ಬೊಟ್ಟೋಳಂಡ, ಕನ್ನಂಡ, ಕೋಡಿರ ತಂಡಕ್ಕೆ ಗೆಲವು

| Published : Apr 12 2025, 12:48 AM IST

ಸಾರಾಂಶ

ಮಲಚೀರ ಮತ್ತು ಬೊಟ್ಟೋಳಂಡ ನಡುವೆ ನಡೆದ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಗೆಲುವು ಸಾಧಿಸಿತು. ಕನ್ನಂಡ ಮತ್ತು ಚೊಟ್ಟೆರ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಕನ್ನಂಡ ತಂಡ ಜಯ ಸಾಧಿಸಿತು. ಕೋಡಿರ ಮತ್ತು ಪಾಲೆಕಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೋಡಿರ ತಂಡ ಗೆಲುವು ದಾಖಲಿಸಿತು. ಬಡುವಮಂಡ ಮತ್ತು ಪಳಂಗೇಟಿರ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬಡುವಮಂಡ ಜಯ ಸಾಧಿಸಿತು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮುದ್ದಂಡ ಕಪ್ ಹಾಕಿ ಪಂದ್ಯಾವಳಿ

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್‌ನ ಶುಕ್ರವಾರ ನಡೆದ ಪಂದ್ಯದಲ್ಲಿ ಬೊಟ್ಟೋಳಂಡ, ಕನ್ನಂಡ, ಕೋಡಿರ ತಂಡಗಳು ಗೆಲುವು ಸಾಧಿಸಿತು.

ಮಲಚೀರ ಮತ್ತು ಬೊಟ್ಟೋಳಂಡ ನಡುವೆ ನಡೆದ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಗೆಲುವು ಸಾಧಿಸಿತು. ಕನ್ನಂಡ ಮತ್ತು ಚೊಟ್ಟೆರ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಕನ್ನಂಡ ತಂಡ ಜಯ ಸಾಧಿಸಿತು. ಕೋಡಿರ ಮತ್ತು ಪಾಲೆಕಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೋಡಿರ ತಂಡ ಗೆಲುವು ದಾಖಲಿಸಿತು. ಬಡುವಮಂಡ ಮತ್ತು ಪಳಂಗೇಟಿರ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬಡುವಮಂಡ ಜಯ ಸಾಧಿಸಿತು.

ನೆಲ್ಲಮಕ್ಕಡ ಮತ್ತು ಕೋಳುಮಾಡಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ಜಯ ಸಾಧಿಸಿತು. ಮುಕ್ಕಾಟಿರ (ಕಡಗದಾಳು) ಮತ್ತು ಚಂದುರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಜಯ ಸಾಧಿಸಿತು. ಬಿದ್ದಾಟಂಡ ಮತ್ತು ಪಾಲಂದಿರ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪಾಲಂದಿರ ಜಯ ದಾಖಲಿಸಿತು.

ಮಂಡಂಗಡ ಮತ್ತು ಬೇರೆರ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಬೇರೆರ ತಂಡ ಗೆಲುವು ಸಾಧಿಸಿತು. ಪುಳ್ಳಂಗಡ ಮತ್ತು ಮಲ್ಲಂಗಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಪುಳ್ಳಂಗಡ ತಂಡ ಜಯ ಸಾಧಿಸಿತು. ಮಚ್ಚಾಮಾಡ ಮತ್ತು ಅಜ್ಜೇಟಿರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಜ್ಜೇಟಿರ ಜಯ ಸಾಧಿಸಿತು. ಕುಪ್ಪಂಡ (ಕೈಕೇರಿ) ಮತ್ತು ಮಾಳೆಯಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ದಾಖಲಿಸಿತು.

ನಾಗಂಡ ಮತ್ತು ಚೆಂಬಾಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ನಾಗಂಡ ತಂಡ ಜಯ ಸಾಧಿಸಿತು. ತೀತಮಾಡ ಮತ್ತು ತಾತಂಡ ತಂಡಗಳ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ತೀತಮಾಡ ತಂಡ ಗೆಲುವು ದಾಖಲಿಸಿತು.

ತಾಚಮಂಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಐನಂಡ ತಂಡ ಜಯ ಸಾಧಿಸಿತು. ಐಚೆಟ್ಟಿರ ಮತ್ತು ಕಾಳೆಯಂಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಐಚೆಟ್ಟಿರ ಜಯ ದಾಖಲಿಸಿತು.

ಕಳಕಂಡ ಮತ್ತು ಬಲ್ಲಣಮಾಡ ನಡುವೆ ನಡೆದ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕಳಕಂಡ ವಿಜಯ ಸಾಧಿಸಿತು. ಅಪ್ಪಚ್ಚೀರ ಮತ್ತು ನಾಳಿಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ನಾಳಿಯಂಡ ತಂಡ ಗೆಲುವು ಸಾಧಿಸಿತು. ಕೊಂಗೇಟಿರ ಮತ್ತು ಪಂದ್ಯಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಕೊಂಗೇಟಿರ ತಂಡ ಗೆಲುವು ದಾಖಲಿಸಿತು.