ಈಶ್ವರನ ಸಂದೇಶ ಹರಡುತ್ತಿರುವ ಬ್ರಹ್ಮಕುಮಾರಿ ಸಂಸ್ಥೆ: ಬ್ರಹ್ಮಕುಮಾರಿ ಸ್ನೇಹಕ್ಕ

| Published : Jan 21 2025, 12:31 AM IST

ಈಶ್ವರನ ಸಂದೇಶ ಹರಡುತ್ತಿರುವ ಬ್ರಹ್ಮಕುಮಾರಿ ಸಂಸ್ಥೆ: ಬ್ರಹ್ಮಕುಮಾರಿ ಸ್ನೇಹಕ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಈಶ್ವರನ ಸಂದೇಶವನ್ನು ಹರಡಲು ಮೂಲ ಕಾರಣೀಭೂತರಾಗಿದ್ದಾರೆ. ಅವರ ಜೀವನ ಚರಿತ್ರೆ ಮಾನುವಕುಲ ಕೋಟಿಗೆ ಉದಾಹರಣೆಯಾಗಿ ಅನುಕರಣೀಯವಾಗಿದೆ ಎಂದು ಇಲ್ಲಿನ ಪ್ರ.ಬ್ರ.ಈ.ವಿ.ವಿ. ಸಂಸ್ಥೆಯ ಸಂಚಾಲಕಿ ಬ್ರಹ್ಮಕುಮಾರಿ ಸ್ನೇಹಕ್ಕ ತಿಳಿಸಿದರು. ಶಿಕಾರಿಪುರದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವ ಶಾಂತಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವ ಶಾಂತಿ ದಿನ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪಿತಾಶ್ರೀ ಬ್ರಹ್ಮಾರವರ ತ್ಯಾಗ, ತಪಸ್ಸಿನಿಂದಲೇ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾ ಸಂಸ್ಥೆಯು ವಿಶ್ವದಾದ್ಯಂತ 147 ರಾಷ್ಟ್ರಗಳಲ್ಲಿ ಸೇವೆ ವಿಸ್ತಾರಗೊಳ್ಳಲು ಈಶ್ವರನ ಸಂದೇಶವನ್ನು ಹರಡಲು ಮೂಲ ಕಾರಣೀಭೂತರಾಗಿದ್ದಾರೆ. ಅವರ ಜೀವನ ಚರಿತ್ರೆ ಮಾನುವಕುಲ ಕೋಟಿಗೆ ಉದಾಹರಣೆಯಾಗಿ ಅನುಕರಣೀಯವಾಗಿದೆ ಎಂದು ಇಲ್ಲಿನ ಪ್ರ.ಬ್ರ.ಈ.ವಿ.ವಿ. ಸಂಸ್ಥೆಯ ಸಂಚಾಲಕಿ ಬ್ರಹ್ಮಕುಮಾರಿ ಸ್ನೇಹಕ್ಕ ತಿಳಿಸಿದರು.

ನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವ ಶಾಂತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಿತಾಶ್ರೀ ಪ್ರಜಾಪಿತ ಬ್ರಹ್ಮಾರವರ 56ನೇ ಪುಣ್ಯಸ್ಮತಿ ದಿನದ ಆಚರಣೆಯಾಗಿದ್ದು, ಪಿತಾಶ್ರೀ ಬ್ರಹ್ಮ ತಂದೆಯವರು ಸಂಸ್ಥೆಯ ಸ್ಥಾಪನೆಯಲ್ಲಿ ಈಶ್ವರನ ವಿಶ್ವ ಕಲ್ಯಾಣದ ಕಾರ್ಯಕ್ಕೆ ತನು ಮನ ಧನದಿಂದ ಸರ್ವಸ್ವವನ್ನು ಸಮರ್ಪಿಸಿದ ತ್ಯಾಗಿ ತಪಸ್ವಿಯಾಗಿದ್ದಾರೆ ಎಂದರು.

ಬ್ರಹ್ಮರವರು 1969ರ ಜ.18 ರಂದು ಸಂಪನ್ನ ಸಂಪೂರ್ಣಗೊಂಡು ಅವ್ಯಕ್ತರಾಗಿದ್ದು ಈ ದಿನ ವಿಶ್ವದಾದ್ಯಂತ ಮೌಂಟ್ ಅಬು ಸಹಿತ ಎಲ್ಲಾ ಶಾಖೆ ಕೇಂದ್ರಗಳಲ್ಲಿ ವಿಶ್ವಶಾಂತಿ ದಿನವೆಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಶೈಲಾ ಯೋಗೇಶ್ ಮಡ್ಡಿ, ಬಾಪೂಜಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಪಾಪಯ್ಯ, ವೀರಶೈವ ಮಹಾಸಭಾ ತಾ. ಅಧ್ಯಕ್ಷ ಸುಧೀರ್, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ನಂಜುಂಡಿ,ಕದಳಿ ವೇದಿಕೆ ಅಧ್ಯಕ್ಷೆ ಕಾಂಚನ ಕುಮಾರ್, ಜ್ಞಾನೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಭಾಗ್ಯ ರಾಯ್ಕರ್, ಅಕ್ಕಮಹಾದೇವಿ ಪ್ರತಿಷ್ಠಾನದ ಅಧ್ಯಕ್ಷೆ ರೂಪ ಹಾಲೇಶ್, ಸತ್ಯಕ್ಕ ಸಹಕಾರಿ ಸಂಘದ ಅಧ್ಯಕ್ಷೆ ಮಮತ, ಉಪಾಧ್ಯಕ್ಷೆ ಸುನೀತಾ, ರಾಜೇಶ್ವರಿ, ಶಿವಯ್ಯ ಶಾಸ್ತ್ರಿ, ನಿವೃತ್ತ ಪಿಎಸ್ಐ ಕೋಮಲಾಚಾರ್, ರಾಜಶೇಖರ್ ಗಿರ್ಜಿ ಮತ್ತು ಸಂಸ್ಥೆಯ ಪರಿವಾರದವರು ಉಪಸ್ಥಿತರಿದ್ದರು.