ಜಗಳೂರು ತಾಲೂಕಿನ ಬಂಗಾರಕ್ಕನ ಗುಡ್ಡದಲ್ಲಿ ಸರ್ಕಾರದ ಯಾವುದೇ ಪೂರ್ವ ಪರವಾನಗಿ ಪಡೆಯದೇ ಹಾಗೂ ಜಮೀನು ಮಾಲೀಕರ ಮುಂಗಡ ಅನುಮತಿಯೂ ಇಲ್ಲದೇ ಬೃಹತ್ ಕಲ್ಲು ಬಂಡೆಗಳನ್ನು ಸ್ಫೋಟಿಸಲಾಗಿದೆ. ಇದರಿಂದ ಸಾರ್ವಜನಿಕರ ಜೀವಕ್ಕೆ ಹಾಗೂ ಆಸ್ತಿಗೆ ಕಂಟಕ ತಂದೊಡ್ಡಿದ್ದ ಖಾಸಗಿ ಕಂಪನಿಯೊಂದರ ಸಬ್ಕಂಟ್ರ್ಯಾಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಬಂಗಾರಕ್ಕನ ಗುಡ್ಡದಲ್ಲಿ ಸರ್ಕಾರದ ಯಾವುದೇ ಪೂರ್ವ ಪರವಾನಗಿ ಪಡೆಯದೇ ಹಾಗೂ ಜಮೀನು ಮಾಲೀಕರ ಮುಂಗಡ ಅನುಮತಿಯೂ ಇಲ್ಲದೇ ಬೃಹತ್ ಕಲ್ಲು ಬಂಡೆಗಳನ್ನು ಸ್ಫೋಟಿಸಲಾಗಿದೆ. ಇದರಿಂದ ಸಾರ್ವಜನಿಕರ ಜೀವಕ್ಕೆ ಹಾಗೂ ಆಸ್ತಿಗೆ ಕಂಟಕ ತಂದೊಡ್ಡಿದ್ದ ಖಾಸಗಿ ಕಂಪನಿಯೊಂದರ ಸಬ್ಕಂಟ್ರ್ಯಾಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಬಂಗಾರಕ್ಕನಗುಡ್ಡ ಗ್ರಾಮದ ಸರ್ವೆ ನಂಬರ್ 44ರ ಜಮೀನಿನಲ್ಲಿ ಕೆಇಬಿ ಲೈನ್ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದ ** ''''Resonia, Ananthaapur II REZ Transmission Limited'''' ** ಖಾಸಗಿ ಕಂಪನಿಯು ಯಾವುದೇ ಭದ್ರತಾ ನಿಯಮಗಳನ್ನು ಪಾಲಿಸದೇ ಅ.17ರ ಶನಿವಾರ ಸಂಜೆ 4:30ರ ವೇಳೆಗೆ, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡದೇ, ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳದೇ ಬೃಹತ್ ಕಲ್ಲು ಬಂಡೆಗಳಿಗೆ ರಂಧ್ರ (ಡ್ರಿಲ್ಲಿಂಗ್) ಕೊರೆದು ಅನಧಿಕೃತವಾಗಿ ಸ್ಫೋಟಕಗಳನ್ನು ಬಳಸಿ ಬ್ಲಾಸ್ಟಿಂಗ್ ನಡೆಸಿದೆ.
ಈ ಬ್ಲಾಸ್ಟಿಂಗ್ನಿಂದಾಗಿ ಸುತ್ತಮುತ್ತಲಿನ ಕೃಷಿ ಭೂಮಿಗೆ ಭಾರಿ ಹಾನಿ ಆಗುವುದರ ಜೊತೆಗೆ, ಸ್ಥಳೀಯ ರೈತರು ಹಾಗೂ ಸಾರ್ವಜನಿಕರ ಜೀವಕ್ಕೆ ತೀವ್ರ ಅಪಾಯ ಎದುರಾಗಿದೆ. ಈ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಗಾರ ಹೆಡ್ ಕಾನ್ಸ್ಟೇಬಲ್ ಪಕ್ಷಣ್ಣ ಅವರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಬ್ಲಾಸ್ಟಿಂಗ್ ಮಾಹಿತಿ ತಿಳಿದು ಹೈವೇ ಮೊಬೈಲ್ ವಾಹನದ ಎಎಸ್ಐ ಶಿವಪ್ರಸಾದ್ ಎಚ್.ಆರ್., ಎಚ್.ಸಿ ವಸಂತ ರೆಡ್ಡಿ ಹಾಗೂ ದೂರುದಾರರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಯಾವುದೇ ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಬ್ಲಾಸ್ಟಿಂಗ್ ಮಾಡುತ್ತಿದ್ದ ಕೃತ್ಯ ಬಯಲಾಗಿದೆ.ಆಂಧ್ರ ಆರೋಪಿಗಳ ವಿರುದ್ಧ ದೂರು:
ಕಂಪನಿ ಪರವಾಗಿ ಈ ಸ್ಫೋಟದ ಅಕ್ರಮ ಕೃತ್ಯದಲ್ಲಿ ಭಾಗಿಯಾದ ಆಂಧ್ರಪ್ರದೇಶ ಮೂಲದ ಧರ್ಮಾವರಂ ತಾಲೂಕಿನ ಸಬ್ಕಂಟ್ರ್ಯಾಕ್ಟರ್ ಗೋಗುಲ ಲಿಂಗಮಯ್ಯ, ವೆಂಕಟೇಶ, ರಾಜು ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಪ್ರಕರಣದ ಗಂಭೀರತೆ ಪರಿಗಣಿಸಿ ಜಗಳೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.- - -
-18 ಜೆ.ಜಿ.ಎಲ್.1: (** ಇಂಗ್ಲಿಷ್ ಅಕ್ಷರಗಳಿವೆ, ಗಮನಿಸಿ...)