ಕಬ್ಬನ್‌ ಪಾರ್ಕಲ್ಲಿ ಬ್ಲೈಂಡ್‌ ಡೇಟ್‌: ಬುಕ್‌ ಮೈ ಶೋ ವಿರುದ್ಧ ಕೇಸ್‌- ಯುವತಿಯರಿಗೆ ₹199, ಯುವಕರಿಗೆ ₹1499 ನಿಗದಿ

| Published : Aug 01 2025, 11:45 PM IST

ಕಬ್ಬನ್‌ ಪಾರ್ಕಲ್ಲಿ ಬ್ಲೈಂಡ್‌ ಡೇಟ್‌: ಬುಕ್‌ ಮೈ ಶೋ ವಿರುದ್ಧ ಕೇಸ್‌- ಯುವತಿಯರಿಗೆ ₹199, ಯುವಕರಿಗೆ ₹1499 ನಿಗದಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿಯ ಹೆಗ್ಗುರುತುಗಳಲ್ಲಿ ಒಂದಾಗಿರುವ ಕಬ್ಬನ್‌ ಪಾರ್ಕ್‌ನಲ್ಲಿ ಯಾರ ಅನುಮತಿಯನ್ನೂ ಪಡೆಯದೆ ‘ಬ್ಲೈಂಡ್‌ ಡೇಟ್‌’ಗೆ ಬುಕಿಂಗ್‌ ಅವಕಾಶ ಕಲ್ಪಿಸಿದ್ದ ‘ಬುಕ್‌ ಮೈ ಶೋ’ ಕಂಪನಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ತೋಟಗಾರಿಕೆ ಇಲಾಖೆ ಆ ಸಂಸ್ಥೆ ವಿರುದ್ಧ ಕೇಸು ದಾಖಲಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬುಕ್ ಮೈ ಶೋ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ‘ಬ್ಲೈಂಡ್ ಡೇಟ್‌’ಗೆಂದು ಆ.2ರಿಂದ 31ರವರೆಗೆ ನೋಂದಣಿಗೆ ಅವಕಾಶ ನೀಡಿದ್ದು, ಯುವತಿಯರಿಗೆ 199 ರು. ಮತ್ತು ಯುವಕರಿಗೆ 1499 ರು. ಗಳ ಪ್ರವೇಶ ಶುಲ್ಕ ನಿಗದಿಪಡಿಸಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಬ್ಬನ್‌ ಪಾರ್ಕ್‌ನಲ್ಲಿ ಪರಸ್ಪರರ ಭೇಟಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿ ಬುಕಿಂಗ್‌ ಮಾಡಿಕೊಳ್ಳುತ್ತಿದೆ.

ಈ ವಿಚಾರ ತಡವಾಗಿ ತಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಬುಕ್‌ಮೈ ಶೋ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿರುವುದಾಗಿ ಕಬ್ಬನ್‌ಪಾರ್ಕ್‌ ಉಪನಿರ್ದೇಶಕಿ ಜಿ.ಕುಸುಮಾ ಅವರು ತಿಳಿಸಿದ್ದಾರೆ. ಬ್ಲೈಂಡ್ ಡೇಟ್ ಎಂದರೇನು?ಹಿಂದೆಂದೂ ಭೇಟಿಯಾಗಿರದ ಇಬ್ಬರು ವ್ಯಕ್ತಿಗಳ (ಸ್ತ್ರೀ-ಪುರುಷ) ನಡುವಿನ ಸಾಮಾಜಿಕ ಸಭೆ. ಈ ಇಬ್ಬರು ವ್ಯಕ್ತಿಗಳು ಬುಕ್‌ ಮೈ ಶೋ ವೆಬ್‌ಸೈಟ್‌ ಮೂಲಕ ನೋಂದಣಿಯಾದರೆ, ಅವರಿಬ್ಬರು ಪರಸ್ಪರ ಪರಿಚಯವಾಗಲು ದಿನ, ಸಮಯ ಮತ್ತು ಸ್ಥಳವನ್ನು ನಿಗದಿಪಡಿಸಿ ಭೇಟಿ ಮಾಡಿಸಲಾಗುತ್ತದೆ.