೨೦ ಹಳ್ಳಿಗಳಿಗೆ ಬೆಳೆವಿಮೆ ಬಾರದಿರುವುದನ್ನು ಖಂಡಿಸಿ ಪ್ರತಿಭಟನೆ

| Published : Oct 23 2024, 12:43 AM IST

೨೦ ಹಳ್ಳಿಗಳಿಗೆ ಬೆಳೆವಿಮೆ ಬಾರದಿರುವುದನ್ನು ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ತಾಲೂಕಿನ ರೈತರಿಗೆ ಖಾಸಗಿ ವಿಮಾ ಕಂಪನಿಯವರು ಕೂಡಲೇ ಬೆಳೆವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ತಾಲೂಕಿನ ಹೆಡಿಯಾಲ ಬಳಿ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ನಂತರ ಗ್ರಾಪಂ ಕಚೇರಿಗೆ ಬೀಗ ಜಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹಿರೇಕೆರೂರು: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹಾಗೂ ಸಾಂಖಿಕ ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲೂಕಿನ ೨೦ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬೆಳೆ ವಿಮೆ ಬಾರದೆ ಇಂದು ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ರೀತಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಮುಂದುವರೆದಲ್ಲಿ ಉಗ್ರ ಹೋರಾಟ ಮಾಡಬೇಕಾಗುತದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಎಚ್ಚರಿಸಿದರು.ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲೂಕಿನ ೨೦ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ೨೦೨೩-೨೪ ನೇ ಸಾಲಿನ ಬೆಳೆವಿಮೆ ಬಿಡುಗಡೆ ಮಾಡದೇ ಇರುವುದನ್ನು ಖಂಡಿಸಿ ಸೋಮವಾರ ಸರ್ವಜ್ಙ ವೃತ್ತದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಮೂಲಕ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದರು.ತಾಲೂಕಿನ ಕೆಲವು ಕಡೆ ೨೦ ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸರಿಯಾದ ಮಾಹಿತಿ ಸಂಗ್ರಹಿಸದೇ ಬೆಳೆ ನಷ್ಟ ಒಳಗಾಗಿದ್ದರೂ ಚೆನ್ನಾಗಿ ಆಗಿದೆ ಎಂದು ವರದಿ ನೀಡಿದ್ದು, ರೈತರು ಬೆಳೆವಿಮೆಯಿಂದ ವಂಚಿತರಾಗಿದ್ದಾರೆ. ೨೦೨೩-೨೪ನೇ ಸಾಲಿನಲ್ಲಿ ಬೆಳೆಗಳಿಂದ ನಿರೀಕ್ಷಿತ ಫಸಲು ಬಂದಿಲ್ಲ ಎಂಬುದು ಎಲ್ಲರ ಕಣ್ಣಿಗೂ ಕಾಣುವ ಸತ್ಯ. ಆದರೆ ತಾಲೂಕಿನ ೧೦ಗ್ರಾ.