ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುದೇರೆಬೈಲು ಕೊಂಚಾಡಿಯ ವಿದ್ಯಾ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ತಲಸ್ಸೇಮಿಯಾ ಮತ್ತು ಸಿಕಲ್‌ಸೆಲ್ ದಿವ್ಯಾಂಗರಿಗಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಭಾನುವಾರ ನಡೆಯಿತು.ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಜೈ ತುಳುನಾಡ್ ಮಂಗಳೂರು ಘಟಕ ಮತ್ತು ಸೇವಾ ಭಾರತಿ ಮಂಗಳೂರು, ವೆನ್ಲಾಕ್ ಆಸ್ಪತ್ರೆ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 70ಕ್ಕೂ ಅಧಿಕ ಮಂದಿ ಸ್ವಯಂಪ್ರೇರಿತರಾಗಿ ನೋಂದಣಿ ಮಾಡಿಸಿ ರಕ್ತದಾನ ಮಾಡಿದರು.
ಸೇವಭಾರತಿ ಮಂಗಳೂರು ವಿಶ್ವಸ್ಥ ವಿನೋದ್ ಶೆಣೈ, ಸಕ್ಷಮ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಜಿಲ್ಲಾ ಕಾರ್ಯದರ್ಶಿ ಹರೀಶ್ ಪ್ರಭು, ಜೈ ತುಳುನಾಡು ಸಂಘದ ಅಧ್ಯಕ್ಷ ಮನೀಶ್, ಆಶಾ ಜ್ಯೋತಿ ಮಂಗಳೂರು ಅಧ್ಯಕ್ಷೆ ಗೀತಾ ಲಕ್ಷ್ಮೀಶ, ವೆನ್ಲಾಕ್ ಆಸ್ಪತ್ರೆಯ ರಕ್ತ ಬ್ಯಾಂಕಿನ ಮುಖ್ಯಸ್ಥ ಅಶೋಕ್ ಮತ್ತು ಸುಪ್ರೀಮ್ ಮೋಟಾರ್ಸ್ ಜಿಎಂ ಗುರುಪ್ರಸಾದ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.ಮೊದಲಿಗನಾಗಿ ರಕ್ತದಾನ ಮಾಡಿದ ವಿಷ್ಣುವರ್ಧನ್ ಯುವಕ ಸಂಘದ ಅಕ್ಬರ್ ಕೊಂಚಾಡಿ ಅವರು ಎಲ್ಲ ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ ಜೀವ ರಕ್ಷಕರಾಗಬೇಕು ಎಂದು ಹೇಳಿದರು. ಜೈ ತುಳುನಾಡು ಕೇಂದ್ರ ಸಮಿತಿ ಅಧ್ಯಕ್ಷ ಉದಯ್ ಪೂಂಜಾ ತಾರಿಪಾಡಿಗುತ್ತು, ತುಳುಪರ ಹೋರಾಟಗಾರ ರೋಷನ್ ರೋನಾಲ್ಡ್, ಮಾಜಿ ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ಸಮಾಜ ಸೇವಕಿ ಜ್ಯೋತಿ, ರಾಘವೇಂದ್ರ ಉಡುಪ, ಜಿತೇಶ್, ನಾರಾಯಣ ಕಂಜರ್ಪಣೆ, ಭಾಸ್ಕರ್ ಸಾಲಿಯಾನ್, ಮಾಂಡೋವಿ ಮೋಟರ್ಸ್ ಎಜಿಎಂ ಅಶೋಕ್ ರಾವ್ ಶುಭ ಕೋರಿದರು.ಸಕ್ಷಮ ಖಜಾಂಚಿ ಸತೀಶ್ ರಾವ್, ಜತೆ ಕಾರ್ಯದರ್ಶಿ ಭಾಸ್ಕರ್ ಹೊಸಮನೆ, ವಿಕಾಸಂ ಸೇವಾ ಫೌಂಡೇಶನ್ ಆಡಳಿತ ನಿರ್ದೇಶಕ ಗಣೇಶ್ ಭಟ್ ವಾರಣಾಸಿ ಸಲಹೆ ಸೂಚನೆ ನೀಡಿದರು. ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ವಂದಿಸಿದರು.