ಸಾರಾಂಶ
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಆಗಬೇಕಿದೆ. ಮುಂದಿನ ದಿನಗಳಲ್ಲಿ ಪಡಿತರದಾರರಿಗೆ ಬೇಳೆ, ಅಡುಗೆ ಎಣ್ಣೆ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಜೋಳ ಖರೀದಿ ಮಾಡಿ ಮೂರು ತಿಂಗಳು ಬಿಟ್ಟರೆ ಹುಳುಗಳಾಗಿ ಹಾಳಾಗುತ್ತಿದೆ. ಹೀಗಾಗಿ ಖರೀದಿ ಮಾಡಿದ ತಕ್ಷಣವೇ ಅದನ್ನು ಹಂಚಿಕೆ ಮಾಡಲು ಹೇಳಿದ್ದೇನೆ. ಕಾಳ ಸಂತೆಯಲ್ಲಿ ಅಕ್ಕಿ ಅಕ್ರಮ ಮಾರಾಟದ ಕುರಿತು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ.
ಹುಬ್ಬಳ್ಳಿ: ಕೇಂದ್ರ ಸರ್ಕಾರ ಎಲ್ಲದಕ್ಕೂ ಮಿತಿ ಹೇರಿದೆ. ಹೀಗಾಗಿ, ರಾಜ್ಯ ಸರ್ಕಾರ 17 ಲಕ್ಷ ಹೆಚ್ಚುವರಿ ಕಾರ್ಡ್‌ಗಳಿಗೆ ಆಹಾರ ಧಾನ್ಯ ವಿತರಿಸುತ್ತಿದೆ. ಆಹಾರ ಧಾನ್ಯ ಹೆಚ್ಚು ಮಾಡಿ ಎಂದು ಮನವಿ ಮಾಡಿದ್ದೇವೆ. ಈ ಕುರಿತು ಪರಿಶೀಲಿಸುವುದಾಗಿ ಕೇಂದ್ರ ತಿಳಿಸಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಆಗಬೇಕಿದೆ. ಮುಂದಿನ ದಿನಗಳಲ್ಲಿ ಪಡಿತರದಾರರಿಗೆ ಬೇಳೆ, ಅಡುಗೆ ಎಣ್ಣೆ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಜೋಳ ಖರೀದಿ ಮಾಡಿ ಮೂರು ತಿಂಗಳು ಬಿಟ್ಟರೆ ಹುಳುಗಳಾಗಿ ಹಾಳಾಗುತ್ತಿದೆ. ಹೀಗಾಗಿ ಖರೀದಿ ಮಾಡಿದ ತಕ್ಷಣವೇ ಅದನ್ನು ಹಂಚಿಕೆ ಮಾಡಲು ಹೇಳಿದ್ದೇನೆ. ಕಾಳ ಸಂತೆಯಲ್ಲಿ ಅಕ್ಕಿ ಅಕ್ರಮ ಮಾರಾಟದ ಕುರಿತು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದರು.ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಯಾವುದೇ ಕ್ರಾಂತಿ ಆಗಲ್ಲ. ಸರ್ಕಾರ ಸುಸೂತ್ರವಾಗಿ ನಡೆಯುತ್ತಿದೆ. ಸುರ್ಜೇವಾಲ ನಮ್ಮ ಫಫಾರ್ಮನ್ಸ್ ಕೇಳುತ್ತಿದ್ದಾರೆ ಎಂದ ಅವರು, ಹೈಕಮಾಂಡ್ ನಿರ್ಧಾರದ ಮೇಲೆ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಬದಲಾವಣೆ ಮಾಡುವ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ. ಸಿಎಂ ಬದಲಾವಣೆ ವಿಚಾರ ನಮ್ಮ ಮುಂದೆ ಇಲ್ಲ. ಸದ್ಯ ಸಿಎಂ, ಡಿಸಿಎಂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಒಳ ಮೀಸಲಾತಿಗೆ ಆಗ್ರಹಿಸಿ ಆಗಸ್ಟ್ 1ರಿಂದ ಬಿಜೆಪಿ ಹೋರಾಟ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಒಳ ಮೀಸಲಾತಿ ಜಾರಿ ಮಾಡಬೇಕಿತ್ತು, ಮಾಡಲಿಲ್ಲ. ಆದರೆ, ನಾವು ಆ ಕೆಲಸ ಮಾಡುತ್ತಿದ್ದೇವೆ. ಆದಷ್ಟು ಬೇಗನೆ ನಾಗಮೋಹನದಾಸ ವರದಿ ನೀಡುವುದಾಗಿ ಹೇಳಿದ್ದಾರೆ. ಅದನ್ನು ಕ್ಯಾಬಿನೆಟ್ ಮುಂದಿಟ್ಟು ಪಾಸ್ ಮಾಡುತ್ತೇವೆ. ಬಿಜೆಪಿಯವರ ಹೋರಾಟ ಅವಶ್ಯಕತೆ ಇಲ್ಲ. ಪ್ರತಿಭಟನೆಯಿಂದ ಅವರಿಗೆ ಯಾವುದೇ ಲಾಭ ಆಗಲ್ಲ ಎಂದರು.