ಸಾರಾಂಶ
ತಾಲೂಕಿನ ಅಸ್ತಾಫನಹಳ್ಳಿ ಗ್ರಾಮದ ಬಾಲಕ, 17 ವರ್ಷದ ಥೊಮೆಸ್‌ನಿಗೆ ಕಳ್ಳತನ ಆರೋಪ ಮೇಲೆ ಡ್ರಿಪ್ ವೈರ್‌ನಿಂದ ಮರಕ್ಕೆ ಕಟ್ಟಿಹಾಕಿ ಥಳಿಸಿ, ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ 9 ಆರೋಪಿಗಳನ್ನು ಭಾನುವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಾಲೂಕು ಪರಿಶಿಷ್ಟ ಪಂಗಡಗಳ ಇಲಾಖೆ ವ್ಯವಸ್ಥಾಪಕ ಬಸವರಾಜ್ ತಿಳಿಸಿದ್ದಾರೆ.
- ಬಂಧಿತರಿಗೆ ನ್ಯಾಯಾಂಗ ಬಂಧನ: ತಾಲೂಕು ಪರಿಶಿಷ್ಟ ಪಂಗಡಗಳ ಇಲಾಖೆ ವ್ಯವಸ್ಥಾಪಕ
- ಅಸ್ತಾಫನಹಳ್ಳಿಗೆ ಇಲಾಖೆ ಜಿಲ್ಲಾ ಅಧಿಕಾರಿ ಭಕ್ತಮಾರ್ಕಂಡಯ್ಯ, ತಾಲೂಕು ಅಧಿಕಾರಿ ರುದ್ರೇಶ್ ಭೇಟಿ- - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಅಸ್ತಾಫನಹಳ್ಳಿ ಗ್ರಾಮದ ಬಾಲಕ, 17 ವರ್ಷದ ಥೊಮೆಸ್‌ನಿಗೆ ಕಳ್ಳತನ ಆರೋಪ ಮೇಲೆ ಡ್ರಿಪ್ ವೈರ್‌ನಿಂದ ಮರಕ್ಕೆ ಕಟ್ಟಿಹಾಕಿ ಥಳಿಸಿ, ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ 9 ಆರೋಪಿಗಳನ್ನು ಭಾನುವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಾಲೂಕು ಪರಿಶಿಷ್ಟ ಪಂಗಡಗಳ ಇಲಾಖೆ ವ್ಯವಸ್ಥಾಪಕ ಬಸವರಾಜ್ ತಿಳಿಸಿದ್ದಾರೆ.ಈ ಘಟನೆಗೆ ಸಂಬಂಧಪಟ್ಟಂತೆ ಪರಿಶಿಷ್ಟ ಪಂಗಡಗಳ ಇಲಾಖೆ ಜಿಲ್ಲಾ ಅಧಿಕಾರಿ ಭಕ್ತಮಾರ್ಕಂಡಯ್ಯ, ತಾಲೂಕು ಅಧಿಕಾರಿ ರುದ್ರೇಶ್ ಅಸ್ತಾಫನಹಳ್ಳಿಗೆ ಭೇಟಿ ನೀಡಿದರು. ಪೊಲೀಸ್ ಠಾಣೆಗೆ ದೂರು ನೀಡಿದ್ದ ಬಾಲಕನ ಅಜ್ಜ ಮಧುಸೂದನ್ ಎಂಬವರಿಂದ ಬಾಲಕನಿಗೆ ಥಳಿಸಿದ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.
ಬಂಧಿತ 9 ಆರೋಪಿತರೆಲ್ಲ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಾಲಕ ತೋಟಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ. ಹೀಗೆ ಕಳ್ಳತನ ಮಾಡಬೇಡ ಎಂದು ಹೊಡೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇಷ್ಟೆಲ್ಲಾ ರಾದ್ದಾಂತವಾಗಿದೆ ಎಂದು ಮಧುಸೂಧನ್ ತನ್ನಿಖಾ ತಂಡದ ಅಧಿಕಾರಿಗಳ ಎದುರು ತಿಳಿಸಿರುವುದಾಗಿ ಅಧಿಕಾರಿ ಬಸವರಾಜ್ ಮಾಹಿತಿ ನೀಡಿದ್ದಾರೆ.- - - -7ಕೆಸಿಎನ್‌ಜಿ8:
ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಗೆ ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಥಳಿತಕ್ಕೊಳಗಾದ ಬಾಲಕನ ಪೋಷಕರಿಂದ ಮಾಹಿತಿ ಪಡೆದುಕೊಂಡರು.