ಕೊಟಬಾಗಿ ಏತ ನೀರಾವರಿ ಕಾಲುವೆಗೆ ನೀರು ಬಿಡದಿದ್ದರೇ ಚುನಾವಣೆ ಬಹಿಷ್ಕಾರ

| Published : Apr 29 2024, 01:30 AM IST

ಕೊಟಬಾಗಿ ಏತ ನೀರಾವರಿ ಕಾಲುವೆಗೆ ನೀರು ಬಿಡದಿದ್ದರೇ ಚುನಾವಣೆ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಕೊಟಬಾಗಿ ಏತ ನೀರಾವರಿ ಯೋಜನೆಯಡಿ ನಿರ್ಮಿಸಿರುವ ಕಾಲುವೆಗೆ ನೀರು ಹರಿಸದಿದ್ದರೇ ಬರುವ ಸಾರ್ವತ್ರಿಕ ಚುನಾವಣೆ ಬಹಿಷ್ಕಾರಿಸುವುದಾಗಿ ಕೆಂಚನಟ್ಟಿ ಸೇರಿದಂತೆ ಈ ಭಾಗದ ಹಳ್ಳಿಯ ಜನರು ನ್ಯಾಯವಾದಿ ಸಿ.ಐ.ಕಪಲ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗಳ ಪರವಾಗಿ ಗ್ರೇಡ್-2 ತಹಸೀಲ್ದಾರ್‌ ಮೂಲಕ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕೊಟಬಾಗಿ ಏತ ನೀರಾವರಿ ಯೋಜನೆಯಡಿ ನಿರ್ಮಿಸಿರುವ ಕಾಲುವೆಗೆ ನೀರು ಹರಿಸದಿದ್ದರೇ ಬರುವ ಸಾರ್ವತ್ರಿಕ ಚುನಾವಣೆ ಬಹಿಷ್ಕಾರಿಸುವುದಾಗಿ ಕೆಂಚನಟ್ಟಿ ಸೇರಿದಂತೆ ಈ ಭಾಗದ ಹಳ್ಳಿಯ ಜನರು ನ್ಯಾಯವಾದಿ ಸಿ.ಐ.ಕಪಲ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗಳ ಪರವಾಗಿ ಗ್ರೇಡ್-2 ತಹಸೀಲ್ದಾರ್‌ ಮೂಲಕ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಿದರು.

ಕೊಟಬಾಗಿ ಏತ ನೀರಾವರಿ ಯೋಜನೆಯಡಿಯಲ್ಲಿ ಬರುವ ಕೆಂಚನಟ್ಟಿ ಸೇರಿದಂತೆ ಸುಮಾರು ಹತ್ತಾರು ಹಳ್ಳಿಗಳು ಬರಗಾಲದ ಭವನೆಯಿಂದ ತತ್ತರಿಸುತ್ತಿದ್ದು, ಜನ ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿರುವುದರಿಂದ ಕೋಟಬಾಗಿ ಏತ ನೀರಾವರಿ ಮೂಲಕ ಕಾಲುವೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಚುನಾವಣೆ ಬಹಿಸ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಭಾಗದ ಗ್ರಾಮಸ್ಥರು ಹಲವಾರು ಬಾರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಕೊಟಬಾಗಿ ಏತ ನೀರಾವರಿ ಕಾಲುವೆ ಮೂಲಕ ತಮ್ಮ ಗ್ರಾಮದ ಕರೆಯನ್ನು ತುಂಬಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ತಪ್ಪಿ ಮನವಿ ಮಾಡಿದ್ದಾಗಿಯೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಳ್ಳದೇ ಕೇವಲ ಹುಕ್ಕೇರಿ ತಾಲೂಕಿನ ಹಳ್ಳಿಗಳಾದ ಸಾರಾಪೂರ, ಹುಳಿ, ಬೆಳವಿ, ಶಿರಹಟ್ಟಿ ಬಿ.ಕೆ.ಮತ್ತು ಶಿರಹಟ್ಟಿ ಕೆ.ಡಿ ಗ್ರಾಮಗಳಿಗೆ ಮಾತ್ರ ನೀರನ್ನು ಮೊರೈಸಿ ಮಲತಾಯಿ ಧೋರಣೆ ತೋರುತ್ತಿದೆ ಎಂದರು.

ಕೊಟಬಾಗಿ ಏತ ನೀರಾವರಿ ಯೋಜನೆಯಡಿಯಲ್ಲಿ ಬರತಕ್ಕಂತ ಚಿಕ್ಕೋಡಿ ತಾಲೂಕಿನ ಗ್ರಾಮಗಳಾದ ಕೆಂಚನಟ್ಟಿ, ನಾಗರಮುನ್ನೋಳಿ, ಬೆಳಕೂಡ, ಹಂಚಿನಾಳ ಬೆಳಗಲಿ, ಡೋಣವಾಡ ಮುಂತಾದ ಗ್ರಾಮಗಳ ಜನ ಜಾನುವಾರಗಳಿರ ಕುಡಿಯಲು ನೀರು ಪೂರೈಸಿ ಈ ಬರಗಾಲದ ಭವನೆಯಿಂದ ಈ ಗ್ರಾಮಗಳ ಜನ ಜಾನುವಾರಗಳನ್ನು ಕಾಪಾಡುವ ಕೆಲಸ ಅತೀ ಜರೂರ ಆಗಬೇಕಾಗಿದ್ದು, ಒಂದು ವೇಳೆ ಸದರಿ ಗ್ರಾಮಗಳಿಗೆ ಹಾಗೂ ಕೆಂಚನಟ್ಟಿ ಕೆರೆಗೆ ನೀರು ಹರಿಯಿಸದೇ ಇದ್ದ ಪಕ್ಷದಲ್ಲಿ ಕೆಂಚನಟ್ಟಿ ಗ್ರಾಮಸ್ಥರು ಮೇ.07 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿರ್ಧರಿಸಿದ್ದು, ಕಾರಣ ತಾವು ಯಾವುದೇ ನೀರು ಹರಿಸಬೇಕು ಇಲ್ಲವಾದಲ್ಲಿ ಬಹಿಷ್ಕಾರಕ್ಕೆ ತಾವೇ ಹೊಣೆಯಾಗುತೀರಾ ಎಂದು ಮನವಿ ಮೂಲಕ ಒತ್ತಾಯಿಸಿದರು.

ನ್ಯಾಯವಾದಿಗಳಾದ ಸಿ.ಐ.ಕಪಲಿ, ರಮೇಶ ಹಿತ್ತಲಮನಿ, ಡಿ.ಆರ್.ಕೊಟೆಪ್ಪಗೋಳ, ಎಸ್.ಪಿ.ಕಮತೆ, ಎಸ್.ಟಿ.ಪಾಟೀಲ, ರಾಮಗೌಡ ಪಾಟೀಲ, ಎ.ಸಿ.ಕಮತೆ, ಆರ್.ಕೆ.ಕಿವಡ, ಬಾಳಪ್ಪ ಗುಂಡೆವಾಡಿ, ಸಿದ್ದಪ್ಪ ದೇಸನೂರ, ರಮೇಶ ಕಾಮಗೌಡ, ರವಿ ಚೆನ್ನವರ ಸೇರಿದಂತೆ ಈ ಭಾಗದ ರೈತರು ಉಪಸ್ಥಿತರಿದ್ದರು.