ಕರ್ನಾಟಕ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆ

| Published : Dec 30 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ಪಟ್ಟಣದ ಪ್ರತಿಷ್ಠಿತ ದಿ.ಕರ್ನಾಟಕ ಕೋ ಆಪ್ ಬ್ಯಾಂಕ್‌ ಲಿಮಿಟೆಡ್‌ನ 2024-25-2029-30 ನೇ ಸಾಲಿನ ನೂತನ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಭಾನುವಾರ ಚುನಾವಣೆಯ ನಡೆಯಿತು

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ಪಟ್ಟಣದ ಪ್ರತಿಷ್ಠಿತ ದಿ.ಕರ್ನಾಟಕ ಕೋ ಆಪ್ ಬ್ಯಾಂಕ್‌ ಲಿಮಿಟೆಡ್‌ನ 2024-25-2029-30 ನೇ ಸಾಲಿನ ನೂತನ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಭಾನುವಾರ ಚುನಾವಣೆಯ ನಡೆಯಿತು.

ಈ ವೇಳೆ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ಆಪ್ತರಾದ ನಾಲತವಾಡದ ರಾಯನಗೌಡ ತಾತರಡ್ಡಿ ಅವರು ನಾಲತವಾಡದ ಸುಮಾರು 145ಕ್ಕೂ ಮತದಾರರನ್ನು ಕರೆತಂದು ಮತದಾನ ಮಾಡಿಸಿದರು.

ಈ ವೇಳೆ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ), ಶಿವಪ್ಪಗೌಡ ತಾತರಡ್ಡಿ, ರಾಯನಗೌಡ ತಾತರೆಡ್ಡಿ, ಸಂಗಣ್ಣ ಪತ್ತಾರ, ಅಶೋಕ ಇಲಕಲ್ಲ, ಶಂಬುರಾವ ದುದ್ದಗಿ, ಇಮಾಮಲಿ, ಹುಸೇನಸಾ ಮೂಲಿಮನಿ, ದಂಡಪ್ಪ ಜವಳಗೇರ, ಸಂಗಣ್ಣ ಬಾರಡ್ಡಿ, ಮಹಾಂತೇಶ ಚಿತ್ರನಾಳ, ಶರಣಗೌಡ ಮೆದಿಕಿನಾಳ, ಹನುಮಪ್ಪ ಕಾನಿಕೇರಿ, ಬಸವರಾಜ ಹುಡೇದ, ಉಮರ ಮೂಲಿಮನಿ, ಹಣಮಂತ ಕುರಿ, ಕುಮಾರ ಕೋಳೂರ, ಸುಕ್ರತಾ ನಾಯಕಲ್ ಸೇರಿದಂತೆ ನೂರಾರು ಜನ ಇದ್ದರು.