ಸಾರಾಂಶ
ಬೀದರ್ ತಾಲೂಕಿನ ಚಿಟ್ಟಾವಾಡಿ ಗ್ರಾಮದಲ್ಲಿ ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾತ್ಮ ಬೊಮ್ಮಗೊಂಡೇಶ್ವರರ ಮೂರ್ತಿ ಉದ್ಘಾಟನೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ತಾಲೂಕಿನ ಚಿಟ್ಟಾವಾಡಿ ಗ್ರಾಮದಲ್ಲಿ ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾತ್ಮ ಬೊಮ್ಮಗೊಂಡೇಶ್ವರರ ಮೂರ್ತಿ ಉದ್ಘಾಟನೆ ನೆರವೇರಿಸಿದರು.ಬಸವಕಲ್ಯಾಣದಿಂದ ನೇರವಾಗಿ ಚಿಟ್ಟಾವಾಡಿ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಬರಲು ವಿಳಂಬ ಆಗಿದ್ದ ಕಾರಣ ಅವರು ವೇದಿಕೆಯನ್ನು ಹಂಚಿಕೊಳ್ಳದೆ ನೇರವಾಗಿ ತೆರಳಿದರು. ಬೊಮ್ಮಗೊಂಡೇಶ್ವರ ಮೂರ್ತಿ ಅನಾವರಣ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳನ್ನು ಆಯೋಜಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಗುರುಪೀಠ ತಿಂಥಿಣಿ ಬ್ರಿಡ್ಜ್ ನ ಸಿದ್ದರಾಮನಂದ ಮಹಾಸ್ವಾಮೀ, ಗೋಪಾಲ ಮಹಾರಾಯರು, ಬೀರಲಿಂಗೇಶ್ವರ ಮಠ ಉಚ್ಚ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಸಚಿವ ಎಂಬಿ ಪಾಟೀಲ್, ಮಾಜಿ ಸಚಿವರಾದ ಅಮರೇಶ್ವರ ಬಯ್ಯಾಪೂರ, ಬಂಡೆಪ್ಪ ಖಾಶೆಂಪೂರ, ಮುಖಂಡರಾದ ಅಮೃತರಾವ್ ಚಿಮಕೋಡೆ, ಚಂದ್ರಶೇಖರ್ ಚನ್ನಶೆಟ್ಟಿ, ಚಿಟ್ಟಾ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಗಾಳ್ಯಪ್ಪ, ಬಸವರಾಜ್ ಮಾಳ್ಗೆ, ಪಂಡಿತ್ ರಾವ್ ಚಿದ್ರಿ, ಭಾರತಿಬಾಯಿ ಶೇರಿಕಾರ, ಅಬ್ದುಲ್ ಮನ್ನಾನ್ ಸೇಠ, ಶಿವಾಜಿರಾವ್ ಪಾಟೀಲ್, ಮಾಳಪ್ಪ ಅಡಸಾರೆ, ಎಮ್.ಎಸ್ ಕಟ್ಗಿ, ಶಂಕರ್ ರೆಡ್ಡಿ ಚಿಟ್ಟಾ, ದೇವೇಂದ್ರ ಸೋನಿ, ಬಾಬುರಾವ್ ಎಸ್ ಲದ್ದೇಕರ್, ಶರಣಮ್ಮ ಕೊಡ್ಗೆ, ದಶರಥ ಮರ್ಗೆಂ, ಚಂದ್ರಕಾಂತ್ ಮುರಕುಂದೆ, ರಮೇಶ್ ಬಿರಾದಾರ್, ಜಗದೇವಿ ಜಗನಾಥ, ದೀಪಿಕಾ ಮಚೇಂದ್ರ, ಪಿಡಿಓ ಸುನಿತಾ,, ಶಕುಂತಲಾ ಬೆಲ್ದಾಳೆ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದರು.