ಮಂಗಳೂರು ಗೋಡಂಬಿ ಸಂಸ್ಕರಣೆ ಮತ್ತು ಉನ್ನತ ಗುಣಮಟ್ಟದ ಡ್ರೈ ಫ್ರೂಟ್ಸ್‌ಗಳಿಗೆ ಹೆಸರಾದ ಬ್ರಾಂಡ್ ಬೋಳಾಸ್, ಬ್ರಹ್ಮಾವರದಲ್ಲಿ ತನ್ನ 100ನೇ ರಿಟೇಲ್ ಔಟ್‌ಲೆಟ್‌ನ್ನು ಉದ್ಘಾಟಿಸಿತು. ನೂತನ ಔಟ್‌ಲೆಟ್‌ನ್ನು ಬೋಳಾ ಶಾಂತಿ ಪ್ರಭಾಕರ ಕಾಮತ್‌ ಉದ್ಘಾಟಿಸಿದರು. ಈ ಸಂದರ್ಭ ಕೆ. ಶ್ರೀಧರ ಕಾಮತ್, ಕೆ.ವೇದಾವತಿ ಶ್ರೀಧರ ಕಾಮತ್, ಬೋಳಾ ದಾಮೋದರ ಕಾಮತ್ ಹಾಗೂ ಬೋಳಾ ರಾಹುಲ್ ಕಾಮತ್ ಇದ್ದರು.

ಮಂಗಳೂರು: ಗೋಡಂಬಿ ಸಂಸ್ಕರಣೆ ಮತ್ತು ಉನ್ನತ ಗುಣಮಟ್ಟದ ಡ್ರೈ ಫ್ರೂಟ್ಸ್‌ಗಳಿಗೆ ಹೆಸರಾದ ಬ್ರಾಂಡ್ ಬೋಳಾಸ್, ಬ್ರಹ್ಮಾವರದಲ್ಲಿ ತನ್ನ 100ನೇ ರಿಟೇಲ್ ಔಟ್‌ಲೆಟ್‌ನ್ನು ಉದ್ಘಾಟಿಸಿತು.

ನೂತನ ಔಟ್‌ಲೆಟ್‌ನ್ನು ಬೋಳಾ ಶಾಂತಿ ಪ್ರಭಾಕರ ಕಾಮತ್‌ ಉದ್ಘಾಟಿಸಿದರು. ಈ ಸಂದರ್ಭ ಕೆ. ಶ್ರೀಧರ ಕಾಮತ್, ಕೆ.ವೇದಾವತಿ ಶ್ರೀಧರ ಕಾಮತ್, ಬೋಳಾ ದಾಮೋದರ ಕಾಮತ್ ಹಾಗೂ ಬೋಳಾ ರಾಹುಲ್ ಕಾಮತ್ ಇದ್ದರು.

1958ರಲ್ಲಿ ಗೋಡಂಬಿ ಸಂಸ್ಕರಣಾ ಘಟಕ ಸ್ಥಾಪನೆಯೊಂದಿಗೆ ಬೋಳಾಸ್ ತನ್ನ ಪ್ರಯಾಣ ಆರಂಭಿಸಿತ್ತು. 2012ರಲ್ಲಿ ಬಾದಾಮಿ ಸೇರಿದಂತೆ ಇತರ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಕ್ಷೇತ್ರಕ್ಕೆ ವಿಸ್ತರಿಸಿತು. 2020ರಲ್ಲಿ ಹೆಚ್ಚುತ್ತಿರುವ ಪೌಷ್ಟಿಕ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ “ಬೋಳಾಸ್” ಎಂಬ ಬ್ರಾಂಡ್‌ನಡಿ ರಿಟೇಲ್ ಮಾರುಕಟ್ಟೆಗೆ ಪ್ರವೇಶಿಸಿ, ರಿಟೇಲ್ ಔಟ್‌ಲೆಟ್‌ಗಳ ಸರಣಿಯನ್ನು ಆರಂಭಿಸಲಾಯಿತು ಎಂದು ನಿರ್ದೇಶಕ ಬೋಳಾ ರಾಹುಲ್ ಕಾಮತ್ ಮಾಹಿತಿ ನೀಡಿದರು.

