ಸಾರಾಂಶ
ಜಗಳೂರು ತಾಲೂಕಿನ ಗೌರಿಪುರ ಹೊಸೂರಿನಲ್ಲಿ 103 ಮನೆಗಳಿದ್ದು, 400ಕ್ಕೂ ಹೆಚ್ಚು ಮತಗಳಿವೆ. ಕೂಲಿಕಾರರೇ ಹೆಚ್ಚಿರುವ ಇಲ್ಲಿ 20 ವರ್ಷಗಳಿಂದ ವಾಸ ಮಾಡಿದರೂ ಮನೆಗಳ ಹಕ್ಕುಪತ್ರಗಳನ್ನು ನೀಡಿಲ್ಲ. ಈ ಹಿನ್ನಲೆ ಈ ಬಾರಿಯ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಪೋಸ್ಟರ್ ಕಟ್ಟಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಜಗಳೂರು: ತಾಲೂಕಿನ ಗೌರಿಪುರ ಹೊಸೂರಿನಲ್ಲಿ 103 ಮನೆಗಳಿದ್ದು, 400ಕ್ಕೂ ಹೆಚ್ಚು ಮತಗಳಿವೆ. ಕೂಲಿಕಾರರೇ ಹೆಚ್ಚಿರುವ ಇಲ್ಲಿ 20 ವರ್ಷಗಳಿಂದ ವಾಸ ಮಾಡಿದರೂ ಮನೆಗಳ ಹಕ್ಕುಪತ್ರಗಳನ್ನು ನೀಡಿಲ್ಲ. ಈ ಹಿನ್ನಲೆ ಈ ಬಾರಿಯ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಪೋಸ್ಟರ್ ಕಟ್ಟಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
2002-2003ನೇ ಸಾಲಿನಲ್ಲಿ ಸರ್ಕಾರದಿಂದ 75 ಗುಂಪು ಮನೆಗಳು, ಆಶ್ರಯ ಮನೆಗಳಲ್ಲಿ ವಾಸವಾಗಿದ್ದೇವೆ. ಇನ್ನು ಕೆಲವು ಕುಟುಂಬಗಳು ಮನೆಗಳಿಲ್ಲದ ಕಾರಣ, ಆಶ್ರಯ ಮನೆಗಳ ಅಕ್ಕಪಕ್ಕದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಹಕ್ಕುಪತ್ರ ನೀಡಿದರೆ ಮಾತ್ರ ಮತದಾನ ಮಾಡುತ್ತೇವೆ ಎಂದು ಮುಖಂಡರಾದ ಬಸವರಾಜಪ್ಪ, ಸತ್ಯಮೂರ್ತಿ, ಮೈಲೇಶ್ ವಕೀಲರು, ಬಸವರಾಜಪ್ಪ ಅಂಜಿನಪ್ಪ, ಸತೀಶ್, ಮಾರಪ್ಪ, ಚನ್ನಪ್ಪ, ಹನುಂತಪ್ಪ ಎಚ್ಚರಿಕೆ ನೀಡಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಜಿಪಂ ಸಿಇಒ ಡಾ.ಸುರೇಶ್ ಇಟ್ನಾಳ್, ತಾಲೂಕು ದಂಡಾಧಿಕಾರಿ, ತಾಪಂ ಇಒ ಹಾಗೂ ಪಿಡಿಒ ಗ್ರಾಮಕ್ಕೆ ಭೇಟಿ ನೀಡಿದರು. ಚುನಾವಣೆ ಮುಗಿದ ಅರ್ಹರಿಗೆ ಹಕ್ಕುಪತ್ರಗಳ ನೀಡುತ್ತೇವೆ. ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಗ್ರಾಮಸ್ಥರು ಹಕ್ಕುಪತ್ರಕ್ಕಾಗಿ ಪಟ್ಟುಬಿಡದೇ ಪ್ರತಿಭಟಿಸಿದರು.
- - - -11ಜೆ.ಎಲ್.ಆರ್.3: