ವಿರಿಜಾ ನಾಲೆಯಲ್ಲಿ ಮುಳುಗಿ ಬಾಲಕ ಸಾವು

| Published : Oct 11 2025, 12:02 AM IST

ಸಾರಾಂಶ

ಮೈಸೂರಿನ ಕುಂಬಾರಕೊಪ್ಪಲು ಬಳಿಯ ಬಸವನಗುಡಿ ನಿವಾಸಿ ಚಂದ್ರು ಪುತ್ರ ಆಕಾಶ್ (17) ನೀರು ಪಾಲಾದ ಬಾಲಕ. ಈತ ಐಟಿಐ ವಿದ್ಯಾಭ್ಯಾಸ ಮುಗಿಸಿ ಮೈಸೂರಿನ ಕೈನ್ಸ್ ಟೆಕ್ನಾಲಜೀಸ್‌ನಲ್ಲಿ ಟ್ರೈನಿಯಾಗಿದ್ದನು ಎಂದು ತಿಳಿದು ಬಂದಿದೆ.

ಶ್ರೀರಂಗಪಟ್ಟಣ: ಈಜಲು ಹೋಗಿದ್ದ ಬಾಲಕ ವಿರಿಜಾ ನಾಲೆಯಲ್ಲಿ ಗುರುವಾರ ಸಂಜೆ ಮುಳುಗಿ ಮೃತಪಟ್ಟಿದ್ದು, ಶುಕ್ರವಾರ ಅಗ್ನಿಶಾಮಕ ದಳದ ಕಾರ್ಯಾಚರಣೆ ನಂತರ ಬಾಲಕನ ಮೃತ ದೇಹ ಪತ್ತೆಯಾಗಿದೆ. ಮೈಸೂರಿನ ಕುಂಬಾರಕೊಪ್ಪಲು ಬಳಿಯ ಬಸವನಗುಡಿ ನಿವಾಸಿ ಚಂದ್ರು ಪುತ್ರ ಆಕಾಶ್ (17) ನೀರು ಪಾಲಾದ ಬಾಲಕ. ಈತ ಐಟಿಐ ವಿದ್ಯಾಭ್ಯಾಸ ಮುಗಿಸಿ ಮೈಸೂರಿನ ಕೈನ್ಸ್ ಟೆಕ್ನಾಲಜೀಸ್‌ನಲ್ಲಿ ಟ್ರೈನಿಯಾಗಿದ್ದನು ಎಂದು ತಿಳಿದು ಬಂದಿದೆ. ಆಕಾಶ್ ಗುರುವಾರ ಮನೆ ಬಳಿ ಇರುವ ತನ್ನ 6 ಜನ ಸ್ನೇಹಿತರ ಜೊತೆ ವಿರಿಜಾ ನಾಲೆಯಲ್ಲಿ ಈಜಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಕೆಆರ್‌ಎಸ್ ಠಾಣೆ ಪೊಲೀಸರು ಆಗಮಿಸಿ ಪರೀಶೀಲಿಸಿದರು. ನಂತರ ಅಗ್ಮಿಶಾಮಕ ಠಾಣಾಧಿಕಾರಿ ಅಂಬರೀಶ್ ಉಪ್ಪಾರ ನೇತೃತ್ವದಲ್ಲಿ ಸಿಬ್ಬಂದಿ ತೇಜೋಮೂರ್ತಿ, ಅನಂತ, ಚಾಲಕ ಚಂದ್ರಶೇಖರ, ಬಸವರಾಜ, ಬಾಬು, ಶಿವಾನಂದ ಶವಕ್ಕಾಗಿ ಶೋಧನ ಕಾರ್ಯ ನಡೆಸಿದ್ದು, ಶುಕ್ರವಾರ ಶವ ಪತ್ತೆಯಾಗಿದೆ. ಬಾಲಕನ ಶವದ ಪಂಚನಾಮೆ ನಡೆಸಿ ಬಳಿಕ ಪೋಷಕರಿಗೆ ನೀಡಲಾಯಿತು. ಈ ಸಂಬಂಧ ಕುರಿತು ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.