ನಾಡು ನುಡಿ ರಕ್ಷಣೆಗೆ ಕಂಕಣಬದ್ಧ : ಭೀಮುನಾಯಕ

| Published : Oct 27 2024, 02:01 AM IST

ಸಾರಾಂಶ

Bracelet for the protection of Nadu Nudi: Bhimunayaka

-ಕನ್ನಡ ರಾಜ್ಯೋತ್ಸವ ಪ್ರಯುಕ್ತ ತಾಲೂಕು ಮತ್ತು ವಲಯ ಗ್ರಾಮ ಘಟಕ ಪದಾಧಿಕಾರಿಗಳ ಸಭೆ

ಕನ್ನಡಪ್ರಭ ವಾರ್ತೆ ವಡಗೇರಾ

ಕನ್ನಡ ಭಾಷೆ, ನಾಡು ನುಡಿ, ನೆಲ-ಜಲ ರಕ್ಷಣೆ ಹಾಗೂ ಅಭಿವೃದ್ಧಿ ಪರ ಹೋರಾಟಕ್ಕೆ ಪ್ರತಿಯೊಬ್ಬ ಕನ್ನಡಿಗರು ಕಂಕಣಬದ್ಧರಾಗಬೇಕು. ನೂತನ ತಾಲೂಕು ವಡಗೇರಾದಲ್ಲಿ ವಿವಿಧ ಕಚೇರಿಗಳು ಆರಂಭ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಎನ್. ಭೀಮುನಾಯಕ ಹೇಳಿದರು.

ಶಿವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಾಗೂ ತಾಲೂಕು ಮತ್ತು ವಲಯ ಗ್ರಾಮ ಘಟಕ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಂಘಟನೆಯ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು. ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಎಲ್ಲೆಡೆ ಆಚರಿಸುವಂತೆ ತಿಳಿಸಿದರು. ಕೋರ್ಟ್ ಆದೇಶವಿದ್ದರೂ ಕಂಪನಿ, ಬ್ಯಾಂಕ್, ವಾಣಿಜ್ಯ ಸಂಸ್ಥೆಯ ಕೇಂದ್ರಗಳಲ್ಲಿಯೂ ಇನ್ನಿತರ ಕಚೇರಿಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಸರಿಯಾಗಿ ಪಾಲನೆಯಾಗುತ್ತಿಲ್ಲ. ಅದರ ವಿರುದ್ಧವು ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ತಾಲೂಕು ಅಭಿವೃದ್ಧಿಗಾಗಿ ಮತ್ತು ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಕರವೇ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರು ಮಾತನಾಡಿ, ಗ್ರಾಮೀಣ ಭಾಗದ ಸಮಸ್ಯೆಗಳು ಹಾಗೂ ತಾಲೂಕು ಕಚೇರಿಗಳ ಆರಂಭಕ್ಕೆ ಕರವೇ ಎಂಥಹ ಹೋರಾಟಕ್ಕೂ ಸಿದ್ಧವಾಗಿದೆ. ಕನ್ನಡ ರಾಜ್ಯೋತ್ಸವವನ್ನು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಕನ್ನಡ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುವಂತೆ ಹೇಳಿದರು.

