ಸಾರಾಂಶ
ಬಿಜೆಪಿ ಹೋರಾಟದ ಇತಿಹಾಸವು ಶ್ರಮ, ನಿಷ್ಠೆ ಮತ್ತು ತ್ಯಾಗದ ಪ್ರತೀಕವಾಗಿದೆ. 1984ರಲ್ಲಿ ಕೇವಲ 2 ಸ್ಥಾನಗಳೊಂದಿಗೆ ಆರಂಭವಾದ ಈ ಪಯಣ, ಸಾವಿರಾರು ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಇಂದು ಬಹುಮತದ ಸರ್ಕಾರ ರಚನೆವರೆಗೆ ತಲುಪಿದೆ.
ಮುಂಡರಗಿ: ಬಿಜೆಪಿ ಹೋರಾಟದ ಇತಿಹಾಸವು ಶ್ರಮ, ನಿಷ್ಠೆ ಮತ್ತು ತ್ಯಾಗದ ಪ್ರತೀಕವಾಗಿದೆ. 1984ರಲ್ಲಿ ಕೇವಲ 2 ಸ್ಥಾನಗಳೊಂದಿಗೆ ಆರಂಭವಾದ ಈ ಪಯಣ, ಸಾವಿರಾರು ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಇಂದು ಬಹುಮತದ ಸರ್ಕಾರ ರಚನೆವರೆಗೆ ತಲುಪಿದೆ. ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಅಪರೂಪದ ಸಾಧನೆಯಾಗಿದೆ ಎಂದು ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಹೇಳಿದರು.
ಅವರು ಭಾನುವಾರ ಪಟ್ಟಣದ ರಾಮೇನಹಳ್ಳಿ ರಸ್ತೆಯಲ್ಲಿರುವ ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಾಲಯದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸಮರ್ಪಿತ ಬಿಜೆಪಿ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಏಪ್ರಿಲ್ 6, 1980 ಈ ದಿನ ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ದೊರೆಯಿತು. ಜನ ಸಂಘದಿಂದ ಉದ್ಭವಿಸಿದ ಭಾರತೀಯ ಜನತಾ ಪಾರ್ಟಿ ರಾಷ್ಟ್ರ ಪ್ರಥಮ ತತ್ವ, ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಆಧಾರವಾಗಿಟ್ಟುಕೊಂಡು ದೇಶ ಸೇವೆಗೆ ಸಮರ್ಪಿತವಾದ ಪಕ್ಷವಾಗಿ ರೂಪುಗೊಂಡಿತು. ಸಹಸ್ರಾರು ನೇತಾರರ ತ್ಯಾಗ-ಬಲಿದಾನದಿಂದ ಹೆಮ್ಮರವಾಗಿ ಬೆಳೆದಿರುವ ದೇಶ ಭಕ್ತರ ಬಿಜೆಪಿ ಮತ್ತಷ್ಟು ಉತ್ತುಂಗಕ್ಕೇರಲು ಹಗಲಿರುಳು ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಂಡರಗಿ ಮಂಡಲದ ಕಾರ್ಯದರ್ಶಿ ಪ್ರಶಾಂತಗೌಡ ಗುಡದಪ್ಪನವರ, ಮೈಲಾರಪ್ಪ ಕಲಕೇರಿ, ಚಿನ್ನಪ್ಪ ವಡ್ಡರ, ಮಹೇಶ ಪವಾರ್, ಅಶೋಕ ಚೂರಿಯಂಕಪ್ಪ ಪುರದ, ಲೋಹಿತ್ ಪುರದ, ಬಸರಾಜ ಡಂಬಳ, ಮಂಜುನಾಥ ಮುಧೋಳ, ತಿಮ್ಮಪ್ಪ ದಂಡಿನ, ಸುರೇಶ ಬಾರಿಗಿಡದ, ಮರಿಯಪ್ಪ ರಾಮೇನಹಳ್ಳಿ, ವೆಂಕಟೇಶ್ ಲಮಾಣಿ, ಮಾರುತಿ ನಾಗರಹಳ್ಳಿ, ಮಹೇಶ ದೇಸಾಯಿ, ವೀಣಾ ಬೂದಿಹಾಳ, ಸೋಮರಡ್ಡಿ ಮುದ್ದಾಬಳ್ಳಿ, ಆನಂದ ಶಿರೋಳ, ರವಿ ಲಮಾಣಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.