ಪಂ ವ್ಯಾಪ್ತಿಯಲ್ಲಿ ಒಳ್ಳೆಯ ಬೆಳೆ ಆಗಿದೆ ಎಂದು ವರದಿ ಕೊಟ್ಟಿರುವ ಪರಿಣಾಮ ವಿಮೆ ಕಟ್ಟಿರುವ ರೈತರಿಗೆ ಬಿಡಿಗಾಸು ಬಂದಿಲ್ಲ. ಇದ್ದಕ್ಕೆ ಅಧಿಕಾರಿಗಳೇ ಹೊಣೆ. ಅಧಿಕಾರಿಗಳಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆದ ಮೆಕ್ಕೆಜೋಳಕ್ಕೆ ಯಾವುದೇ ಹಾನಿಯಾಗಿಲ್ಲ, ಪೂರ್ಣ ಪ್ರಮಾಣದ ಫಸಲು ಬಂದಿದೆ ಎಂಬ ವರದಿ ನೀಡಲಾಗಿದೆ. ಹೀಗಾಗಿ ತಾಲೂಕಿನ ಸುಮಾರು ೩೦ ಸಾವಿರಕ್ಕೂ ಹೆಚ್ಚು ರೈತರಿಗೆ ವಿಮೆ ಬಂದಿಲ್ಲ. ರೈತರಿಗೆ ಆದ ಅನ್ಯಾಯದಲ್ಲಿ ಕಿರಿಯ ಅಧಿಕಾಗಳಿಂದ ಹಿಡಿದು ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನನ್ನ ಅಧಿಕಾರ ಅವಧಿಯಲ್ಲಿ ರೈತರಿಗೆ ಯಾವುದೇ ಅನ್ಯಾಯ ಆಗಲು ಬಿಟ್ಟಿಲ್ಲ ಈಗೂ ಸಹ ಬಿಡುವುದಿಲ್ಲ. ರೈತರಿಗೋಸ್ಕರ ಉಗ್ರ ಹೋರಾಟಕ್ಕೂ ಸಿದ್ಧ. ಬೇರೆ ಬೇರೆಯವರು ಬೇರೆ ಬೇರೆ ಕಾರಣಕ್ಕೆ ಜೈಲು ಸೇರಿದ್ದಾರೆ ಆದರೆ ನಾನು ರೈತರಿಗೆ ನ್ಯಾಯ ಕೊಡಿಸಲು ಜೈಲು ಸೇರಲು ಸಿದ್ಧ. ಈ ಹಿಂದೆ ರೈತರಿಗೋಸ್ಕರ ಜೈಲು ಕಂಡು ಬಂದಿದ್ದೇನೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸದ್ಯ ೧೫-೨೦ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತದೆ ಹೊಲದಲ್ಲಿನ ಮೆಕ್ಕೆಜೊಳ ಮಳೆಯಿಂದ ಅಲ್ಲಿಯೇ ಮೊಳಕೆ ಒಡೆದು ಹಾಳಾಗುತ್ತಿದೆ. ಈ ವರ್ಷವೂ ಸಹ ರೈತರಿಗೆ ಫಸಲು ಸಿಗುವದು ಅನುಮಾನ ಕಾರಣ ತಕ್ಷಣ ಅಧಿಕಾರಿಗಳು ತಮ್ಮ ಎಲ್ಲ ಕೆಲಸಗಳನ್ನು ಬದಿಗಿಟ್ಟು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಮುಂದಾಗಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಎನ್.ಎಮ್. ಈಟೇರ, ಲಿಂಗರಾಜ ಚಪ್ಪರದಹಳ್ಳಿ, ಡಿ.ಎಮ್. ಸಾಲಿ, ರವಿಶಂಕರ ಬಾಳಿಕಾಯಿ, ಪರಮೇಶಪ್ಪ ಹಲಗೇರಿ, ಶಿವಕುಮಾರ ತಿಪ್ಪಶೆಟ್ಟಿ, ದೇವರಾಜ ನಾಗಣ್ಣನವರ, ಜಗದೀಶ ದೊಡ್ಡಗೌಡ್ರ, ಮಾಲತೇಶ ಗಂಗೋಳ, ಆನಂದಪ್ಪ ಹಾದಿಮನಿ, ರೇಣುಕಪ್ಪ ಭರಮಗೌಡ್ರ, ಬಸವರಾಜ ಭರಮಗೌಡ್ರ, ಹುಚ್ಚನಗೌಡ ಕಬ್ಬಕ್ಕಿ, ಮಂಜುಳಾ ಬಾಳಿಕಾಯಿ, ಬಸಮ್ಮ ಅಬಲೂರ, ಗೀತಾ ದಂಡಗಿಹಳ್ಳಿ, ಶಿವಲೀಲಾ ರಂಗಕ್ಕನವರ, ಸುಶೀಲಾ ನಾಡಿಗೇರ, ನಿಂಗಾಚಾರಿ ಮಾಯಾಚಾರಿ, ಶಿವಶಂಕರ ಕುಸುಗೂರ, ಕುಬೇರಗೌಡ ಭರಮಗೌಡ್ರ, ಗಿರೀಶ ಬಿಳಕ್ಕಿ, ನಾಗರಾಜ ಬಣಕಾರ, ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ರೈತರು ಭಾಗವಹಿಸಿದ್ದರು.