ವಲಯ ಆಯ್ಕೆ: ಬಸವರಾಜ ನಾಯಕ ಬುಸೇನಿ (ವಡಗೇರಾ ವಲಯ ಘಟಕ ಅಧ್ಯಕ್ಷ), ಮಾಳಪ್ಪ ಪರಸನಳ್ಳಿ (ಹಯ್ಯಾಳ ವಲಯ ಘಟಕ ಅಧ್ಯಕ್ಷ), ಜುಬಲಪ್ಪ ಕಟ್ಟಿಮನಿ (ಬೆಂಡೆಗೊಂಬಳಿ ವಲಯ ಘಟಕ ಅಧ್ಯಕ್ಷ), ಸಿದ್ದಪ್ಪ ಯಡ್ಡಳಿ (ಹಾಲಗೇರಾ ಗ್ರಾಮ ಘಟಕ ಅಧ್ಯಕ್ಷ), ವಿಶ್ವನಾಥರೆಡ್ಡಿ ರಾಮನಾಳ (ಗೋಡಿಹಾಳ ಗ್ರಾಮ ಘಟಕ ಅಧ್ಯಕ್ಷ), ವೆಂಕಟೇಶ ದೇವಕರ (ಹೊರಟೂರು ಗ್ರಾಮ ಘಟಕ ಅಧ್ಯಕ್ಷ), ಸಿದ್ದು ಕಾಡಂಗೇರಾ (ಹುಂಡೇಕಲ್ ಗ್ರಾಮ ಘಟಕ ಅಧ್ಯಕ್ಷ), ದೇವಿಂದ್ರಪ್ಪ ಕೋನಹಳ್ಳಿ (ಟಿ. ವಡಗೇರಾ ಗ್ರಾಮ ಘಟಕ ಅಧ್ಯಕ್ಷ), ಗೋವಿಂದ ಮಾಲಿಪಾಟೀಲ್ (ಹಂಚಿನಾಳ ಗ್ರಾಮ ಘಟಕ ಅಧ್ಯಕ್ಷ), ಮಲ್ಲು ಪಾಟೀಲ್ ಮೂಲಿಮನಿ (ಟೋಕಾಪುರ ಗ್ರಾಮ ಘಟಕ ಅಧ್ಯಕ್ಷ), ನಿಂಗಯ್ಯ ಎಂ. ನಸಲಾಯಿ (ಬಸವಂತಪುರ ಗ್ರಾಮ ಘಟಕ ಅಧ್ಯಕ್ಷ), ಬಸವರಾಜ ನಾಯ್ಕೋಡಿ (ಮದರಕಲ್ ಗ್ರಾಮ ಘಟಕ ಅಧ್ಯಕ್ಷ), ಮಲ್ಲೇಶ ದೊಡ್ಡಮನಿ (ಯಕ್ಷಂತಿ ಗ್ರಾಮ ಘಟಕ ಅಧ್ಯಕ್ಷ), ಮಹೇಶ ತಳವಾರ (ಮಾಲಹಳ್ಳಿ ಗ್ರಾಮ ಘಟಕ ಅಧ್ಯಕ್ಷ), ನಿಂಗು ಮುನಮುಟಿಗಿ (ವಲಯ ಉಪಾಧ್ಯಕ್ಷರು ವಡಗೇರಾ) ಅವರುಗಳನ್ನು ನೇಮಕ ಮಾಡಲಾಯಿತು.

ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತೀಕುಣಿ, ವಿಶ್ವಾರಾಧ್ಯ ದಿಮ್ಮಿ, ಸಂತೋಷ್ ನಿರ್ಮಲಕರ್, ವಿಶ್ವರಾಜ ಹೊನಗೇರಾ, ಚೌಡಯ್ಯ ಬಾವುರ್, ಹಣಮಂತ ತೆಕರಾಳ, ಸುರೇಶ್ ಬೆಳಗುಂದಿ, ಸಿದ್ದು ಪೂಜಾರಿ, ಮಲ್ಲು ಜಡಿ, ಶ್ರೀನಿವಾಸ್ ಮಡಿವಾಳ, ಪೀರಸಾಬ್ ಮರಡಿ, ಶಿವರಾಜ್ ನಾಡಗೌಡ‌, ಅಯ್ಯಪ್ಪ ಹಾಲಗೇರಾ ಇದ್ದರು.

-------

26ವೈಡಿಆರ್2: ವಡಗೇರಾ ಪಟ್ಟಣದ ಶಿವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಾಗೂ ತಾಲೂಕು ಮತ್ತು ವಲಯ ಗ್ರಾಮ ಘಟಕ ಪದಾಧಿಕಾರಿಗಳ ಸಭೆ ಜರುಗಿತು.