‘ದೇಶಕ್ಕಾಗಿ ಒಂದು ಹೆಜ್ಜೆ’ ಧ್ಯೇಯದ ಅಡಿ ಬೀದರ್‌ನಲ್ಲಿ ವಿವೇಕ ನಡಿಗೆ

| Published : Jan 13 2025, 12:47 AM IST

ಸಾರಾಂಶ

ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಅಂಗವಾಗಿ ದೇಶಕ್ಕಾಗಿ ಒಂದು ಹೆಜ್ಜೆ ಎಂಬ ವಾಕ್ಯದಡಿ ‘ವಿವೇಕ್ ನಡಿಗೆ’ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್ ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಅಂಗವಾಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ದೇಶಕ್ಕಾಗಿ ಒಂದು ಹೆಜ್ಜೆ ಎಂಬ ವಾಕ್ಯದಡಿ "ವಿವೇಕ ನಡಿಗೆ "ಮಾಡಲಾಯಿತು.ಭಾನುವಾರ ಬೆಳಿಗ್ಗೆ ಬೀದರ್ ನಗರದ ದೇವಿ ಕಾಲೋನಿಯ ದೇವಿ ಮಂದಿರದಿಂದ ಬೇಟಿ ವೃತದ ವರೆಗೇ ಕಾರ್ಯಕರ್ತರು ವಿವೇಕಾನಂದರ ಬೋಧನೆಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಲಿ ಎಂದು ವಿವೇಕ್ ನಡಿಗೆ ಕೈಗೊಂಡರು.ಈ ವೇಳೆ ಬೀದರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪಾ ಔರಾದೆ ಮಾತನಾಡಿ, ಸ್ವಾಮಿ ವಿವೇಕಾನಂದರು 1863ರ ಜನವರಿ 12 ರಂದು ಜನಿಸಿದರು. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಿರ್ಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12ರಂದು ರಾಷ್ಟ್ರೀಯ ‘ಯುವದಿನ’ವೆಂದು ಆಚರಿಸಲಾಗುತ್ತದೆ ತಿಳಿಸಿದರು.

ಈ ಸಂದರ್ಭದಲ್ಲಿ ಬೀದರ್ ಬಿಜೆಪಿಯ ನಗರ ಮಂಡಲದ ಅಧ್ಯಕ್ಷ ಶಶಿಧರ ಹೊಸಳ್ಳಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ ರೆಡ್ಡಿ, ಪ್ರಧಾನ ಕಾರ್ಯದರ್ಶಿ ವೀರೇಶ ಸ್ವಾಮಿ, ಜಿಲ್ಲಾ ಪ್ರಮುಖರಾದ ಸುಭಾಷ ಮಡಿವಾಳ, ನೀತಿನ್ ಕರ್ಪೂರ, ರಾಜೇಂದ್ರ ಪೂಜಾರಿ, ಗುಂಡಪ್ಪ ಬುಧೇರಾ ಹಾಗೂ ನಗರ ಮಂಡಲದ ಗಣೇಶ ಭೋಸ್ಲೆ, ರೋಷನ್ ವರ್ಮಾ, ನೀತಿನ್ ಎನ್, ಸಂಗಮೇಶ ಗುಮ್ಮಾ, ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳಾದ ಸತೀಶ್ ಶಟ ಗೊಂಡೆ, ಮೃತಂಜಯ ಬಿರಾದಾರ, ಪ್ರಶಾಂತ ಸಿಂಧೋಲ್ ಹಾಗೂ ಯುವ ಮೋರ್ಚಾ ಪ್ರಮುಖರಾದ ಪುಷ್ಪಕಕುಮಾರ ಬಿ ಜಾಧವ, ಬಸವ ಮೂಲಗೆ, ಸಂತೋಷ್ ಬಿರಾದಾರ, ಗುರು ಪಾಂಪಡೇ, ಉಪ್ಪಾರ ಕೃಷ್ಣ, ಸಂತೋಶ್ ಮಡಕೆ, ಸಾಯಿನಾಥ್ ಮಂಗಲಗಿ, ರೋಹಿತ್ ಮಂಗಲಗಿ, ರಾಘವೇಂದ್ರ ಚಿದ್ರೆ, ಸಾಯಿನಾಥ್ ನಾಸಿಗರ್, ಆಕಾಶ್ ಗೌಡ, ಪವನ ಮಾಶೆಟ್ಟಿ, ಅರವಿಂದ್ ಬುಳ್ಳಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಆತ್ಮಗೌರವ, ಚಾರಿತ್ರ್ಯವೇ ಸರ್ವಶ್ರೇಷ್ಠ ಪದವಿ: ಜ್ಯೋತಿರ್ಮಯಾನಂದ