ಕಳೆದ 7 ದಶಕಗಳಲ್ಲಿ ಗೋಡಂಬಿ ಹಾಗೂ ಇತರ ಡ್ರೈ ಫ್ರೂಟ್ಸ್‌ಗಳಿಗಾಗಿ ಬೋಳಾಸ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭದ್ರ ಹೆಸರು ಗಳಿಸಿದೆ. ಕಡಿಮೆ ಅವಧಿಯಲ್ಲೇ 100ನೇ ರಿಟೇಲ್ ಔಟ್‌ಲೆಟ್ ಆರಂಭಿಸಿರುವುದು ಸಂಸ್ಥೆಗೆ ಮಹತ್ವದ ಮೈಲಿಗಲ್ಲು. ಸಂಸ್ಕರಣೆ ಹಾಗೂ ರಿಟೇಲ್ ಕಾರ್ಯಾಚರಣೆಗಳನ್ನು ನೇರವಾಗಿ ನಿರ್ವಹಿಸುವ ಮೂಲಕ ಮಧ್ಯವರ್ತಿ ವಿತರಣಾ ಹಂತಗಳನ್ನು ಕಡಿಮೆ ಮಾಡಲಾಗಿದ್ದು, ಗ್ರಾಹಕರಿಗೆ ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಸಮಂಜಸ ಬೆಲೆಯಲ್ಲಿ ಒದಗಿಸಲು ಸಾಧ್ಯವಾಗಿದೆ ಎಂದು ನಿರ್ದೇಶಕ ರಾಜೇಶ್ ಕಾಮತ್ ಹೇಳಿದರು.

ಬೋಳಾಸ್ ಸಂಸ್ಥೆ ಭಾರತದಲ್ಲೇ ಅತಿದೊಡ್ಡ ಡ್ರೈ ಫ್ರೂಟ್ಸ್ ಮತ್ತು ಬೀಜಗಳ ಸಂಸ್ಕರಣಾ ಘಟಕವನ್ನು ಒಂದೇ ಮೇಲ್ಛಾವಣಿಯಡಿ ನಡೆಸುತ್ತಿದೆ. 45ಕ್ಕೂ ಹೆಚ್ಚು ದೇಶಗಳಿಂದ ಉನ್ನತ ಗುಣಮಟ್ಟದ ಡ್ರೈ ಫ್ರೂಟ್ಸ್‌ಗಳನ್ನು ಆಮದು ಮಾಡಿಕೊಂಡು, ಅತ್ಯಾಧುನಿಕ ಘಟಕದಲ್ಲಿ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ಪೂರೈಕೆ ಮಾಡುತ್ತಿದೆ. ಜತೆಗೆ, 32ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿರುವ ಸಂಸ್ಥೆಯು ರಾಷ್ಟ್ರಪತಿ ಅವರ “ನಿರ್ಯಾತ್ ಶ್ರೀ” ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. ವಿಶೇಷವಾಗಿ, ಸಂಸ್ಕರಣಾ ಘಟಕ ಗ್ರಾಮೀಣ ಪ್ರದೇಶದಲ್ಲಿದ್ದು, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗದಲ್ಲಿದ್ದಾರೆ.

ಹೊಸ ಉತ್ಪನ್ನಗಳ ಪರಿಚಯ:

ಗ್ರಾಹಕರ ವಿಶ್ವಾಸ ಮತ್ತು ಬೆಂಬಲದಿಂದ ಉತ್ತೇಜಿತಗೊಂಡ ಬೋಳಾಸ್, ಪ್ರೀಮಿಯಂ ಡ್ರೈ ಫ್ರೂಟ್ಸ್ ಮತ್ತು ನಟ್ಸ್, ಡ್ರೈ ಫ್ರೂಟ್ಸ್ ಆಧಾರಿತ ಸಿಹಿತಿನಿಸುಗಳು, ಆರೋಗ್ಯಕರ ಸ್ನ್ಯಾಕ್ಸ್ ಹಾಗೂ ವಿಶೇಷ ಪರಂಪರಾ ಗಿಫ್ಟ್ ಶ್ರೇಣಿಯನ್ನು ಪರಿಚಯಿಸಿದೆ. ಈ ಯಶಸ್ಸಿನ ಭಾಗವಾಗಿರುವ ಕರ್ನಾಟಕದ ಜನತೆಗೆ ಬೋಳಾಸ್ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.27ರಂದು ವಿಶೇಷ ಆಫರ್‌

ರಾಜ್ಯಾದ್ಯಂತ 100 ರಿಟೇಲ್ ಔಟ್‌ಲೆಟ್‌ಗಳನ್ನು ತಲುಪಿರುವುದು ಬೋಳಾಸ್ ಮೇಲೆ ಜನರು ಇಟ್ಟಿರುವ ನಂಬಿಕೆ ಮತ್ತು ಬೆಂಬಲದ ಪ್ರತೀಕ. ಈ ವಿಶೇಷ ಮೈಲಿಗಲ್ಲನ್ನು ಆಚರಿಸಲು ಡಿ.27ರಂದು ಬೋಳಾಸ್ ವಿಶೇಷ ಆಫರ್ ಘೋಷಿಸಿದೆ. ಮಖಾನಾ ಶ್ರೇಣಿ ಹಾಗೂ ಸಿಂಗಲ್- ಸರ್ವ್ ಸ್ನ್ಯಾಕಿಂಗ್ ಶ್ರೇಣಿಯಲ್ಲಿ ಒಂದು ಖರೀದಿಸಿದರೆ ಒಂದು ಉಚಿತ.