BLOs who performed excellently by completing the SIR (Survey of Electors' Information) work in the Matturu Gram Panchayat zone of Maski Taluk—near the town—were felicitated and honored by the Gram Panchayat administrative officials.
ಕನ್ನಡಪ್ರಭ ವಾರ್ತೆ ಮುದಗಲ್
ಪಟ್ಟಣ ಸಮೀಪದ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಪಂ ವಲಯದ ಎಸ್ಐಆರ್ ಪೂರ್ಣಗೊಳಿಸಿ ಉತ್ತಮ ಕೆಲಸ ಮಾಡಿದ ಬಿಎಲ್ಒಗಳಿಗೆ ಗ್ರಾಪಂ ಆಡಳಿತ ಅಧಿಕಾರಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು,ಗ್ರಾಪಂ ಆಡಳಿತ ಅಧಿಕಾರಿ ಸೋಮನಗೌಡ ಮಾತನಾಡಿ, ನಮ್ಮ ವಲಯದ ಮತದಾರ ಸಮೀಕ್ಷಾ ಕಾರ್ಯವು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ ಬಿಎಲ್ಒ ಕಾರ್ಯ ಮೆಚ್ಚುವಂತದ್ದು, ಎಸ್ಐಆರ್ ಪ್ರಜಾಪ್ರಭುತ್ವದ ಆಶಯಕ್ಕೆ ಪೂರಕವಾಗಿದ್ದು, ಇದನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು.
ಗ್ರಾಪಂ ಮಾಜಿ ಸದಸ್ಯ ಶಂಕ್ರಣ್ಣ ನಂದಿಹಳ್ಳಿ, ಮುಖಂಡ ಅಮರಪ್ಪ ಹಡಪದ ಮಾತನಾಡಿದರು.ಬಿಎಲ್‌ಒಗಳಾದ, ಶಿಕ್ಷಕರಾದ ಸೂಗರಯ್ಯ ಮಟ್ಟೂರ್ ತಾಂಡಾ, ಹುಸೇನ್ ಸಾಬ್ ಬರದೂರು ಬುದ್ಧಿನ್ನಿ, ಮಹೇಶ ಕಡದರಹಾಳ, ಅಂಗನವಾಡಿ ಕಾರ್ಯಕರ್ತೆಯರಾದ, ಸಂಗಮ್ಮ ಹುಲ್ಲೂರ್, ಪುಷ್ಪಲತ ಜಾವೂರ್, ಮಹಿಬೂಬಿ ಬೇಗಂ ಗುಡಿಹಾಳ ಇವರುಗಳನ್ನು ಆಡಳಿತ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಂಚಾಕ್ಷರಯ್ಯ ಸ್ವಾಮಿ ಹಿರೇಮಠ, ಶರಣ ಗೌಡ ದಳಪತಿ, ಮಲ್ಲಿಕಾರ್ಜುನ್ ಹುಡೇದ, ಬೀರಪ್ಪ ಅಮಿನಗಡ, ಅನುಸೂಯ ಮದ್ನಾಳ, ಅಂಬಮ್ಮ ಹಿರೇಮಠ ಹಾಗೂ ಗ್ರಾಮದ ಹಿರಿಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.