ಆಡಳಿತ ಮಂಡಳಿ ಸಹಕಾರದಿಂದ ಸಂಘಗಳು ಬಲವರ್ಧನೆ

| Published : Sep 16 2025, 12:03 AM IST

ಸಾರಾಂಶ

ರೈತರಿಗೆ ಈ ಬಾರಿ ಬೆಳೆಗಳಿಗೆ ಯೂರಿಯಾ ರಸಗೊಬ್ಬರದ ತೀವ್ರ ಕೊರತೆ ಉಂಟಾಗಿತ್ತು. ಇದರಿಂದ ರೈತರು ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ.

ಯಲಬುರ್ಗಾ:

ಆಡಳಿತ ಮಂಡಳಿ ಸಹಕಾರದಿಂದ ಸಹಕಾರ ಸಂಘಗಳು ಬಲವರ್ಧನೆಯಾಗಲು ಕಾರಣವಾಗಿವೆ ಎಂದು ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದ ಸಾಯಿ ಪ್ಯಾಲೇಸ್‌‌ನಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೪೯ನೇ ವಾರ್ಷಿಕ ಮಹಾಸಭೆ ಸಮಾರಂಭದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಶೇರುದಾರರು, ನಿರ್ದೇಶಕರ ಸಹಕಾರದಿಂದ ವ್ಯವಹಾರಗಳು ಲಾಭದಲ್ಲಿ ಮುಂದುವರಿಯುತ್ತಿವೆ. ಪಿಕೆಪಿಎಸ್‌ಎಸ್‌ನ ಸಂಘವು ₹ ೨ ಕೋಟಿ ವ್ಯವಹಾರ ನಡೆಸುತ್ತಿದ್ದು, ₹ ೮ ಲಕ್ಷ ಲಾಭದಲ್ಲಿರುವುದು ಸಂತಸ ತಂದಿದೆ ಎಂದರು.

ಪಿಕೆಪಿಎಸ್‌ಎಸ್‌ ಅಧ್ಯಕ್ಷ ದೊಡ್ಡಯ್ಯ ಗುರುವಿನ ಮಾತನಾಡಿ, ರೈತರಿಗೆ ಈ ಬಾರಿ ಬೆಳೆಗಳಿಗೆ ಯೂರಿಯಾ ರಸಗೊಬ್ಬರದ ತೀವ್ರ ಕೊರತೆ ಉಂಟಾಗಿತ್ತು. ಇದರಿಂದ ರೈತರು ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಪ್ರತಿಯೊಬ್ಬ ರೈತರಿಗೆ ಪಾರದರ್ಶಕವಾಗಿ ಗೊಬ್ಬರ ವಿತರಿಸಲು ಆಡಳಿತ ಮಂಡಳಿಯಿಂದ ಪ್ರತ್ಯೇಕ ಕಾರ್ಡ್ ವ್ಯವಸ್ಥೆ ಮಾಡುವ ವಿಚಾರ ಹೊಂದಲಾಗಿದೆ ಎಂದು ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಷಣ್ಮುಖಪ್ಪ ರಾಂಪುರ, ಗಂಗಾವತಿ ಕೃಷಿ ವಿಸ್ತರಣಾಧಿಕಾರಿ ಚಂದ್ರಕಾಂತ ನಾಡಗೌಡ್ರ, ಹಿಪ್ಕೊ ವ್ಯವಸ್ಥಾಪಕ ರಾಘವೇಂದ್ರ, ವಕೀಲ ಬಿ.ಎಂ. ಶಿರೂರ, ರೈತ ಉತ್ಪಾದಕ ಸಹಕಾರ ಸಂಘದ ಯಲ್ಲಪ್ಪ ಮಾತನಾಡಿದರು.

ಈ ವೇಳೆ ಸಂಘದ ಉಪಾಧ್ಯಕ್ಷೆ ರೇಣುಕಾ ಪಿ. ಉಪ್ಪಾರ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸಂಘದ ನಿರ್ದೇಶಕರಾದ ಮಲ್ಲಿಕಾರ್ಜುನಗೌಡ ಉಳ್ಳಾಗಡ್ಡಿ, ಕಳಕಪ್ಪ ತಳವಾರ, ಚಂದ್ರು ಬನ್ನಪ್ಪಗೌಡ್ರ, ಶಂಕ್ರಪ್ಪ ಛಲವಾದಿ, ಅನ್ನದಾನೇಶ ನರೇಗಲ್, ಬಸವರಾಜ ಅಧಿಕಾರಿ, ಶರಣಪ್ಪಗೌಡ ಮಾಲಿಪಾಟೀಲ್, ಅಶ್ರಫಾಲಿ ಗಡಾದ, ರಮೇಶ ಪಟ್ಟೇದ, ವೀಣಾ ಬಳಗೇರಿಮಠ, ಪ್ರಮುಖರಾದ ಸಂಗಣ್ಣ ತೆಂಗಿನಕಾಯಿ, ವೀರನಗೌಡ ಬನ್ನಪ್ಪಗೌಡ್ರ, ಸಿಇಒ ಬಸವರಾಜಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.