ಬಾಂಬ್ ಸ್ಫೋಟ ಪ್ರಕರಣ: ಬೆಂಗಳೂರು ಸಿಸಿಬಿ ತಂಡ ಮಂಗಳೂರಿಗೆ

| Published : Mar 05 2024, 01:32 AM IST / Updated: Mar 05 2024, 11:01 AM IST

ಬಾಂಬ್ ಸ್ಫೋಟ ಪ್ರಕರಣ: ಬೆಂಗಳೂರು ಸಿಸಿಬಿ ತಂಡ ಮಂಗಳೂರಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಜೊತೆಗಿನ ಹೋಲಿಕೆ ಪರೀಕ್ಷಿಸಲು, ಬೆಂಗಳೂರು ಸ್ಫೋಟ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ತಂಡವು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದ ಪೂರಕ ಮಾಹಿತಿ ಕಲೆಹಾಕಿದೆ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸ್ಫೋಟಕ್ಕೂ, ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟಕ್ಕೂ ಸಾಮ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪರಾಧ ಪತ್ತೆ ದಳದ ಪೊಲೀಸರ ತಂಡ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದೆ.ಮಂಗಳೂರಿಗೆ ಆಗಮಿಸಿದ ತಂಡವು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದ ಪೂರಕ ಮಾಹಿತಿ ಕಲೆಹಾಕಿದೆ ಎಂದು ತಿಳಿದುಬಂದಿದೆ.

ಮಂಗಳೂರಿನ ನಾಗುರಿ ಎಂಬಲ್ಲಿ ೨೦೨೨ರ ನ.೧೯ರಂದು ಆರೋಪಿ ಮೊಹಮ್ಮದ್ ಶಾರೀಕ್ ಕುಕ್ಕರ್ ಬಾಂಬ್ ಹೊತ್ತುಕೊಂಡು ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಂಬ್ ಸ್ಫೋಟ ಸಂಭವಿಸಿ ಶಾರೀಕ್ ಹಾಗೂ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. 

ಬೆಂಗಳೂರಿನಲ್ಲಿ ಕಂಡುಬಂದ ಸ್ಫೋಟಕ ವಸ್ತುವಿಗೂ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಗೂ ಸಾಮ್ಯತೆ ಇದ್ದುದು ಪತ್ತೆಯಾಗಿರುವುದರಿಂದ ಪೊಲೀಸರ ತಂಡ ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿದೆ.