ಬಿಜೆಪಿ ಬಡವರ ಪರ ಯಾವುದೇ ಯೋಜನೆ ಜಾರಿಗೊಳಿಸಿಲ್ಲ: ಸುನಿಲ್ ಬೋಸ್

| Published : Apr 01 2024, 12:47 AM IST

ಬಿಜೆಪಿ ಬಡವರ ಪರ ಯಾವುದೇ ಯೋಜನೆ ಜಾರಿಗೊಳಿಸಿಲ್ಲ: ಸುನಿಲ್ ಬೋಸ್
Share this Article
  • FB
  • TW
  • Linkdin
  • Email

ಸಾರಾಂಶ

ಎಚ್.ಸಿ. ಮಹದೇವಪ್ಪ ಅವರು 40 ವರ್ಷಗಳ ಸುಧೀರ್ಘ ರಾಜಕೀಯದಲ್ಲಿ ಚಾಮರಾಜನಗರ ಮೈಸೂರು ಜಿಲ್ಲೆಗಳ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾನು ಕೂಡ 17 ವರ್ಷದಿಂದ ಜನರೊಂದಿಗೆ ಒಡನಾಟವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಬಿಜೆಪಿ ಕಳೆದ 10 ವರ್ಷಗಳಲ್ಲಿ ಬಡವರ ಪರವಾಗಿ ಯಾವುದೇ ಯೋಜನೆ ಜಾರಿಗೊಳಿಸಿಲ್ಲ. ಬದಲಾಗಿ ಹಿಂದುತ್ವ, ಶ್ರೀರಾಮ, ದೇಶಭಕ್ತಿಯ ಕೋಮುದ್ವೇಷ ಭಿತ್ತಿ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸುನಿಲ್ ಬೋಸ್ ಆರೋಪಿಸಿದರು.

ತಾಲೂಕಿನ ಮಲ್ಲನಮೂಲೆ ಮಠಕ್ಕೆ ಭೇಟಿ ನೀಡಿ ಶ್ರೀ ಚೆನ್ನಬಸವಸ್ವಾಮೀಜಿ ಮತ್ತು ದೇವನೂರು ಮಠದ ಶ್ರೀಮಹಾಂತ ಸ್ವಾಮೀಜಿ ಆಶೀರ್ವಾದ ಬಳಿಕ ಸುದ್ದಿಗಾರರೊಡನೆ ಮಾತನಾಡಿದರು.

ನನ್ನ ತಂದೆ ಎಚ್.ಸಿ. ಮಹದೇವಪ್ಪ ಅವರು 40 ವರ್ಷಗಳ ಸುಧೀರ್ಘ ರಾಜಕೀಯದಲ್ಲಿ ಚಾಮರಾಜನಗರ ಮೈಸೂರು ಜಿಲ್ಲೆಗಳ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾನು ಕೂಡ 17 ವರ್ಷದಿಂದ ಜನರೊಂದಿಗೆ ಒಡನಾಟವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಲ್ಲಾ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಅವರ ಸಂಪೂರ್ಣ ಬೆಂಬಲ ಮತ್ತು ಕಾರ್ಯಕರ್ತರ ಶ್ರಮದಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸವಿದೆ ಎಂದು ಅವರು ಹೇಳಿದರು.

ನಾನು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ದಿ.ಆರ್. ಧ್ರುವನಾರಾಯಣ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಿಸುತ್ತೇನೆ ಎಂದರು.

ಈ ವೇಳೆ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬುಲೆಟ್ ಮಹದೇವಪ್ಪ, ಮುಖಂಡರಾದ ಇಂಧನ್ ಬಾಬು, ಜಿಪಂ ಮಾಜಿ ಸದಸ್ಯರಾದ ಕೆ.ಬಿ. ಸ್ವಾಮಿ, ಚೋಳರಾಜು, ತಾಪಂ ಮಾಜಿ ಅಧ್ಯಕ್ಷ ತಮ್ಮಣ್ಣೇಗೌಡ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಕೆಂಪಣ್ಣ, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿಂ, ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ನಂಜುಂಡಸ್ವಾಮಿ, ದೇಬೂರು ಪರಶಿವಮೂರ್ತಿ, ಲಕ್ಷ್ಮೀ ನಾರಾಯಣ, ಸಿ.ಆರ್. ಮಹದೇವು, ಅಜ್ಗರ್, ಎನ್.ಟಿ. ಗಿರೀಶ್, ತಾಪಂ ಮಾಜಿ ಸದಸ್ಯ ಚಾಮರಾಜು ಮೊದಲಾದವರು ಇದ್ದರು.