ಕಾಪು: ಅದಾನಿ ಸಮೂಹದ ಸ್ಥಾಪಕ, ಅಧ್ಯಕ್ಷ ಗೌತಮ್ ಅದಾನಿ ಅವರ 64 ನೇ ಜನ್ಮದಿನದ ಪ್ರಯುಕ್ತ ಅದಾನಿ ಪವರ್ ಲಿಮಿಟೆಡ್‌ನ ಉಡುಪಿ ಥರ್ಮಲ್ ಪವರ್ ಪ್ಲಾಂಟ್ ವತಿಯಿಂದ ತನ್ನ ಸಿಎಸ್‌ಆರ್ ಕಾರ್ಯಕ್ರಮದಡಿ ಗೋ-ರೆಡ್ ಹೆಸರಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಯಶ್ವಸಿಯಾಗಿ ಆಯೋಜಿಸಿತು. ದಿನವಿಡೀ ನಡೆದ ಈ ರಕ್ತದಾನ ಶಿಬಿರದಲ್ಲಿ ಒಟ್ಟು 206 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಈ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶರತ್ ಕುಮಾರ್, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ. ವೀಣಾ ಕುಮಾರಿ, ಅದಾನಿ ಸಮೂಹದ ಕಾರ್ಯನಿರ್ವಾಹಕರ ನಿರ್ದೇಶಕ ಕಿಶೋರ್ ಆಳ್ವ ಅವರು ಜೊತೆಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಆಳ್ವ ಅವರು, ದೇಶಾದ್ಯಂತ ಇರುವ ಅದಾನಿ ಸಮೂಹದ ಎಲ್ಲ ಘಟಕಗಳಲ್ಲಿ ಗೌತಮ್ ಅದಾನಿ ಅವರ ಜನ್ಮದಿನವನ್ನು ಮಾನವೀಯ ಸೇವೆಯ ಸಂಕೇತವಾಗಿ ಆಚರಿಸಲು ಗೋ-ರೆಡ್’ ಕಾರ್ಯಕ್ರಮದ ಮೂಲಕ ಸಾವಿರಾರು ನೌಕರರು ಒಂದಾಗಿ ರಕ್ತದಾನ ಮಾಡುತ್ತಾರೆ. ರಕ್ತದಾನವು ಮಾನವೀಯತೆಯ ಅತ್ಯಂತ ಶ್ರೇಷ್ಟ ಅಭಿವ್ಯಕ್ತಿಗಳಲ್ಲೊಂದಾಗಿದ್ದು, ಇದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಮ್ಮ ಕೊಡುಗೆಯ ಸಂಕೇತವಾಗಿದೆ ಎಂದರು.
ಉಡುಪಿ ಅದಾನಿ ಪವರ್ ಲಿಮಿಟೆಡ್ನಲ್ಲಿ ರಕ್ತದಾನ ಶಿಬಿರ 206 ಯುನಿಟ್ ರಕ್ತ ಸಂಗ್ರಹ
ಅದಾನಿ ಸಮೂಹದ ಸ್ಥಾಪಕ, ಅಧ್ಯಕ್ಷ ಗೌತಮ್ ಅದಾನಿ ಅವರ 64 ನೇ ಜನ್ಮದಿನದ ಪ್ರಯುಕ್ತ ಅದಾನಿ ಪವರ್ ಲಿಮಿಟೆಡ್‌ನ ಉಡುಪಿ ಥರ್ಮಲ್ ಪವರ್ ಪ್ಲಾಂಟ್ ವತಿಯಿಂದ ತನ್ನ ಸಿಎಸ್‌ಆರ್ ಕಾರ್ಯಕ್ರಮದಡಿ ಗೋ-ರೆಡ್ ಹೆಸರಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಯಶ್ವಸಿಯಾಗಿ ಆಯೋಜಿಸಿತು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.