6ರಂದು ಬೆಂಗಳೂರಿನಲ್ಲಿ ಅಭಯಹಸ್ತ ರಕ್ತದಾನ ಶಿಬಿರ ‘ಹೆಗ್ಗುರುತು-250’

| Published : Apr 02 2025, 01:00 AM IST

6ರಂದು ಬೆಂಗಳೂರಿನಲ್ಲಿ ಅಭಯಹಸ್ತ ರಕ್ತದಾನ ಶಿಬಿರ ‘ಹೆಗ್ಗುರುತು-250’
Share this Article
  • FB
  • TW
  • Linkdin
  • Email

ಸಾರಾಂಶ

ರಕ್ತದಾನದಿಂದ ಖ್ಯಾತಿ ಪಡೆದಿರುವ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ವತಿಯಿಂದ 250ನೇ ರಕ್ತದಾನ ಶಿಬಿರ ‘ಹೆಗ್ಗುರುತು- 250’ ಏ.6ರಂದು ಬೆಂಗಳೂರಿನ ಡಾ.ರಾಜ್‌ಕುಮಾರ್ ರಸ್ತೆಯ ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ರಕ್ತದಾನದಿಂದ ಖ್ಯಾತಿ ಪಡೆದಿರುವ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ವತಿಯಿಂದ 250ನೇ ರಕ್ತದಾನ ಶಿಬಿರ ‘ಹೆಗ್ಗುರುತು- 250’ ಏ.6ರಂದು ಬೆಂಗಳೂರಿನ ಡಾ.ರಾಜ್‌ಕುಮಾರ್ ರಸ್ತೆಯ ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಸತೀಶ್ ಸಾಲಿಯಾನ್ ಮಣಿಪಾಲ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರವನ್ನು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಭಯಹಸ್ತ ಬೆಂಗಳೂರು ವಲಯದ ಸಂಚಾಲಕ ರಾಘವೇಂದ್ರ ಕಾಂಚನ್ ಮರವಂತೆ ವಹಿಸುವರು. ಅಧ್ಯಕ್ಷ ಸತೀಶ್ ಸಾಲಿಯಾನ್ ಮಣಿಪಾಲ ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ.ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಈವರೆಗೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಳೆದ 5 ವರ್ಷಗಳ ಅವಧಿಯಲ್ಲಿ 32 ಸಾವಿರಕ್ಕೂ ಅಧಿಕ ಯುನಿಟ್ ರಕ್ತವನ್ನು ಸಂಗ್ರಹಿಸಿ, ಸಾವಿರಾರು ಜೀವಗಳಿಗೆ ಪುನರ್‌ಜನ್ಮ ನೀಡಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಟ್ರಸ್ಟಿಗಳಾದ ಬಾಲಕೃಷ್ಣ ಮದ್ದೋಡಿ, ಶರತ್ ಕಾಂಚನ್, ರತ್ನಾಕರ್ ಸಾಮಂತ್, ಯತೀಶ್ ಸಾಲಿಯಾನ್ ಉಪಸ್ಥಿತರಿದ್ದರು.