ಬೀದರ್: ಚಾರಿತ್ರ್ಯ ಮತ್ತು ಆತ್ಮಗೌರವ ನಮಗಿರುವ ಎರಡು ಸರ್ವಶ್ರೇಷ್ಠ ಪದವಿಗಳು. ಸ್ವಾಮಿ ವಿವೇಕಾನಂದರ ಚಿಂತನೆಗಳಂತೆ ಈ ಪದವಿ ಹೊಂದಿದರೆ ಸಮಾಜಕ್ಕೆ ಅಮೋಘ ಕೊಡುಗೆ ಕೊಡಬಹುದು. ವ್ಯಕ್ತಿಯ ಭವಿಷ್ಯ ರೂಪಿಸಲು ಹಾಗೂ ಸುಂದರ ಸಮಾಜ ನಿರ್ಮಿಸಲು ಪೂರಕವಾಗಿ ಸಾರ್ಥಕ ಬದುಕು ಸಾಗಿಸಲು ಚಾರಿತ್ರ್ಯ ಮತ್ತು ಆತ್ಮಗೌರವಗಳೇ ಶ್ರೇಷ್ಠ ಸಾಧನಗಳಾಗಿವೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಜ್ಯೋತಿರ್ಮಯಾನಂದ ಸ್ವಾಮಿ ಹೇಳಿದರು.ಇಲ್ಲಿಯ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸ್ವಾಮಿ ವಿವೇಕಾನಂದ ಚೆಸ್ ಅಕಾಡೆಮಿ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯುಪಿಎಸ್‌ಸಿ ಸೇರಿದಂತೆ ಯಾವುದೇ ಪದವಿಯಲ್ಲಿ ರ್ಯಾಂ ಕ್ ಗಳಿಸಿ ಹುದ್ದೆ ಗಿಟ್ಟಿಸಿಕೊಳ್ಳುವುದು ದೊಡ್ಡದಲ್ಲ. ಉತ್ತಮ ಚಾರಿತ್ರ್ಯ ಮತ್ತು ಆತ್ಮಗೌರವದಿಂದ ಕೆಲಸ ಮಾಡಿದಾಗಲೇ ಈ ಪದವಿ, ಹುದ್ದೆಗೆ ಬೆಲೆಯಿದೆ. ಇವೆರಡೂ ಅಂಶ ನಮ್ಮೊಳಗೆ ಇರದಿದ್ದರೆ ನಾವೆಷ್ಟೇ ಕಲಿತಿದ್ದರೂ, ಎಂಥದ್ದೇ ಹುದ್ದೆಯಲ್ಲಿದ್ದರೂ ಸಮಾಜಕ್ಕೆ ಏನೂ ಪ್ರಯೋಜನವಾಗದು ಎಂದರು.

ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ ಅಂದರೆ ಕೇವಲ ಕಲಿಯುವುದಲ್ಲ. ವಿವೇಕಾನಂದರ ತತ್ವ, ಆದರ್ಶ, ಚಿಂತನೆಗಳಿಂದ ಯಾರು ಬೇಕಾದರೂ ಶ್ರೇಷ್ಠತೆಯಡೆ ಸಾಗಬಹುದು. ಏಕೆಂದರೆ ಈ ಚಿಂತನೆಗಳು ನಮ್ಮನ್ನು ಸಾಮಾನ್ಯನಿಂದ ಅಸಾಮಾನ್ಯನನ್ನಾಗಿ ಮಾಡುತ್ತವೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ ಶ್ರೇಷ್ಠ.ವಿಜ್ಞಾನ, ತಂತ್ರಜ್ಞಾನ, ಆತ್ಮಜ್ಞಾನ ಹೀಗೆ ಪ್ರತಿಯೊಂದು ಜ್ಞಾನಗಳ ಮೂಲವೇ ಭಾರತವಾಗಿದೆ. ಸ್ವಾಮಿ ವಿವೇಕಾನಂದರನ್ನು ತಿಳಿದಾಗ ನಮಗೆ ಭಾರತ ಏನೆಂಬುದು ತಿಳಿಯಲು ಸಾಧ್ಯವಾಗುತ್ತದೆ ಎಂದರು. ಹಿರಿಯ ಆರ್ಥೋಪೆಡಿಕ್ ಸರ್ಜನ್ ಡಾ.ರಘು ಕೃಷ್ಣಮೂರ್ತಿ, ಬಗದಲ್ ಮೊರಾರ್ಜಿ ದೇಸಾಯಿ ವಸತಿಶಾಲೆ ಪ್ರಾಂಶುಪಾಲ ಚನ್ನಬಸವ ಹೇಡೆ, ಚೆಸ್ ಅಕಾಡೆಮಿ ಅಧ್ಯಕ್ಷ ನಿತಿನ್ ಕರ್ಪೂರ್ ಮಾತನಾಡಿದರು.

ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮಿಸಲಾಯಿತು. ಹಿರಿಯ ನ್ಯಾಯವಾದಿ ಅಂಬುಜಾ ವಿಶ್ವಕರ್ಮ ಸ್ವಾಗತಿಸಿ, ನಿರೂಪಿಸಿದರು.ಮಕ್ಕಳಲ್ಲಿ ದೃಷ್ಟಿದೋಷ ಸಮಸ್ಯೆ ಹೆಚ್ಚಳ:ಕೋವಿಡ್ ಬಳಿಕ ಮಕ್ಕಳಲ್ಲಿ ದೃಷ್ಟಿದೋಷ ಸಮಸ್ಯೆ ಗಣನೀಯ ಹೆಚ್ಚಳವಾಗಿದೆ. ಹೀಗಾಗಿ ಪಾಲಕರು ಹೆಚ್ಚು ಮುತುವರ್ಜಿ ವಹಿಸಿ ಮುಂಜಾಗ್ರತಾ ಕ್ರಮ ಕೈ ಗೊಳ್ಳುವ ಅಗತ್ಯವಿದೆ ಎಂದು ಹಿರಿಯ ನೇತ್ರತಜ್ಞ ಡಾ.ಮಲ್ಲಿಕಾರ್ಜುನ ಚಟನಳ್ಳಿ ಹೇಳಿದರು.

ಕೋವಿಡ್ ಮುಂಚೆ 14 ವರ್ಷದೊಳಗಿನ ಶಾಲಾ ಮಕ್ಕಳಲ್ಲಿ ಸಾಮಾನ್ಯ ದೃಷ್ಟಿದೋಷತೆ ಪ್ರಮಾಣ ಶೇ.6ರಷ್ಟಿತ್ತು. ಕೋವಿಡ್ ಬಳಿಕ ಇದು ಶೇ.30ಕ್ಕೇರಿದೆ. ಈ ಪ್ರಮಾಣ ಇನ್ನೂ ಕ್ರಮೇಣ ಹೆಚ್ಚುತ್ತಲೇ ಇರುವುದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ಆನ್ ಲೈನ್ ಕ್ಲಾಸ್, ಸ್ಮಾರ್ಟ್ ಕ್ಲಾಸ್, ಅತಿಯಾದ ಮೊಬೈಲ್, ಗ್ಯಾಜೆಟ್, ಟ್ಯಾಬ್ ಬಳಕೆ, ಟಿವಿ ವೀಕ್ಷಣೆ ಹೆಚ್ಚಳ ಮುಂತಾದವುಗಳಿಂದ ಮಕ್ಕಳ ಕಣ್ಣಿನ ಮೇಲೆ ವಿಕಿರಣ ಪ್ರತಿಕೂಲ ಪರಿಣಾಮವಾಗುತ್ತಿದೆ. ಹೀಗಾಗಿ ನಾವು ಏನು ಮಾಡಬೇಕು? ಏನು ಮಾಡಬಾರದು ಎಂಬುದರತ್ತ ಚಿತ್ತ ಹರಿಸಬೇಕಿದೆ ಎಂದರು.ಯುವಕರು ಸ್ವಂತ ಬಲದಿಂದ ಭವಿಷ್ಯ ಕಟ್ಟಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ

ಬೀದರ್: ಯುವ ಜನರು ಸ್ವಂತ ಬಲದ ಮೇಲೆ ಭವಿಷ್ಯ ಕಟ್ಟಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಕರೆ ನೀಡಿದರು.ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರ ಅಥವಾ ಬೇರೆಯವರ ನೆರವಿಗಾಗಿ ಕಾಯಬಾರದು. ಯಾರನ್ನೂ ಅವಲಂಬಿಸಬಾರದು. ಗಟ್ಟಿ ನಿರ್ಧಾರ ಕೈಗೊಂಡು, ಪರಿಶ್ರಮದಿಂದ ಉತ್ತಮ ಬದುಕು ರೂಪಿಸಿಕೊಳ್ಳಬೇಕೆಂದರು.

ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯಸ್ವಾಮಿ ಮಾತನಾಡಿ, ಯುವಕರು ದೇಶದ ಬೆನ್ನೆ ಲುಬು, ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಶಕ್ತಿ ಯುವಕರಲ್ಲಿದೆ. ಸರ್ಕಾರ ರಾಜಕೀಯ ಹಿನ್ನೆಲೆ ಹೊಂದಿರದ 1 ಲಕ್ಷ ಯುವಕರನ್ನು ಗ್ರಾಮ ಪಂಚಾ ಯಿತಿಯಿಂದ ಸಂಸತ್ ಸದಸ್ಯ ಸ್ಥಾನದವರೆಗೆ ಅಣಿಗೊಳಿಸಲು ಯೋಜನೆ ಹಾಕಿಕೊಂಡಿದೆ ಎಂದರು.

ಲಂಡನ್ ಯುವ ಪರಿಷತ್ ಗೌರವ ಸಂಚಾಲಕ ಆದೀಶ್ ರಜನೀಶ್ ವಾಲಿ ಮಾತನಾಡಿ, ಯುವಕರು ಉನ್ನತ ಗುರಿ ಇಟ್ಟುಕೊಳ್ಳಬೇಕು. ಮಹೋನ್ನತ ಸಾಧನೆ ಮಾಡಬೇಕೆಂದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಓಂಪ್ರಕಾಶ ರೊಟ್ಟೆ, ಪ್ರಭುಲಿಂಗ ಬಿರಾದಾರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶಿವಕುಮಾರ ಸ್ವಾಮಿ, ಮಹೇಶ ಗೋರನಾಳಕರ್ ಮಾತನಾಡಿದರು.

ನೆಹರೂ ಯುವ ಕೇಂದ್ರದ ಅಧಿಕಾರಿ ಮಯೂರಕುಮಾರ ಗೋರಮೆ ಉಪಸ್ಥಿತರಿದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಮಠ ಪ್ರಾಸ್ತಾವಿಕ ಮಾತನಾಡಿದರು. ಪವನ್ ಸ್ವಾಗತಿಸಿದರೆ ಜಯಪ್ರಕಾಶ ನಿರೂಪಿಸಿದರು. ಲಕ್ಷ್ಮಣ ಎಂ. ವಂದಿಸಿದರು.ಭಾರತದ ಸಾಂಸ್ಕೃತಿಕ ಏಕತೆ ಪ್ರತಿಪಾದಿಸಿದ ವಿವೇಕಾನಂದ: ನವೀಲಕುಮಾರ ಉತ್ಕಾರ್ಔರಾದ್: ಭಾಷಾ, ಜನಾಂಗೀಯ, ಐತಿಹಾಸಿಕ ಮತ್ತು ಪ್ರಾದೇಶಿಕ ವೈವಿಧ್ಯತೆಗಳ ಭಾರತದ ಸಾಂಸ್ಕೃತಿಕ ಏಕತೆಯನ್ನು ಬಲವಾಗಿ ಪ್ರತಿಪಾದಿಸಿದವರು ಸ್ವಾಮಿ ವಿವೇಕಾನಂದರು ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.ಸಂತಪೂರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಸೂಯೆ, ಅಹಂಕಾರ ತ್ಯಜಿಸಿ ಒಗ್ಗಟ್ಟಿನಿಂದ ಇರಲು ಹಾಗೂ ಯುವಕರು ಧೈರ್ಯ ತುಂಬಿ ಕೆಲಸ ಮಾಡಲು ಸಲಹೆ ನೀಡಿದವರು ಸ್ವಾಮಿ ವಿವೇಕಾನಂದರು.

ಉಪನ್ಯಾಸಕಿ ಅಶ್ವಿನಿ ಹಿಂದೊಡ್ಡಿ ಮಾತನಾಡಿದರು. ಉಪನ್ಯಾಸಕರಾದ ಶಿವಪುತ್ರ ಧರಣಿ, ರಾಜಕುಮಾರ ಹಳ್ಳಿಕರ್,ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗುನ್ನಳ್ಳಿಕರ್, ನಿರ್ಮಲಾ ಜಮಾದಾರ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಸುಧೀರ್ ಆಲೂರೆ, ಜಿತೇಂದ್ರ ಡಿಗ್ಗಿ, ಸಂತೋಷ ಧೋಳಗಂಡೆ ಪ್ರತಿಭಾವಂತ ವಿದ್ಯಾರ್ಥಿಗಳಾದ ಸುಧಾರಾಣಿ ಸಂಗಪ್ಪ, ಲಕ್ಷ್ಮಿ ಸಂಜುಕುಮಾರ ಇದ್ದರು.