ಕನ್ನಡಪ್ರಭ ವಾರ್ತೆ ವಿಜಯಪುರ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಹೆಚ್ಚು ಅವಧಿಗೆ (4399 ದಿನ) ಪ್ರಧಾನಿಯಾಗಿ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಯುವ ಮೋರ್ಚಾದಿಂದ ಭಾವಸಾರ ನಗರದ ವರದಹಸ್ತ ಆಂಜನೇಯ ದೇವಸ್ಥಾನದಲ್ಲಿ ಮತ್ತು ಸರ್ಕಾರಿ ಶಾಲೆ ನಂ.32ರಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಧಾನಿ ನರೇಂದ್ರ ಮೋದಿ ಅವರು ಸತತ ಹೆಚ್ಚು ಅವಧಿಗೆ (4399 ದಿನ) ಪ್ರಧಾನಿಯಾಗಿ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಯುವ ಮೋರ್ಚಾದಿಂದ ಭಾವಸಾರ ನಗರದ ವರದಹಸ್ತ ಆಂಜನೇಯ ದೇವಸ್ಥಾನದಲ್ಲಿ ಮತ್ತು ಸರ್ಕಾರಿ ಶಾಲೆ ನಂ.32ರಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ವಿಜಯಪುರ ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ವಿಶ್ವನಾಯಕ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಹೆಚ್ಚಿನ ಅವಧಿ ಪೂರೈಸಿದ್ದು, ನಮಗೆಲ್ಲ ಹೆಮ್ಮೆಯ ಸಂಗತಿ. ನರೇಂದ್ರ ಮೋದಿ ಕೇವಲ ಭಾರತಕ್ಕಷ್ಟೇ ಸೀಮಿತವಾಗದೆ ವಿಶ್ವದಲ್ಲಿಯೇ ಛಾಪು ಮೂಡಿಸಿದ್ದಾರೆ. ಅವರ ಕನಸಿನ ಕೂಸಾದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುತ್ತಿದ್ದು, ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂದಿರ, ಶಾಲೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯ ಹೀಗೆ ಮುಂದುವರೆಯುತ್ತದೆ ಎಂದರು.

ವಿಜಯಪುರ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಆನಂದ ಮುಚ್ಚಂಡಿ ಮಾತನಾಡಿ, ನರೇಂದ್ರ ಮೋದಿ ಅವರ ಆಶಯದಂತೆ ನಾವು ಸ್ವಚ್ಛ ಭಾರತ ಮಿಷನ್ ಅಂಗವಾಗಿ ಇನ್ನುಮುಂದೆ ತಿಂಗಳಿಗೆ ಎರಡು ದೇವಾಲಯಗಳು ಅಥವಾ ಶಾಲೆಗಳನ್ನು ಸ್ವಚ್ಛಗೊಳಿಸಿ ಸುಂದರ ಪರಿಸರ ನಿರ್ಮಾಣಮಾಡುವುದಾಗಿ ಭರವಸೆ ನೀಡಿದರು. ನರೇಂದ್ರ ಮೋದಿ ಅವರ ಅಧಿಕಾರದ ಹನ್ನೆರಡು ವರ್ಷ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಅವರು ನೀಡಿದ ಏಕ್ ಪೇಡ್ ಮಾ ಕೆ ನಾಮ್ ಎನ್ನುವ ವಿಚಾರದೊಂದಿಗೆ ನಗರದ ಪ್ರತಿ ವಾರ್ಡ್‌ಗಳಲ್ಲಿಯೂ ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿರುವುದಾಗಿ ತಿಳಿಸಿದರು.

ಮುಖಂಡರಾದ ಮಹೇಶ ಒಡೆಯರ, ಮಂಜುನಾಥ ಮೀಸೆ, ಜಗದೀಶ ಮುಚ್ಚಂಡಿ, ವಿವೇಕ ತಾವರಗೇರಿ, ಜಗದೀಶ ಮನಗೂಳಿ, ಪ್ರಫುಲ ಪವಾರ, ಮಂಥನ ಗಾಯಕವಾಡ, ಸಂತೋಷ ಪತ್ತಾರ, ಮಹಾನಗರ ಪಾಲಿಕೆಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಹಿರಿಯರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.