ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ನರ್ಸರಿ ವಿಭಾಗದಲ್ಲಿ ಬ್ಲೂ ಡೇಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಇಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ (CBSE) ನರ್ಸರಿ ವಿಭಾಗದಲ್ಲಿ ಬ್ಲೂ ಡೇಯನ್ನು ಆಚರಿಸಲಾಯಿತು.

ಬುಧವಾರ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ನರ್ಸರಿ ಮಕ್ಕಳು ನೀಲಿ ಬಣ್ಣದ ಉಡುಗೆ ಧರಿಸಿ, ನೀಲಿ ವಸ್ತುಗಳನ್ನು ತಂದು, ಚಿತ್ರ ಬಿಡಿಸುವುದು ಹಾಡು ಹೇಳುವುದು ಮತ್ತು ವಿವಿಧ ನೀಲಿ ಬಣ್ಣದ ವಸ್ತುಗಳ ಬಗ್ಗೆ ಮಾತನಾಡುವಂತಹ ಚಟುವಟಿಕೆ ಹಾಗೂ ನೀಲಿ ಬಣ್ಣದ ಕುರಿತಾದ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದರು ಹಾಗೂ ನರ್ಸರಿ ಶಾಲೆಯಲ್ಲಿ ನೀಲಿ ಬಣ್ಣ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಅತಿಥಿಗಳು ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮಕ್ಕಳ ಕಾರ್ಯಕ್ಕೆ ಮೆಚ್ಚುಗೆಯನ್ನುವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟರ್ ಅರ್ಪಿತ ನೀಲಿ ದಿನ ಆಚರಣೆಯು ಪರಿಸರದ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದೆ ನೀಲಿ ಬಣ್ಣ ನಮ್ಮ ಜೀವನದ ಒಂದು ಅವಿಭಾಜ್ಯ ಬಣ್ಣವಾಗಿದ್ದು ಪರಿಸರದಲ್ಲಿ ಕೂಡ ಇದಕ್ಕೆ ವಿಶೇಷವಾದ ಮಹತ್ವ ಇದ್ದು ಇದೂ ನಮ್ಮ ವ್ಯಕ್ತಿತ್ವ, ಶಾಂತತೆ, ವಿಶ್ವಾಸ ಮತ್ತು ಬುದ್ಧಿವಂತಿಕೆಯನ್ನು ಸೂಚಿಸುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಲೆಯ ನಿವೃತ್ತ ಶಿಕ್ಷಕಿರಾದ ಸುಶೀಲ, ಮೆರಿಲ ಜಯಂತಿ, ಕ್ಲೆಮಟ್ ಮ್ಯಾಕ್ಲಿನ್, ( CBSE) ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಲೆನಿಟ್, ಕಲಾವಿದ ಭಾವ ಮಾಲ್ದಾರೆ, ನರ್ಸರಿ ಶಾಲೆಯ ಶಿಕ್ಷಕರಾದ ಲೇನ್ನಿ, ಸುನೀತ, ಟ್ರೀಜ, ತೆರೇಸ, ಎಲಿಸ, ಶೈನಿ, ಸಲೀನ ಹಾಗೂ ಕನ್ನಡ ಮಾಧ್ಯಮದ ಸಹ ಶಿಕ್ಷಕರು ಹಾಗೂ ಪೋಷಕರು ಇದ್ದರು.