ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿರುವ ಬೋರ್‌ವೆಲ್ ದುರಸ್ತಿದಾರರ ಕ್ಷೇಮಾಭಿವೃದ್ಧಿ ಸಂಘವನ್ನು ಕಾರ್ಮಿಕ ಇಲಾಖೆಯ ಅಸಂಘಟಿತ ವರ್ಗಕ್ಕೆ ಸೇರಿಸುವ ಮೂಲಕ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ತಾಲೂಕಿನ ಮಹದೇಶ್ವರಪುರ ಗ್ರಾಮದ ಮಹದೇಶ್ವರ ಸ್ವಾಮಿ ದೇವೆಸ್ಥಾನದ ಆವರಣದಲ್ಲಿ ನಡೆದ ತಾಲೂಕು ಬೋರ್‌ವೆಲ್ ದುರಸ್ತಿದಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿ, ಬೋರ್‌ವೆಲ್ ದುರಸ್ತಿದಾರರು ರೈತರ ಬೆನ್ನುಲುಬಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಮಾಡುತ್ತಿರುವ ರೈತರಿಗೆ ದುರಸ್ಥಿದಾರರು ಸಹಕಾರಿಯಾಗಿದ್ದಾರೆ ಎನ್ನುವುದನ್ನು ನಾನೊಬ್ಬ ರೈತನಾಗಿ ಹೇಳುತ್ತೇನೆ ಎಂದರು.
ರೈತರು ಕೃಷಿ ಚಟುವಟಿಕೆ ಮಾಡುವ ವೇಳೆ ಆಕಸ್ಮಿಕವಾಗಿ ಬೋರ್ ವೆಲ್ ಗಳು ದುರಸ್ತಿಗೊಂಡಾಗ ತಕ್ಷಣವೇ ಬಂದು ರಿಪೇರಿ ಮಾಡುವ ಮೂಲಕ ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದ್ದಾರೆ. ಈ ಸಂಘಟಕರು ಕಾರ್ಮಿಕ ಇಲಾಖೆಗೆ ಸೇರ್ಪಡೆಗೊಂಡಿಲ್ಲ ಎಂದರು.ಬೋರ್ ವೆಲ್ ದುರಸ್ತಿ ಮಾಡುವಾಗ ಯಾವುದಾರೂ ಅವಘಡಗಳು ಸಂಭವಿಸಿದಾಗ ಪರಿಹಾರ, ಸೌಲಭ್ಯಗಳು ದೊರೆಯುತ್ತಿಲ್ಲ. ಸಂಘಟನೆಯನ್ನು ಕಾರ್ಮಿಕ ಇಲಾಖೆಗೆ ಒಳಪಡುವಂತೆ ಸೇರಿಸಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಈ ಸಂಘ ಇದೇ ಎಂಬ ಮಾಹಿತಿಯೇ ನನಗೆ ಇರಲಿಲ್ಲ. ಸಂಘಟಕರು ನನ್ನ ಆಹ್ವಾನ ಮಾಡಲು ಬಂದಾಂಗ ಹಲವು ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದೀರಾ. ಆರ್‌ಟಿಒ ಅಧಿಕಾರಿಗಳು ವಾಹನ ಹಿಡಿದು ತೊಂದರೆ ಕೊಡುತ್ತಾರೆ ಮತ್ತು ಸಂಘಟನೆಯನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡುವಂತೆ ಸೇರಿಸಿ ಎಂಬ ಬೇಡಿಕೆ ನೀಡಿದ್ದೀರಿ. ಮುಂದೆ ಈಡೇರಿಸುವುದಾಗಿ ಭರವಸೆ ನೀಡಿದರು.
ಬಿಎಂಎಸ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ವಾಸುದೇವ್ ಮಾತನಾಡಿ, ದೇಶದಲ್ಲಿ ಸಂಘಟಿತ ಕಾರ್ಮಿಕರು ಇರುವುದು ಕೇವಲ ಶೇ.5ರಷ್ಟು ಮಾತ್ರ, ಶೇ.95ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಆದರೂ ಅಸಂಘಟಿತ ಕಾರ್ಮಿಕರ ಕೂಗು ಯಾರಿಗೂ ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲಾ ಸಂಘಟಿತ ಕಾರ್ಮಿಕರ ಧ್ವನಿಗೂಡಬೇಕು. ನಾವು ಹೋರಾಟ ಮಾಡದೆಯೇ ನಮ್ಮ ಬೇಡಿಕೆಗಳು ಈಡೇರುವುದಿಲ್ಲ. ಹಾಗಾಗಿ ಹೋರಾಟವೇ ನಮ್ಮ ಮುಖ್ಯ ಅಸ್ತ್ರವಾಗಿದ್ದು ಎಲ್ಲರು ಒಗ್ಗಟ್ಟಿನಿಂದ ಸಂಘಟಿತರಾಗಬೇಕು ಎಂದು ಒತ್ತಾಯಿಸಿದರು.ಕಾರ್ಯಕ್ರಮವನ್ನು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಉದ್ಘಾಟಿಸಿದರು. ಈ ವೇಳೆ ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಸಂಘದ ಅಧ್ಯಕ್ಷ ವಸಂತ್ ಕುಮಾರ್(ನಂಜಪ್ಪ), ಉಪಾಧ್ಯಕ್ಷ ಟಿ.ಕೆ.ಸತೀಶ್, ಕಾರ್ಯದರ್ಶಿ ಕೆಂಪೇಗೌಡ, ಖಜಾಂಚಿ ಪ್ರಭಾಕರ್, ಪದಾಧಿಕಾರಿಗಳಾದ ಟಿ.ಕೆ.ಅಶೋಕ್, ಎಂ.ಬಿ.ನಾಗರಾಜು, ಚಲುವರಾಜು, ಹರೀಶ, ಕುಮಾರ್, ಮಂಜುನಾಥ್, ಶಂಕರ್, ದಿನೇಶ್, ರೇವಣ್ಣ, ಶಿವಣ್ಣ, ಯಜಮಾನರಾದ ಎಂ.ಬಿ.ಶ್ರೀಕಂಠೇಗೌಡ, ಗೋಪಾಲಕೃಷ್ಣ, ದೊಡ್ಡತಮ್ಮೇಗೌಡ, ಎಲ್.ಡಿ.ಸಂಜಯ್, ಎಂ.ವಿ.ಅಶೋಕ್, ನಿಂಗೇಗೌಡ, ಗಿರೀಗೌಡ, ಚಿನ್ನಸ್ವಾಮಿ, ಪಿಎಸ್‌ಐಗಳಾದ ಉಮೇಶ್, ಅಜರುದ್ದೀನ್, ಎಸ್.ಎನ್.ಟಿ.ಸೋಮಶೇಖರ್, ಬೋರ್‌ವೆಲ್ ದುರಸ್ತಿಗಾರರ ಸಂಘದ ಎಲ್ಲಾ ಸದಸ್ಯರುಗಳು ಸೇರಿದಂತೆ ಹಲವರು ಹಾಜರಿದ್ದರು.