ಸಾರಾಂಶ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೆಲವು ತಿಂಗಳಲ್ಲೇ ಜನರಿಗೆ ಬೇಸರ ತಂದಿದೆ. ಈ ಹಿಂದೆ ಭಯ್ಯಾಪುರ ಕೃಷ್ಣಾ ಬಿ-ಸ್ಕೀಂ ಯೋಜನೆ ಜಾರಿಯಾಗಲ್ಲ ಎಂದವರು ಈಗ ನಮ್ಮ ಸಾಧನೆಯಾಗಿದೆ ಎಂದು ಹೇಳುತ್ತಿದ್ದಾರೆ. ಇದು ದುರ್ಗತಿ.
ಕುಷ್ಟಗಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿ ರಾಜ್ಯದ 28 ಸ್ಥಾನಗಳಲ್ಲಿ ಗೆದ್ದು ಬರುತ್ತೇವೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳ್ಳಿಕೇರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನಮ್ಮ ಪಕ್ಷದವರ ವಿರುದ್ಧ ಮಾತನಾಡುತ್ತಿರುವ ಕುರಿತು ಸೂಕ್ತ ಕ್ರಮವನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಈ ಕುರಿತು ನಾನೇನು ಹೇಳುವುದಿಲ್ಲ ಎಂದರು.ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೆಲವು ತಿಂಗಳಲ್ಲೇ ಜನರಿಗೆ ಬೇಸರ ತಂದಿದೆ. ಈ ಹಿಂದೆ ಭಯ್ಯಾಪುರ ಕೃಷ್ಣಾ ಬಿ-ಸ್ಕೀಂ ಯೋಜನೆ ಜಾರಿಯಾಗಲ್ಲ ಎಂದವರು ಈಗ ನಮ್ಮ ಸಾಧನೆಯಾಗಿದೆ ಎಂದು ಹೇಳುತ್ತಿದ್ದಾರೆ. ಇದು ದುರ್ಗತಿ ಎಂದರು.ನನಗೆ ಇಂದು ಒಲಿದ ಬಿಜೆಪಿಯ ರಾಜ್ಯ ಕಾರ್ಯದರ್ಶಿಯ ಸ್ಥಾನವು ಎರಡು ದಶಕದ ಹೋರಾಟದ ಫಲವಾಗಿದೆ. ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಸೇವೆ, ಹೋರಾಟ ಸಂಘಟಿಸಿದ ಹಿನ್ನೆಲೆಯಲ್ಲಿ ನನಗೆ ಉನ್ನತ ಜವಾಬ್ದಾರಿ ಸಿಕ್ಕಿದೆ ಎಂದರು.ಶಾಸಕ ದೊಡ್ಡನಗೌಡರಿಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯಸಚೇತಕರಾಗಿ ನೇಮಕ ಮಾಡಿದ್ದು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವು ಗ್ಯಾರಂಟಿ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಮಹೇಶ, ಶಂಕರಗೌಡ ಪಾಟೀಲ, ಮುತ್ತು ರಾಠೋಡ, ಚಂದ್ರು ವಡಿಗೇರಿ, ಸುರೇಶ ಮಂಗಳೂರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))