ಬೆಳ್ತಂಗಡಿ: ಮಹಾಭಾರತದ ಮೂಲ ಕಥೆಯನ್ನು ಹೊಂದಿರುವ ಈ ಪುಸ್ತಕಗಳನ್ನು ಓದುವುದೇ ನಾವು ಲೇಖಕರಿಗೆ ಕೊಡುವ ಪ್ರೋತ್ಸಾಹವಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತಿ ಸ್ವಾಮೀಜಿ ಹೇಳಿದರು.
ಅವರು ಗುರುವಾಯನಕೆರೆ ಸನಿಹದ ಹವ್ಯಕಭವನದಲ್ಲಿ ಶ್ರೀ ರಾಮಚಂದ್ರಭಾರತೀ ಸ್ವಾಮೀಜಿಯವರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಪುಟ್ಟ ಭಾರತ ಪುಸ್ತಕಗಳ ಲೋಕಾರ್ಪಣೆಯ ಸಂದರ್ಭದಲ್ಲಿ ಮಠದ ಶಿಷ್ಯರಿಗೆ ಕರೆ ನೀಡಿದರು.ಒಂದು ಲಕ್ಷ ಶ್ಲೋಕಗಳನ್ನು ಹೊಂದಿರುವ ಹದಿನೆಂಟು ಪರ್ವಗಳಲ್ಲಿರುವ ವ್ಯಾಸ ಮಹಾಭಾರತವನ್ನು ಪುಟ್ಟದಾಗಿಸಿ "ಪುಟ್ಟ ಭಾರತ " ವೆಂಬ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ- ಯುವಜನತೆಗಾಗಿ ಬರೆದ ಲೇಖಕ ವಿಶ್ವೇಶ್ವರ ಭಟ್ಟ ಉಂಡೆಮನೆ ಅವರ ಪ್ರಯತ್ನ ಮೆಚ್ಚುವಂತಿದೆ. ಕನ್ನಡ ಪುಟ್ಟ ಭಾರತವನ್ನು ಆಂಗ್ಲ ಭಾಷೆಗೆ ಭಾಷಾಂತರ ಮಾಡಿ(ಅನುವಾದಕಿ - ಕೀರ್ತಿಶ್ರೀ ಉಜಿರೆ) ಲೋಕಾರ್ಪಣೆ ಮಾಡಿದ ಕಾರ್ಯವು ಕಬ್ಬನ್ನು ಹಿಂಡಿ ರಸವನ್ನು ತೆಗೆದು ಕೊಟ್ಟಂತಾಗಿದೆ. ಇದರಿಂದ ಬರುವ ಮುದ್ರಣ ವೆಚ್ಚಕ್ಕೆ ಹೊರತಾದ ಆದಾಯವನ್ನು ವೇದಶಿಕ್ಷಣಕ್ಕೆ ಅರ್ಪಿಸುವ ಸೇವಾ ಕಾರ್ಯವೂ ಶ್ಲಾಘನೀಯ. ವ್ಯಾಸ ಈ ಮಾತುಗಳನ್ನು ಹೇಳಿ ಈ ಪುಸ್ತಕಗಳನ್ನು ಓದಿ ಲೇಖಕರನ್ನು ಪ್ರೋತ್ಸಾಹಿಸುವಂತೆ ನೆರೆದ ಶಿಷ್ಯಸ್ತೋಮಕ್ಕೆ ಶ್ರೀಗಳು ಕರೆನೀಡಿದರು.ಪುಸ್ತಕದ ಪರಿಚಯವನ್ನು ದೇವಿಕಾ ಶಾಸ್ತ್ರಿ ಮಾಡಿದರು. ಬೆಳ್ತಂಗಡಿ ಸೀಮೆಯ ಮತ್ತು ಮಂಗಳೂರು ಹೋಬಳಿಯ ವಲಯ - ಮಂಡಲಗಳ ಪ್ರಮುಖರು, ನಮ್ಮಮನೆ ಹವ್ಯಕಭವನದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಗಳು ಲೇಖಕ ವಿಶ್ವೇಶ್ವರ ಭಟ್ಟ ಹಾಗೂ ಅನುವಾದಕಿ ಕೀರ್ತಿ ಶ್ರೀಯವರನ್ನು ಮಂತ್ರಾಕ್ಷತೆ ನೀಡಿ ಹರಸಿದರು. ಉದಯಶಂಕರ ಕೋಡ್ಯಡ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು.