ಬಿಎಂಎಸ್‌ ಜನ ಸಂಪರ್ಕ ಅಭಿಯಾನ

| Published : Dec 28 2024, 12:45 AM IST

ಸಾರಾಂಶ

ಕೇಂದ್ರ ಎನ್‌ಡಿಎ ಸರಕಾರವು ೪ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದ್ದು, ಕಾರ್ಮಿಕರ ಹಿತದೃಷ್ಟಿಯಿಂದ ಬಿಎಂಎಸ್ ಹಲವಾರು ಸಲಹೆಗಳನ್ನು ನೀಡಿದೆ. ಬಿಎಂಎಸ್ ಅನ್ನು ಮತ್ತಷ್ಟು ಬಲಪಡಿಸಲು ದೇಶಾದ್ಯಂತ ಕಾರ್ಮಿಕ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಿಎಂಎಸ್ ಅನ್ನು ಬಲಪಡಿಸಲು ಯತ್ನ.

ಕನ್ನಡಪ್ರಭ ವಾರ್ತೆ ಕೋಲಾರರಾಷ್ಟ್ರೀಯ ಸ್ವಯಂಸೇವಕ ಸಂಘ ಆರ್‌ಎಸ್‌ಎಸ್‌ನ ಕಾರ್ಮಿಕ ಸಂಘಟನೆಯಾಗಿ ವಿಶ್ವದ ಅತಿದೊಡ್ಡ ಕಾರ್ಮಿಕ ಸಂಘಟನೆಯಾಗಿರುವ ಭಾರತೀಯ ಮಜ್ದೂರ್ ಸಂಘದ ೭೦ನೇ ವಾರ್ಷಿಕೋತ್ಸವ ಅಂಗವಾಗಿ ದೇಶಾದ್ಯಂತ ಸಂಪರ್ಕ ಹಾಗೂ ಸಂಗ್ರಹ ಅಭಿಯಾನ ಆಯೋಜಿಸಲಾಗುತ್ತಿದೆ ಎಂದು ಬಿಎಂಎಸ್ ರಾಜ್ಯಾಧ್ಯಕ್ಷ ಎನ್.ಕೆ.ಪ್ರಕಾಶ್ ಹೇಳಿದರು.ನಗರದ ಗೌರಿಪೇಟೆಯಲ್ಲಿ ಬಿಎಂಎಸ್ ಕಚೇರಿಯಲ್ಲಿ ಬಿಎಂಎಸ್ ಜಿಲ್ಲಾ ಸಮಿತಿ ಸಭೆಯಲ್ಲಿ ೭೦ನೇ ವರ್ಷದ ಕರಪತ್ರ ವಿತರಿಸಿ ಮಾತನಾಡಿ, ಎಪ್ಪತ್ತು ವರ್ಷಗಳ ಹಿಂದೆ ಆರಂಭವಾದ ಬಿಎಂಎಸ್ ಏಳು ದಶಕಗಳಿಂದಲೂ ದೇಶ, ಕೈಗಾರಿಕೆ ಹಾಗೂ ಕಾರ್ಮಿಕರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.ಹೊಸ 70 ಶಾಖೆ ಸ್ಥಾಪನೆ

ಸಂಘಟನೆಯು ೭೦ ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ೭೦ ಹೊಸ ಯೂನಿಯನ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸದಸ್ಯತ್ವವನ್ನು ಹೆಚ್ಚಿಸಿ ಜಾಥಾ ನಡೆಸಲು ಉದ್ದೇಶಿಸಲಾಗಿದೆ, ಇದರ ಪೂರ್ವಭಾವಿಯಾಗಿ ಜನ ಸಂಪರ್ಕ ಸಭೆ ಮತ್ತು ಧನ ಸಂಗ್ರಹ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದರು.ಕೇಂದ್ರ ಎನ್‌ಡಿಎ ಸರಕಾರವು ೪ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದ್ದು, ಕಾರ್ಮಿಕರ ಹಿತದೃಷ್ಠಿಯಿಂದ ಬಿಎಂಎಸ್ ಹಲವಾರು ಸಲಹೆಗಳನ್ನು ನೀಡಿದೆ. ಬಿಎಂಎಸ್ ಅನ್ನು ಮತ್ತಷ್ಟು ಬಲಪಡಿಸಲು ದೇಶಾದ್ಯಂತ ಕಾರ್ಮಿಕ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೋಲಾರ ಜಿಲ್ಲಾ ಉಸ್ತುವಾರಿಯಾಗಿ ತಾವು ನೇಮಕಗೊಂಡಿದ್ದು, ಜಿಲ್ಲೆಯಲ್ಲಿ ಬಿಎಂಎಸ್ ಅನ್ನು ಬಲಪಡಿಸಲಾಗುವುದು ಎಂದರು.

ಬಿಎಂಎಸ್ ಜಿಲ್ಲಾಧ್ಯಕ್ಷ ಕೆ.ಬಿ.ಶಿವಕುಮಾರ್ ಮಾತನಾಡಿದರು. ಬಿಎಂಎಸ್ ಕಟ್ಟಡ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ನಾಣಿ, ಶ್ರೀನಿವಾಸಪುರ ಘಟಕದ ನಾಗಭೂಷಣ್, ಜಿಲ್ಲಾ ಉಪಾಧ್ಯಕ್ಷ ಗೋಕುಲ ಚಲಪತಿ, ಮುಖಂಡರಾದ ಶಂಕರ್, ದೊಡ್ಡಬಾಬು, ಡೆಕೋರೇಷನ್ ಶಂಕರ್, ಗೋಪಿನಾಥ್, ಸ್ವಾಮಿ ಇದ್ದರು.