ಜನಾಂಗ ಬಾಂಧವರ ನಡುವೆ ನಡೆದ ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಅರಮೇರಿಯ ಎ ವೈ ಸಿ ಸಿ ತಂಡ ಗೆಲುವು ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮಹಿಳೆಯರ ಹಗ್ಗ ಜಗ್ಗಾಟ್ಟ ಸ್ಪರ್ಧೆಯಲ್ಲಿ ಕೋತೂರು ತಂಡ ಗೆಲುವು ಸಾಧಿಸಿದರೆ ಪೆರ್ನಾಡ್ ತಂಡ ಕರ್ನಾಟಕ ರನ್ನರ್ ಅಪ್ ಸ್ಥಾನ ಪಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕ್ರೀಡಾಕೂಟದ ಆಯೋಜನೆಯಿಂದ ಜನಾಂಗಬಾಂಧವರ ನಡುವೆ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಂಜಿಲ ಗ್ರಾಮದ ನಾಲ್ನಾಡು ಶಿವಾಜಿ ಯೂತ್ಸ್ ವತಿಯಿಂದ 17 ರಿಂದ 21 ರವರೆಗೆ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿವಿಧ ಕ್ರೀಡಾಕೂಟಗಳಲ್ಲಿ ಗೆಲವು ಸಾಧಿಸಿದವರು ಸಂಭ್ರಮಿಸಿದರೆ ಸೋತವರು ನಿರಾಶರಾಗುವ ಅಗತ್ಯವಿಲ್ಲ. ಇಂತಹ ಕ್ರೀಡಾಕೂಟಗಳಿಂದ ಸೌಹಾರ್ದದ ವಾತಾವರಣ ಮೂಡುತ್ತದೆ. ಕುಟುಂಬಗಳ ನಡುವೆ ಮೂಡುವಂತೆ ಸಮಾಜದಲ್ಲೂ ಸೌಹಾರ್ದದ ವಾತಾವರಣ ಏರ್ಪಡುವಂತಾಗಲಿ ಎಂದರು.ಸಮಾರಂಭದಲ್ಲಿ ಶಾಸಕ ಎಸ್ ಪೊನ್ನಣ್ಣ, ಹಾಗೂ ಜನಪದ ತಜ್ಞ ಉತ್ತುಕುಟ್ಟಡ ತಿಮ್ಮಯ್ಯ ( ಉಪ್ಪಚ್ಚ) ವಾಲಗ ತಜ್ಞ ಕೊಟ್ಟ ಕುಟ್ಟಂಡ ಶಂಭು ಅವರನ್ನು ಗೌರವಿಸಲಾಯಿತು .
ಕುಂಜಿಲ- ಕಕ್ಕಬೆ ನಾಲ್ನಾಡು ಶಿವಾಜಿ ಯೂತ್ ಕ್ಲಬ್ ಅಧ್ಯಕ್ಷ ಉತ್ತುಕುಟ್ಟಡ ನಿತಿನ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ಕುಂಜಲ- ಕಕ್ಕಬೆ ಮಾಜಿ ಮಂಡಲ ಪಂಚಾಯತಿ ಪ್ರಧಾನ ಬಾಚಮಂಡ ರಾಜಾ ಪೂವಣ್ಣ, ಬೆಂಗಳೂರು ಹೈಕೋರ್ಟ್ ವಕೀಲ ಮೂಕುಟ್ಟಡ ಬೋಪಣ್ಣ, ಕೊಡಗು ಕೆಂಬಟ್ಟಿ ಸಮಾಜದ ಪ್ರಧಾನ ಕಾರ್ಯದರ್ಶಿ ಮೊಳ್ಳೆಕುಟ್ಟಂಡ ದಿನು ಭೋಜಪ್ಪ, ಕುಂಜಿಲ-ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ , ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಚಪ್ಪಂಡಡಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಹಾಗೂ ಶಿವಾಜಿ ಯೂತ್ಸ್ ಪದಾಧಿಕಾರಿಗಳು, ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು. ದಿನೇಶ್ ಪೆಗ್ಗುಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಕ್ರೀಡಾಕೂಟದವಿಜೇತರು: ಜನಾಂಗಬಾಂಧವರನಡುವೆನಡೆದಪುರುಷರಕ್ರಿಕೆಟ್ಪಂದ್ಯಾಟದಲ್ಲಿಅರಮೇರಿಯಎವೈಸಿಸಿತಂಡಗೆಲುವುಸಾಧಿಸಿಪ್ರಶಸ್ತಿಯನ್ನುತನ್ನದಾಗಿಸಿಕೊಂಡಿತು.ಪುತ್ತುಮಾಡ್ಎತಂಡರನ್ನರ್ಅಪ್ಸ್ಥಾನಕ್ಕೆತೃಪ್ತಿಪಟ್ಟುಕೊಂಡಿತು. ಪುತತುಮಾಡ್ಬಿತಂಡತೃತೀಯಸ್ಥಾನಪಡೆಯಿತು. ಪಂದ್ಯಶ್ರೇಷ್ಠಪ್ರಶಸ್ತಿಪ್ರಮೋದ್ಜೋಡುಬೀಟಿ, ಪಂದ್ಯಪುರುಷೋತ್ತಮದಿಲನ್ಅರಮೆರಿ ಭಾಜನರಾದರು.
ಮಹಿಳೆಯರಹಗ್ಗಜಗ್ಗಾಟ್ಟಸ್ಪರ್ಧೆಯಲ್ಲಿಕೋತೂರುತಂಡಗೆಲುವುಸಾಧಿಸಿದರೆಪೆರ್ನಾಡ್ತಂಡಕರ್ನಾಟಕರನ್ನರ್ಅಪ್ಸ್ಥಾನಪಡೆಯಿತು.