*ರಾಮಾಯಣ ಹಕ್ಕಿನೋಟ- A Bird''''s eye view of Raamaayana ( ಒಂದೇ ಪುಸ್ತಕದಲ್ಲಿ ಎರಡೂ ಭಾಷೆಗಳಲ್ಲಿ)ದಲ್ಲಿ ವಾಲ್ಮೀಕಿ ರಾಮಾಯಣದ ಏಳೂ ಕಾಂಡಗಳ ಕಥೆಯಿದ್ದು ನಾವು ಕೇಳಿದ - ಓದಿದ ಇತರ ಮೌಲ್ಯವರ್ಧಿತ ರಾಮಾಯಣಗಳ ಕಥೆಗಳಿಗೂ ಮೂಲ ರಾಮಾಯಣದ ಕಥೆಗೂ ಇರುವ ವ್ಯತ್ಯಾಸವನ್ನು ಸಾಂದರ್ಭಿಕವಾಗಿ ಉಲ್ಲೇಖಿಸಲ್ಪಟ್ಟ ಕೃತಿ. ಪುಟ್ಟ ಭಾರತ (ಕನ್ನಡ), Putta Bhaarata -Mahaabhaarata in Brief (ಆಂಗ್ಲ ಭಾಷೆ) ಈ ಪುಸ್ತಕಗಳು ವ್ಯಾಸರ ಮಹಾಭಾರತದ ಮೂಲ ಕಥೆಯೊಂದಿಗೆ ನಾವು ಕೇಳಿದ - ಓದಿದ ಮಹಾಭಾರತದ ಮೌಲ್ಯವರ್ಧಿತ ಕಥೆಗಳಿಗೂ ಇರುವ ವ್ಯತ್ಯಾಸವನ್ನು ಸಾಂದರ್ಭಿಕವಾಗಿ ಉಲ್ಲೇಖಿಸಲ್ಪಟ್ಟ ಕೃತಿಗಳಾಗಿವೆ. ಈ ಎರಡೂ ಕೃತಿಗಳ ಹಿಂದೀ ಭಾಷಾನುವಾದವು ನಡೆಯುತ್ತಿದ್ದು ಬನಾರಸಿನ ಪ್ರಕಾಶನ ಸಂಸ್ಥೆಯೊಂದು ಇವುಗಳನ್ನು ಪ್ರಕಟಿಸಲು ಮುಂದೆ ಬಂದಿದೆ. ರಾಮಾಯಣ ಹಕ್ಕಿನೋಟವು ಸಂಪೂರ್ಣವಾಗಿ ಮಾರಾಟವಾಗಿದ್ದು ಅದರಿಂದ ಬಂದ ಮುದ್ರಣಕ್ಕೆ ಹೊರತಾದ ₹1,25,000 ಆದಾಯವನ್ನು ಗೋಕರ್ಣದ ಅಶೋಕೆಯಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ನ ಶಿವಗುರುಕುಲಕ್ಕೆ ಅರ್ಪಿಸಿದ್ದು, ಪುಟ್ಟ ಭಾರತದಿಂದ ಬರುವ ಆದಾಯವನ್ನೂ ವೇದವ್ಯಾಸರ ತುಂಬಾ ಇಷ್ಟದ ಕ್ಷೇತ್ರವಾದ ವೇದಗಳ ಶಿಕ್ಷಣಕ್ಕಾಗಿರುವ ಶಿವಗುರುಕುಲಕ್ಕೆ ಲೇಖಕರು ಸಮರ್ಪಿಸಲಿದ್ದಾರೆ. ನಿರೀಕ್ಷಿತ ಆದಾಯದ ಆಧಾರದಲ್ಲಿ ಈಗಾಗಲೇ ₹ 1 ಲಕ್ಷಗಳನ್ನು ವಿಶ್ವೇಶ್ವರ ಭಟ್ಟರು ಶಿವಗುರುಕುಲಕ್ಕೆ ಸಮರ್ಪಿಸಿದ್ದಾರೆ.ಗುರುವಾಯನಕೆರೆ: ಪುಟ್ಟ ಭಾರತ ಪುಸ್ತಕಗಳ ಲೋಕಾರ್ಪಣೆ
ಗುರುವಾಯನಕೆರೆ ಸನಿಹದ ಹವ್ಯಕಭವನದಲ್ಲಿ ಶ್ರೀ ರಾಮಚಂದ್ರಭಾರತೀ ಸ್ವಾಮೀಜಿಯವರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಪುಟ್ಟ ಭಾರತ ಪುಸ್ತಕಗಳ ಲೋಕಾರ್ಪಣೆಯ ಸಂದರ್ಭದಲ್ಲಿ ಮಠದ ಶಿಷ್ಯರಿಗೆ ಕರೆ ನೀಡಿದರು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.