ಸಾರಾಂಶ
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಸಹಕಾರ ರತ್ನ ಉತ್ತಮ ರಾವಸಾಹೇಬ ಪಾಟೀಲ ಜನ್ಮದಿನದ ಪ್ರಯುಕ್ತ ನಗರದ ವಾರ್ಡ್ ನಂ.14 ಜತ್ರಾಟ ವೆಸನಲ್ಲಿ ಬೋರವೆಲ್ ಕೊರೆಸುವ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ನಗರ ಸೇವಕ ದತ್ತಾ ನಾಯಿಕ ಮಾತನಾಡಿ, ಚುನಾವಣಾ ಭರಾಟೆಯಲ್ಲಿ ಉತ್ತಮ ಪಾಟೀಲರು ಬೋರ್ ಹೊಡೆಯುವ ಭರವಸೆ ಇಲ್ಲಿನ ಜನರಿಗೆ ನೀಡಿದ್ದರು. ಅದರಂತೆ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಶುಭ ಕಾರ್ಯವನ್ನು ಅವರು ಜನರಿಗೋಸ್ಕರ ಪೂರ್ಣಗೊಳಿಸಿದ್ದಾರೆ. ಭವಿಷ್ಯದಲ್ಲಿ ಉತ್ತಮ ಪಾಟೀಲರ ಮೂಲಕ ಜತ್ರಾಟ್ ವೇಸ್ ಭಾಗದಲ್ಲಿ ಹೆಚ್ಚಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸೇವಕ ಶೌಕತ ಮನೇರ್, ಸುನಿಲ ಶೇಲಾರ, ಓಂಕಾರ್ ಅಸೋದೆ, ಗಿರೀಶ ಕಮತೆ, ಇಮ್ರಾನ್ ಮಕಾನದಾರ, ಅಪ್ಪಾ ಶೇಟಕೆ, ವಿಜಯ್ ಕಾಂಬ್ಳೆ, ಸ್ವಪ್ನಿಲ್ ಕಾಂಬಳೆ, ಮಹದೇವ್ ಜಾಧವ್, ಸಾಗರ್ ಕಾಂಬಳೆ ಜತ್ರಾಟ್ ವೆಸ ಕಾರ್ಯಕರ್ತರು ಉಪಸ್ಥಿತರಿದ್ದರು.ಹೊಸ ಭರವಸೆಯ ಆದರ್ಶ ಯುವ ನಾಯಕ ಉತ್ತಮ ಪಾಟೀಲ: ನಿರಂಜನ ಪಾಟೀಲ(ಸರಕಾರ)ನಿಪ್ಪಾಣಿ: ನಿಪ್ಪಾಣಿ ಕ್ಷೇತ್ರದಲ್ಲಿ ಸಹಕಾರ, ಕೃಷಿ, ಶಿಕ್ಷಣ, ರಾಜಕೀಯ, ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಬಡವರ ಬೆನ್ನೆಲುಬಾಗಿ ನಿಂತಿರುವ ಯುವ ಮುಖಂಡರಾದ ಉತ್ತಮ ಪಾಟೀಲರು ನಿಪ್ಪಾಣಿ ತಾಲೂಕಿನ ಸಹಸ್ರಾರು ಯುವಕರ ಮನದಲ್ಲಿ ಪ್ರಭುತ್ವ ಸಾಧಿಸಿರುವ ಉಕ್ಕಿನ ನಾಯಕ ಎಂದು ಮಮದಾಪುರ ಗ್ರಾಮ ಪಂಚಾಯತಿ ಸದಸ್ಯ ನಿರಂಜನ ಪಾಟೀಲ(ಸರಕಾರ) ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಇದುವರೆಗಿನ ಬಿರುಸಿನ ಪಯಣ, ನಿಖರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಅವರ ಬೆನ್ನ ಹಿಂದೆ ನಿಲ್ಲುವ ಹಾಗೂ ಜೀವಕ್ಕೆ ಜೀವ ಕೊಡುವ ಸಾವಿರಾರು ಕಾರ್ಯಕರ್ತರ ಉತ್ಸಾಹ ಗಮನಿಸಿದರೆ ನಿಪ್ಪಾಣಿ ಕ್ಷೇತ್ರದ ರಾಜಕೀಯ ಸಮೀಕರಣದಲ್ಲಿ ಹೊಸ ಭರವಸೆಯ ಯುವ ಮತ್ತು ಶಕ್ತಿಯುತ ಮುಖ ಉತ್ತಮ ಪಾಟೀಲರು ಎಂದು ಪರಿಚಯಿಸಿದೆ. ರಾಜಕೀಯ ಜಗತ್ತಿಗೆ ಕಾಲಿಡಲು ಇಚ್ಚಿಸುವ ಯುವ ಪೀಳಿಗೆಗೆ ಒಬ್ಬ ಆದರ್ಶ ನಾಯಕರು. ಮಹತ್ವಕಾಂಕ್ಷೆ ಕಡೆಗೆ ಒಂದು ದೃಢವಾದ ಪ್ರಯಾಣ, ಸೌಹಾರ್ದ, ಆಡಳಿತದಲ್ಲಿ ಅಧ್ಯಯನ, ಜಿಜ್ಞಾಸೆಯ ಮನೋಭಾವ, ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ಯೋಜನೆಗಳು, ಜನಪರ ನಿಸ್ವಾರ್ಥ ಸೇವೆ ಹಾಗೂ ನಮಗೆ ಅಗತ್ಯವಿರುವ ಮಾರ್ಗದರ್ಶನ ಒದಗಿಸಿದ ಇಂತಹ ನೇತೃತ್ವ ಎಂದಿಗೂ ನಮ್ಮ ಜೊತೆ ಇರಲಿ ಎಂದು ಶುಭ ಹಾರೈಸಿದರು.ಗ್ರಾಮ ಪಂಚಾಯತಿ ಸದಸ್ಯ ಅನಿಲ ಸಂಕಪಾಳ ಮಾತನಾಡಿ, ಪ್ರತಿಕೂಲ ಮತ್ತು ಅನುಕೂಲಕರ ಪರಿಸ್ಥಿತಿಗಳಲ್ಲಿ ಹೆದರದೆ ಹೋರಾಡುವ, ಮಹತ್ವಕಾಂಕ್ಷೆಯ ಕಡೆಗೆ ಒಂದು ದೃಢವಾದ ಪ್ರಯಾಣ ಬೆಳೆಸಿ ಜನರ ಮಧ್ಯೆ ಇದ್ದು ಕ್ಷೇತ್ರದ ಬಡ ಜನರ ಪರ ಹಗಲಿರುಳು ಶ್ರಮಿಸುತ್ತಿರುವ ಉತ್ತಮ ಪಾಟೀಲರು ಸಮಸ್ಯೆಗೆ ಸ್ಪಂದಿಸುತ್ತ ನಿಸ್ವಾರ್ಥ ಸೇವೆಯಿಂದ ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದು ಕೊಂಡಿದ್ದಾರೆ ಎಂದು ಶ್ಲಾಘಿಸಿದರು.