ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ನಗರದ ಬಜಿಲಕೇರಿ ಸೇವಾಂಜಲಿ ಏರೆನಾದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಬಿರುವೆರ್ ಕುಡ್ಲ, ಕಾಳಿಚರಣ್ ಫ್ರೆಂಡ್ಸ್, ಬಜಿಲಕೇರಿ ಫ್ರೆಂಡ್ಸ್ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಿತು.

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ನಗರದ ಬಜಿಲಕೇರಿ ಸೇವಾಂಜಲಿ ಏರೆನಾದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಬಿರುವೆರ್ ಕುಡ್ಲ, ಕಾಳಿಚರಣ್ ಫ್ರೆಂಡ್ಸ್, ಬಜಿಲಕೇರಿ ಫ್ರೆಂಡ್ಸ್ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಿತು.

ಸಾಮಾಜಿಕ ಹೋರಾಟಗಾರ ಹನುಮಂತ್ ಕಾಮತ್ ಉದ್ಘಾಟಿಸಿ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ನಾವು ರಕ್ತದಾನ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಸಲ ಮಾಡುವ ರಕ್ತದಾನದಿಂದ ಮೂರು ಅಮೂಲ್ಯ ಜೀವ ಉಳಿಸಬಹುದು. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಸುಧಾರಿಸುವುದಲ್ಲದೇ, ದೇಹದ ಕಾಂತಿಯೂ ಹೆಚ್ಚಿ, ಸೌಂದರ್ಯದ ಅವಧಿ ಹೆಚ್ಚುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಪ್ರತಿ ವರ್ಷ ಮೂರರಿಂದ ನಾಲ್ಕು ಬಾರಿ ರಕ್ತದಾನ ಶಿಬಿರ ಆಯೋಜಿಸುತ್ತಾ ಬಂದಿದೆ. ಈ ಬಾರಿ ನಮ್ಮೊಂದಿಗೆ ಸಮಾನ ಮನಸ್ಕ ಸಂಘಟನೆಗಳು ಕೈಜೋಡಿಸಿ, ಹೆಚ್ಚು ಜನರನ್ನು ತಲುಪುವಲ್ಲಿ ಸಹಕರಿಸಿವೆ ಎಂದರು.ಬಜಿಲಕೇರಿ ಪ್ರೆಂಡ್ಸ್‌ನ ಸೂರಜ್ ಬಜಿಲಕೇರಿ, ಕಾಳಿಚರಣ್ ಪೆಂಡ್ಸ್‌ನ ಅಜಯ್ ಸುವರ್ಣ, ಪ್ರಕಾಶ್ ಪ್ರಭು, ಕೆಎಂಸಿಯ ಡಾ. ಮಿಹಿರ್, ಡಾ.ಅನುಜಾ, ಪ್ರಜ್ವಲ್ ಮತ್ತಿತರರು ಇದ್ದರು.