ಸಾಲ ಪಡೆಯೋದು ದೊಡ್ಡದಲ್ಲ, ಸಕಾಲದಲ್ಲಿ ಮರುಪಾವತಿ ಅತ್ಯಂತ ಕಠಿಣ: ತಹಸೀಲ್ದಾರ್‌

| Published : Jan 09 2024, 02:00 AM IST

ಸಾಲ ಪಡೆಯೋದು ದೊಡ್ಡದಲ್ಲ, ಸಕಾಲದಲ್ಲಿ ಮರುಪಾವತಿ ಅತ್ಯಂತ ಕಠಿಣ: ತಹಸೀಲ್ದಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ, ಸರ್ಕಾರೇತರ ಸಂಸ್ಥೆ, ಕೈ ಸಾಲ ಇನ್ಯಾವುದೇ ರೂಪದಲ್ಲಿ ಸಾಲ ಪಡೆಯುವುದು ಸುಲಭ. ಸಾಲ ಪಡೆಯುವಾಗ ಅದನ್ನು ತೀರಿಸುವ ಹೊಣೆಗಾರಿಕೆಯೂ ಮುಖ್ಯ. ಪಡೆದ ಸಾಲ ಮರುಪಾವತಿಯ ಹಾದಿ ಕಠಿಣವಾಗಿರುತ್ತದೆ ಎಂದು ಹೊಸನಗರ ತಹಸೀಲ್ದಾರ್‌ ರಶ್ಮಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸನಗರ

ಸರ್ಕಾರ, ಸರ್ಕಾರೇತರ ಸಂಸ್ಥೆಗಳಿಂದ ಪಡೆದ ಸಾಲವು ಸದ್ಬಳಕೆ ಆದಲ್ಲಿ ಮಾತ್ರ ಕುಟುಂಬದ ಆರ್ಥಿಕತೆ ಉತ್ತಮವಾಬಲ್ಲದು ಎಂದು ತಹಸೀಲ್ದಾರ್ ರಶ್ಮಿ ಅಭಿಪ್ರಾಯಪಟ್ಟರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಲ ಪಡೆಯುವುದು ದೊಡ್ಡದಲ್ಲ, ಸಕಾಲದಲ್ಲಿ ಮರುಪಾವತಿ ಅತ್ಯಂತ ಕಠಿಣ ಸಾಧನೆ. ಇದು ಸಮರ್ಪಕವಾಗಿದ್ದಲ್ಲಿ ಹಣಕಾಸು ಸಂಸ್ಥೆ ಕೂಡ ಪೂರಕವಾಗಿ ಬೆಳೆಯಬಲ್ಲದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕ ಎನ್.ಆರ್. ದೇವಾನಂದ್ ಮಾತನಾಡಿ, ಹಳ್ಳಿಗಳಲ್ಲಿ ಮಹಿಳೆಯರಲ್ಲಿ ಆರ್ಥಿಕ ಜಾಗೃತಿ ಮೂಡಿದೆ. ಮಹಿಳೆ ಕುಟುಂಬದ ಲೆಕ್ಕ-ಪತ್ರ ನೋಡಿಕೊಂಡರೆ ಸಮಾಜದ ಆರ್ಥಿಕ ಪ್ರಗತಿ ಸಾಧ್ಯ ಎಂದರು.

ಪತ್ರಕರ್ತೆ ಅಶ್ವಿನಿ ಪಂಡಿತ್ ಮಾತನಾಡಿ, ಮೊಬೈಲ್ ಸಂಪರ್ಕ ಸಾಧನ ಆಗಿರಲಿ. ಅದು ದಿನದ ಕೆಲಸವನ್ನು ಹಾಳುಮಾಡುವ ಮನರಂಜಗೆ ಸೀಮಿತ ಆಗದಿರಲಿ ಎಂದು ಸಲಹೆ ನೀಡಿದರು.

ಡಾ.ಶ್ರೀಪತಿ ಹಳಗುಂದ ಮಾತನಾಡಿ, ಕೃಷಿ ಹಾಗೂ ಗೃಹ ಉದ್ಯಮದಲ್ಲಿ ಧರ್ಮಸ್ಥಳ ಯೋಜನೆಯ ಮೂಲಕ ಸಾಕಷ್ಟು ಮಹಿಳೆಯರು ತೊಡಗಿರುವುದು ಶ್ಲಾಘನೀಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಯೋಜನೆ ಕುರಿತಂತೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಮೋಹನ್ ಶೆಟ್ಟಿ, ಶಶಿಕಲಾ, ಸಮನ್ವಯಾಧಿಕಾರಿ ಜಯಲಕ್ಷ್ಮೀ, ಸುಭಾಷ್ ಇದ್ದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

- - - -8ಎಚ್‍ಒಎಸ್1ಪಿ: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವನ್ನು ತಹಸೀಲ್ದಾರ್ ರಶ್ಮಿ ಉದ್ಘಾಟಿಸಿದರು.