗಾಂಗ ದಾನದ ಬಗ್ಗೆ ವಿಶೇಷ ಮಾಹಿತಿ ನೀಡಿದರು ಪ್ರಧಾನ ಕಾರ್ಯದರ್ಶಿ ಅಂಬರೇಶ ಹುಬ್ಬಳ್ಳಿ, ಪ್ರಕಾಶ ತಹಸೀಲ್ದಾರ್‌, ಯಲಬುರ್ಗಾ ಮಂಡಳ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂತೋಷಿಮಾ ಜೋಶಿ, ಕರಬಸಯ್ಯ ಬಿನ್ನಾಳ, ಪದ್ಮಾ ಹಿರೇಮಠ, ಪಾರ್ವತಿ ಹಣಸಿ, ನೇತ್ರಾ ಹಿರೇಮಠ, ವಿಜಯಲಕ್ಷ್ಮಿ ಯರಾಸಿ , ಶಕುಂತಲಾ ದೇವಿ , ಕಸ್ತೂರಿ ಪಾಟೀಲ್ , ಶೋಭಾ ಹುಬ್ಬಳ್ಳಿ ಇದ್ದರು.