ಕಂಪ್ಲಿಯಲ್ಲಿ ರಕ್ತದಾನ ಶಿಬಿರ

| Published : Apr 02 2024, 01:01 AM IST

ಸಾರಾಂಶ

12ನೇ ಶತಮಾನದ ಯುಗಪುರುಷ ಸಾಂಸ್ಕೃತಿಕ ನಾಯಕ ಬಸವಣ್ಣನವರ "ಕಾಯಕವೇ ಕೈಲಾಸ " ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಂಪ್ಲಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತ್ರಿವಿಧ ದಾಸೋಹಿ ಸಿದ್ದಗಂಗಾ ಶಿವಕುಮಾರ ಶ್ರೀ 117ನೇ ಜಯಂತಿ ಅಂಗವಾಗಿ ಜೆಸಿಐ ಕಂಪ್ಲಿ ಸೋನಾ ಹಾಗೂ ಬಳ್ಳಾರಿಯ ಸ್ವಾಮಿ ವಿವೇಕಾನಂದ ರಕ್ತ ಭಂಡಾರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸುಹಾಸ್ ಚಿತ್ರಗಾರ ಮಾತನಾಡಿ, ಶಿವಕುಮಾರ ಮಹಾಸ್ವಾಮಿಗಳು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿಗಳಾಗಿದ್ದರು. 12ನೇ ಶತಮಾನದ ಯುಗಪುರುಷ ಸಾಂಸ್ಕೃತಿಕ ನಾಯಕ ಬಸವಣ್ಣನವರ "ಕಾಯಕವೇ ಕೈಲಾಸ " ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜಾತಿ, ಮತ, ಪಂಥ, ಧರ್ಮ ಎನ್ನದೆ ಸರ್ವ ಜನಾಂಗದ ಮಕ್ಕಳಿಗೂ ಅನ್ನ, ಅಕ್ಷರ, ಜ್ಞಾನ ನೀಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಪ್ರತಿಯೊಬ್ಬರು ಇವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜೆಸಿಐ ಅಂತಾರಾಷ್ಟ್ರೀಯ ಅಧಿಕಾರಿ ಸೆನೇಟರ್ ಅರವಿಂದ್ ಬುರೆಡ್ಡಿ, ಜೆಸಿಐ ವಲಯ 24ರ ಉಪಾಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ, ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಕನಿಕೇರಿ, ಡಾ. ಮಲ್ಲೇಶಪ್ಪ, ಡಾ. ಭರತ್ ಪದ್ಮಶಾಲಿ, ಆರೋಗ್ಯ ನಿರೀಕ್ಷಣಾಧಿಕಾರಿ ಚೆನ್ನಬಸವರಾಜ್, ಜೆಸಿಗಳಾದ ಬಡಿಗೇರ್ ಜಿಲಾನ್ ಸಾಬ್, ಮಂಜೇಶ್ ದರೋಜಿ, ಇಂದ್ರಜಿತ್ ಸಿಂಗ್, ಅಮೃತಾ ಸಂತೋಷ್, ಸಿದ್ದರಾಮೇಶ್ವರ, ಅಮರನಾಥ ಶಾಸ್ತ್ರಿ, ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಸಿಬ್ಬಂದಿ ನಂಜುಂಡ, ಸಂತೋಷ್, ಅಂಬರೀಶ್, ನಂದೀಶ್ ಇದ್ದರು.