ಬಿಜೆಪಿ ಮುಖಂಡರ ಬಿರುಸಿನ ಪ್ರಚಾರ

| Published : May 01 2024, 01:20 AM IST

ಸಾರಾಂಶ

ಭಾರತವನ್ನು ವಿಶ್ವದ ಅಭಿವೃದ್ಧಿ ರಾಷ್ಟ್ರಗಳ ಸಾಲಿಗೆ ತರಲು ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ಹಾಕಬೇಕಾಗಿದೆ ಎಂದು ಬಿಜೆಪಿ ಮುಖಂಡ ಆರುಂಡಿ ನಾಗರಾಜ ಹೇಳಿದರು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರ ಪರವಾಗಿ ಇಲ್ಲಿಯ ಬಿಜೆಪಿ ಮುಖಂಡರು ಕಳೆದ ಎರಡು ದಿನಗಳಿಂದ ಬಿರುಸಿನ ಪ್ರಚಾರ ಕೈಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಆರುಂಡಿ ನಾಗರಾಜ, ಈ ಚುನಾವಣೆ ದೇಶಕ್ಕೆ ಸಂಬಂಧಿಸಿದ ಚುನಾವಣೆಯಾಗಿದ್ದು, ರಾಷ್ಟ್ರದ ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಭಾರತವನ್ನು ವಿಶ್ವದ ಅಭಿವೃದ್ಧಿ ರಾಷ್ಟ್ರಗಳ ಸಾಲಿಗೆ ತರಲು ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ಹಾಕಬೇಕಾಗಿದೆ ಎಂದು ಹೇಳಿದರು.

ರೈತರಿಗೆ, ಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ ಹೀಗೆ ಎಲ್ಲ ವಯೋಮಾನದವರಿಗೂ, ಎಲ್ಲ ವರ್ಗದವರಿಗೂ ಸಮ ಬಾಳು, ಸಮಪಾಲು ಕೊಡುವ ನಿಟ್ಟಿನಲ್ಲಿ ಭಾರತವನ್ನು ಮೋದಿ ಮುನ್ನಡೆಸುತ್ತಿದ್ದಾರೆ. ಈ ಬಾರಿ ಮೋದಿ ಪುನಃ ಪ್ರಧಾನಿಯಾದರೆ ಭಾರತ ಅತ್ಯಂತ ಬಲಿಷ್ಠವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ತಿಪ್ಪನಾಯಕನಹಳ್ಳಿ, ಶಿವಪುರ, ಮಾಡ್ಲಗೇರಿ, ಮಾಡ್ಲಗೇರಿ ತಾಂಡಾ, ಸಾಸ್ವಿಹಳ್ಳಿ, ಕಡಬಗೇರಿ, ನಿಚ್ಚವನಹಳ್ಳಿ, ಪವನಪುರ, ಕನಕನಬಸ್ಸಾಪುರ, ಅಡವಿಮಲ್ಲಾಪುರ ಸೇರಿದಂತೆ ಅನೇಕ ಹಳ್ಳಿಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಯಾಚನೆ ಮಾಡಿದರು.

ಹರಪನಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ, ಮುಖಂಡರಾದ ಜಿ.ನಂಜನಗೌಡ, ಬಾಗಳಿ ಎನ್.ಕೊಟ್ರೇಶಪ್ಪ, ಎಂ.ಪಿ. ನಾಯ್ಕ, ಪುರಸಭಾ ಮಾಜಿ ಅಧ್ಯಕ್ಷ ಹರಾಳು ಅಶೋಕ, ಕಣವಿಹಳ್ಳಿ ಮಂಜುನಾಥ, ಕೆ. ಮಲ್ಲಿಕಾರ್ಜುನ, ವಕೀಲ ಪ್ರಾಣೇಶ, ಚೆನ್ನನಗೌಡ, ಕುಸುಮಾ , ಸಣ್ಣ ಹಾಲಪ್ಪ, ಇತರರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.